Gangavathi
ಗಂಗಾವತಿ: ಕರ್ನಾಟಕ ಅಲ್ಪ ಸಂಖ್ಯಾತ ಅಭಿವದ್ಧಿ ನಿಗಮದ ಸ್ವಾವಲಂಬನೆ ಯೋಜನೆಯ ಅಡಿಯಲ್ಲಿ ಗಂಗಾವತಿ ವಿಧಾನಸಭಾ ವ್ಯಾಪ್ತಿಯ 2011-12ನೇ ಸಾಲಿನಲ್ಲಿ ಆಯ್ಕೆಯಾದ ಫಲಾನುಭವಿಗಳಿಗೆ ಶಾಸಕ ಪರಣ್ಣ ಮುನವಳ್ಳಿ ಇತ್ತೀಚೆಗೆ 35 ಲಕ್ಷ ರೂಪಾಯಿ ಮೊತ್ತದ ಸಹಾಯಧನದ ಚೆಕ್ ವಿತರಿಸಿದರು.
ಶಾಸಕ ಮುನವಳ್ಳಿ, ಸ್ವಾವಲಂಬಿ ಯೋಜನೆಯಲ್ಲಿ 35 ಫಲಾನುಭವಿಗೆ ತಲಾ ರೂ. 1 ಲಕ್ಷದಂತೆ ಒಟ್ಟು 35 ಲಕ್ಷ ಮೊತ್ತದ ಸಹಾಯಧನ ಶ್ರಮಶಕ್ತಿ ಯೋಜನೆಯಲ್ಲಿ ನೀಡಲಾಗುತ್ತಿದೆ. 30 ಫಲಾನುಭವಿಗೆ ತಲಾ ರೂ, 15 ಸಾವಿರದಂತೆ ರೂ. 4 ಲಕ್ಷ, ಮೈಕ್ರೋ ಯೋಜನೆಯಲ್ಲಿ 70 ಜನ ಫಲಾನುಭವಿಗಳಿಗೆ ಹಣ ವಿತರಿಸಲಾಗುತ್ತಿದೆ ಎಂದರು.
ರೂ, 10 ಸಾವಿರ ದಂತೆ 7 ಲಕ್ಷ ಬಡ ಕಷಿ ಕಾರ್ಮಿಕರಿಗೆ ಕೊಳವೆ ಬಾವಿ, ಭೂರಹಿತ ಕಷಿ ಕಾರ್ಮಿಕರಿಗೆ ಭೂಮಿ ಒದಗಿಸುವ ದೃಷ್ಟಿಯಿಂದ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ಜರುಗುತ್ತಿದೆ. ಅರಿವು ಯೋಜನೆ ಅಡಿಯಲ್ಲಿ ಅರ್ಹ ವಿದ್ಯಾರ್ಥಿಗಳಿಗೆ ಗರಿಷ್ಠ ರೂ, 55 ಸಾವಿರ ಸಾಲ ಸೌಲಭ್ಯವಿದೆ ಎಂದರು.
ವಿವಿಧ ಗುಂಪು ಶ್ರಮ ಮಹಿಳಾ ಸ್ವಸಹಾಯ ಗುಂಪಿಗೆ ರೂ. 2 ಲಕ್ಷ, ಇಮಾಮ್ ಖಾಸಿಂ ಸ್ವ-ಸಹಾಯ ಮಹಿಳಾ ಗುಂಪಿಗೆ ತಲಾ ರೂ, 20 ಸಾವಿರ ಬಿ.ಬಿ.ಫಾತಿಮಾ ಸ್ವ-ಸಹಾಯ ಗುಂಪು ರೂ. 15 ಸಾವಿರ ಸೇರಿದಂತೆ ಹೆಚ್ಚುವರಿ 9 ಸ್ವ-ಸಹಾಯ ಗುಂಪುಗಳಿಗೆ ರೂ, 70 ಲಕ್ಷ ಅನುದಾನ ನೀಡುವಂತೆ ಪ್ರಸ್ತಾವನೆ ಕಳುಹಿಸಲಾಗಿದೆ ಎಂದರು.
ಬಿಜೆಪಿ ಸರ್ಕಾರ ಅಲ್ಪ ಸಂಖ್ಯಾತರ ಏಳ್ಗೆಗೆ ಶ್ರಮಿಸುತ್ತಿದೆ. ಈ ಹಿಂದೆ ಯಾವ ಸರ್ಕಾರ ನೀಡದಷ್ಟು ಅನುದಾನ, ಸಾಲ ಸೌಲಭ್ಯ ಅಲ್ಪ ಸಂಖ್ಯಾತರ ಅಭಿವದ್ಧಿ ನಿಗಮಕ್ಕೆ ನೀಡುತ್ತಿದೆ. ಫಲಾನುಭವಿಗಳು ಯೋಜನೆಯ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು. ನಿಗಮದ ಜಿಲ್ಲಾ ಅಧಿಕಾರಿ (ಎಂ.ಡಿ.) ಜಾಕೀರ ಹುಸೇನ, ಮುಖಂಡ ಮೌಲಾಸಾಬ, ಎಸ್.ಎಸ್.ಹೈದರ ಅಲಿ ಇದ್ದರು.
0 comments:
Post a Comment