PLEASE LOGIN TO KANNADANET.COM FOR REGULAR NEWS-UPDATES



ಬೆಂಗಳೂರು, ನ. : ಜಾತಿ, ಮತವೆಂದು ನಾವು ನಮ್ಮ ಮಧ್ಯೆ ಹೋರಾಡುವುದನ್ನು ನಿಲ್ಲಿಸಿ, ನಾವೆಲ್ಲರೂ ಒಂದೇ ಎಂಬುದನ್ನು ಅರಿತುಕೊಂಡು ಸಾಗಿದರೆ ಸಮಾಜದ ಉನ್ನತಿ ಸಾಧ್ಯ ಎಂದು ಮುಖ್ಯಮಂತ್ರಿ ಸದಾನಂದ ಗೌಡ ಹೇಳಿದ್ದಾರೆ.

ನಗರದ ರವೀಂದ್ರ ಕಲಾಕ್ಷೇತ್ರದಲ್ಲಿಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ಕನಕದಾಸ ಜಯಂತ್ಯುತ್ಸವ ಮತ್ತು ಕನಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು. ಈ ಹಿನ್ನೆಲೆಯಲ್ಲಿ ಕುಲಕುಲ ಕುಲವೆಂದು ಹೊಡೆದಾಡದಿರಿ ಎಂದು ಕನಕದಾಸ ಈ ಹಿಂದೆಯೇ ಹೇಳಿದ್ದಾರೆ. ಅವರ ಮಾತು, ಚಿಂತನೆ ಇಂದಿಗೂ ಪ್ರಸ್ತುತ ಎಂದರು.

ಸಮಾಜದಲ್ಲಿ ವಿದ್ಯಾವಂತರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಅವರ ಮನಸ್ಸಿನಲ್ಲಿಯೂ ಜಾತಿಯ ಕಲ್ಪನೆ ಹೆಚ್ಚುತ್ತಿದೆ. ಜಾತಿಯ ಕಲ್ಪನೆಯಿಂದ ಹೊರಬರಬೇಕು. ಆಗ ಸಮಾಜದ ಅಭಿವೃದ್ಧಿಯ ಜೊತೆಗೆ ಮಾನವನ ಅಭಿವೃದ್ಧಿ ಕೂಡಾ ಆಗುತ್ತದೆ ಎಂದರು.

ಕನಕದಾಸರ ಚಿಂತನೆ, ಕೀರ್ತನೆ ಯನ್ನು ಅನುಷ್ಠಾನಗೊಳಿಸುವಂತೆ ಕರೆ ನೀಡಿದ ಸಿಎಂ, ಇಂತಹ ಮಹಾನ್ ವ್ಯಕ್ತಿಗಳು ಸಮಾಜದ ಉನ್ನತಿಗಾಗಿ ಶ್ರಮಿಸಿದವರಾಗಿದ್ದಾರೆ ಎಂದರು.

ಕನಕದಾಸ ಜಯಂತಿಗೆ ಸರಕಾರ ರಜೆ ಘೋಷಿಸಿರುವುದು ಅವರ ಚಿಂತನೆ, ಕೀರ್ತನೆ ಕುರಿತು ಮನವರಿಕೆ ಮಾಡಿಕೊಳ್ಳು ವುದಕ್ಕಾಗಿ. ಆದರೆ ಕನಕ ದಾಸರ ಬಗ್ಗೆ ಹಮ್ಮಿಕೊಂಡಿರುವ ಕಾರ್ಯ ಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಬಾರದಿರುವುದರ ಕುರಿತು ನಾವೆ ನಮ್ಮಲ್ಲಿ ಪ್ರಶ್ನಿಸಬೇಕೆಂದು ಸದಾನಂದ ಗೌಡ ಹೇಳಿದರು.

ಕಾರ್ಯಕ್ರಮದಲ್ಲಿ 2009ನೆ ಸಾಲಿನ ಕನಕಶ್ರೀ ಪ್ರಶಸ್ತಿಯನ್ನು ಡಾ.ಟಿ.ಎನ್.ನಾಗರತ್ನ, 2010ರ ಪ್ರಶಸ್ತಿಯನ್ನು ಎಚ್.ಕೆ. ಲಕ್ಕಪ್ಪಗೌಡ ರಿಗೆ ಹಾಗೂ 2011ರ ಪ್ರಶಸ್ತಿ ಯನ್ನು ಪ್ರೊ.ಜ್ಯೋತಿ ವಸೂರುರಿಗೆ ನೀಡಿ ಮುಖ್ಯಮಂತ್ರಿ ಸದಾನಂದ ಗೌಡ ಅಭಿನಂದಿಸಿದರು. 

ಕಾರ್ಯಕ್ರಮದಲ್ಲಿ ಸಚಿವ ಗೋವಿಂದ ಕಾರಜೋಳ, ಶಾಸಕ ಹೇಮಚಂದ್ರ ಸಾಗರ್, ವಿಶ್ವನಾಥ್, ಇಲಾಖೆಯ ಕಾರ್ಯದರ್ಶಿ ಬಸವರಾಜ್, ಆಯುಕ್ತ ಮನುಬಳಿಗಾರ್ ಹಾಜರಿದ್ದರು.

Advertisement

0 comments:

Post a Comment

 
Top