ಕೊಪ್ಪಳ ೨೪ : ತಾಲೂಕಿನ ಬೋಚನಹಳ್ಳಿಯಲ್ಲಿ ಗುರುವಾರದಂದು ಗ್ರಾಮ ಪಂಚಾಯತಿ ಮತ್ತು ಜಿಲ್ಲಾ ಮಕ್ಕಳ ಸಂರಕ್ಷಣಾ ಯೋಜನೆ ಇವರ ಸಂಯುಕ್ತ ಆಶ್ರಯದಲ್ಲಿ ಮಕ್ಕಳ ಹಕ್ಕುಗಳ ಗ್ರಾಮ ಸಭೆಯನ್ನು ಏರ್ಪಡಿಸಲಾಯಿತು.
ಬೋಚನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಪ್ರತಿಯೊಂದು ಶಾಲೆಯಿಂದ ಮಕ್ಕಳು ಗ್ರಾಮ ಸಭೆಯಲ್ಲಿ ಭಾಗವಹಿಸಿದ್ದರು. ಮಕ್ಕಳು ತಮ್ಮ ತಮ್ಮ ಸಮಸ್ಯೆಗಳನ್ನು ಬೀಟಿಯ ಮೂಲಕ ದೂರು ಪೆಟ್ಟಿಗೆಯಲ್ಲಿ ಬರೆದು ಹಾಕಿದರು ಸ್ಥಳಿಯ ಗ್ರಾಮ ಪಂಚಾಯತಿ ಅಧ್ಯಕ್ಷರು ಮತ್ತು ಸದಸ್ಯರು ಹಾಗೂ ಗ್ರಾಮ ಪಂಚಾಯತಿ ಕಾಯದರ್ಶಿಗಳು ಮಕ್ಕಳ ಸಮಸ್ಯೆಗಳನ್ನು ಓದಿ ಆ ಸಮಸ್ಯೆಗಳಿಗೆ ಉತ್ತರ ನೀಡಿದರು. ಈ ಒಂದು ಮಕ್ಕಳ ಹಕ್ಕುಗಳ ಗ್ರಾಮ ಸಭೆಯಲ್ಲಿ ಅಳವಂಡಿ ಪೋಲಿಸ್ ಠಾಣೆಯ ಅಧಿಕಾಇಗಳಾದದ ಎ.ಎಸ್.ಐ ರಾಮನಾಯಕ ಹಾಗೂ ಪೋಲಿಸ್ ಸಿಬ್ಬಂದಿಯವರು ಮತ್ತು ಆರೋಗ್ಯ ಸಹಾಯಕಿಯರು ಅಂಗನವಾಡಿ ಕಾರ್ಯಕರ್ತೆಯರು ಎಲ್ಲಾ ಶಾಲೆಯ ಶಿಕ್ಷಕವೃಂದದವರು ಮತ್ತು ಎಸ್.ಡಿ.ಎಂ.ಸಿ ಅಧ್ಯಕ್ಷರು ಮತ್ತು ಸದಸ್ಯರು ಹಾಜರಿದ್ದರು. ಮಕ್ಕಳ ಸಂರಕ್ಷಣಾ ಯೋಜನೆಯ ತಾಲೂಕ ಸಂಯೋಜಕರಾದ ಶ್ರೀ ಸಂಗಣ್ಣ ಎ. ಸಂಗಾಪೂರ ಮಕ್ಕಳ ಹಕ್ಕುಗಳ ಬಗ್ಗೆ ಭಾಲಕಾಮಿಕತೆ ಭಾಲ್ಯ ವಿವಾಹ ದಿಂದಾಗುವ ದುಷ್ಪರಿಣಾಮಗಳ ಬಗ್ಗೆ ಮತ್ತು ಮಕ್ಕಳಿಗಾಗಿತಕ್ಕಂತ ಮಕ್ಕಳ ಸಹಾಯವಾಣಿ ಬಗ್ಗೆ ಸಂಕ್ಷೀಪ್ತ ವಿವರಣೆ ನೀಡಿದರು. ಬೇಟಗೇರಿ ಸಮುದಾಯ ಸಂಘಟಕರಾದ ವಿರೇಶ ಲಕ್ಷಾಣಿ ಕಾರ್ಯಕ್ರಮ ನಿರೂಪಿಸಿದರು. ಊರಿನ ಮುಖಂಡರು ಮಹಿಳೆಯರು ಉಪಸ್ಥಿತರಿದ್ದರು.
0 comments:
Post a Comment