ಕೊಪ್ಪಳ ೨೪, ಕೊಪ್ಪಳ ತಾಲೂಕಿನಲ್ಲಿ ಕ್ಷೇತ್ರಶಿಕ್ಷಣಾಧಿಕಾರಿಗಳ ಕಾರ್ಯಾಲಯದಿಂದ ಪ್ರೌಢಶಾಲಾ ಸಹ ಶಿಕ್ಷಕರಿಗೆ ವಿಷಯವಾರು ನೀಲನಕ್ಷೆ ಆಧಾರಿತ ಪ್ರಶ್ನೆ ಪತ್ರಿಕೆ ತಯಾರಿಸುವ ಕೌಶಲ್ಯ ಬೆಳೆಸುವ ಕುರಿತಂತೆ ಕಾರ್ಯಾಗಾರಗಳನ್ನು ಆಯೋಜಿಸಲಾಗಿತ್ತು. ಸರಕಾರಿ ಪ್ರೌಢ ಶಾಲೆ ಹೊರತಟ್ನಾಳದಲ್ಲಿ ಸಮಾಜ ವಿಜ್ಞಾನ ಕಾರ್ಯಾಗಾರವನ್ನು ಏರ್ಪಡಿಸಲಾಗಿತ್ತು. ಅಧ್ಯಕ್ಷತೆಯನ್ನು ಬಿ. ಎಂ. ಸವದತ್ತಿ ಮುಖ್ಯೋಪಾದ್ಯಾಯರು ವಹಿಸಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ಸೋಮಶಖರ ಚ. ಹರ್ತಿ ಶಿಕ್ಷಣ ಸಂಯೋಜಕರು. ಉದ್ಘಾಟಿಸಿ ಮಾತನಾಡಿ ಶಾಲಾ ಹಂತದಲ್ಲಿ ಪರೀಕ್ಷೇಗಳನ್ನು ನಡೆಸುವಾಗ ಪ್ರಶ್ನೇ ಪತ್ರಿಕೆಗಳನ್ನು ಶಿಕ್ಷಕರೆ ತಯಾರಿಸಿಕೊಳ್ಳುವ ಇಲಾಖೆ ಆದೆಶದನ್ವಯ ಮತ್ತು ಶಿಕ್ಷಕರು ತಮ್ಮ ಬೋಧನೆಯಲ್ಲಿ ಹೆಚ್ಚಿನ ಸಾಮರ್ಥ್ಯವನ್ನು ಅಳವಡಿಸಿಕೊಳ್ಳಲು ಪ್ರಶ್ನೇ ಪತ್ರಕೆ ತಯಾರಿಸುವ ಕೌಶಲ್ಯ ಅವಶ್ಯವಾಗಿದೆ. ಇಗಾಗಲೆ ಎಲ್ಲ ವಿಷಂiiಗಳ ಮೇಲೆ ಕಾಯಾಗಾರಗಳನ್ನು ನಡೆಸಲಾಗಿದೆ. ಇದು ೧೦ ನೇ ತರಗತಿಯ ಉತ್ತಮ ಫಲಿತಾಂಶ ಪಡೆಯಲು ಸಹಕಾರಿಯಾಗಲಿದೆ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ವಿಷಯ ಪರಿವಿಕ್ಷಕರಾಗಿ ಸೇವೆ ಸಲ್ಲಿಸಿ ಇತ್ತೀಚೆಗೆ ಸೇವೆಯಿಮದ ನಿವೃತ್ತಿಗೊಂಡ ನಾಗಪ್ಪ ಬಳಿಗಾರ ಸಮಾಜ ವಿಜ್ಞಾನ ವಿಷಯ ಪರೀವಿಕ್ಷಕರನ್ನು ಸಮಾಜ ವಿಜ್ಞಾನ ಸಂಘದಿಂದ ಸನ್ಮಾನಿಸಲಾಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ವಿರಣ್ಣ ಮಟ್ಟಿ, ಬೆಟಗೇರಿ, ಹನಮಂತಪ್ಪ ಚಲವಾದಿ ಬಿಸರಳ್ಳಿ ತರಬೇತಿ ನೀಡಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ನಾಗಪ್ಪ ಬಳಿಗಾರವರು ಶಿಕ್ಷಕರ ಉತ್ತಮ ಬೋಧನೆಯಿಂದಾಗಿ ಜಿಲ್ಲೆಯಲ್ಲಿ ಕಳೆದ ೨೦೧೦-೧೧ ನೇ ಸಾಲಿನ ಫಲಿತಾಂಸ ೨೦ ನೆ ಸ್ಥನಕ್ಕೆ ಬಂದಿದೆ. ೨೦೧೧-೧೨ ನೇ ಸಾಲಿನಲ್ಲಿ ೧೦ ನೇಸ್ಥಾನಕ್ಕೆ ಬರುವಂತೆ ಬೋದನೆ ಮಾಡಲು ಕರೆ ನೀಡಿದರು. ಇದೇ ಸಂದರ್ಭದಲ್ಲಿ ತಾಲೂಕಿನಲ್ಲಿ ಸಮಾಜ ವಿಜ್ಞಾನ ವಿಷಯದಲ್ಲಿ ೨೦೧೧-೧೨ ರಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗೆ ಡಿ. ಹೆಚ್. ನದಾಫ್ ಮುಖ್ಯೋಪಾಧಯರು ಕೂಡಲಸಂಗಮನಾಥ ಪ್ರೌಢ ಶಾಲೆ ಕುಣಿಕೇರಿ ಸಮಾಜ ವಿಜ್ಞಾನ ಸಂಘದ ಅಧ್ಯಕ್ಷರಾದ ಸೋಮರಡ್ಡಿ ಡಂಬ್ರಳ್ಳಿಯವರಿಗೆ ೧೦೦೧ ರೂ ದೇಣಿಗೆ ನೀಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಬಿ.ಎಂ ಸವದತ್ತಿ ಮುಖ್ಯೋಪಾಧಾಯರು ಕಾರ್ಯಗಾರಗಳಿಂದ ಶಿಕ್ಷಕರ ಬೋಧನಾ ಸಾಮರ್ಥ್ಯ ಹೆಚ್ಚುತ್ತದೆ ಎಂದರು. ಕಾರ್ಯಾಗಾರದಲ್ಲಿ ರಾಮಣ್ಣ ಬಾರಕೇರ, ವೀರಣ್ಣ ಕುಂಬಾರ, ಸೋಮರಡ್ಡಿ ಡಂಬರಳ್ಳಿ, ಈರಣ್ಣ ವಾಲಿ, ಹನಮಂತಪ್ಪ ಚಲವಾದಿ, ಉಪಸ್ಥಿತರಿದ್ದರು. ಬಸವರಾಜ ದೈಹಿಕ ಶಿಕ್ಷಕರು ನಿರೂಪಿಸಿದರು. ಗುರುರಾಜ ಚಕ್ರಸಾಲಿ ವಂದಿಸಿದರು.
0 comments:
Post a Comment