ನವದೆಹಲಿ: ರಾಜಧಾನಿ ದೆಹಲಿಯಲ್ಲಿ ಪ್ರಭಾವೀ ವ್ಯಕ್ತಿಗಳಿಗೇ ಭದ್ರತೆ ಇಲ್ಲ ಎಂಬುದಕ್ಕೆ ಗುರುವಾರ ಮತ್ತೊಂದು ನಿದರ್ಶನ ನಡೆಯಿತು. ಕೇಂದ್ರ ಕೃಷಿ ಸಚಿವ ಶರದ್ ಪವಾರ್ ಅವರಿಗೇ ಯುವಕನೊಬ್ಬ ಕಪಾಳಕ್ಕೆ ಬಾರಿಸುವ ಮೂಲಕ ಗಣ್ಯರಿಗೆ ಭದ್ರತೆ ಇಲ್ಲ ಎಂಬುದಕ್ಕೆ ಮತ್ತೊಂದು ಘಟನೆ ಸಾಕ್ಷಿಯಾಯಿತು.
ರಾಜಧಾನಿಯ ಹೃದಯಭಾಗವಾದ ಎನ್‌ಡಿಎಂಸಿಯಲ್ಲಿ ನಡೆದ ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಶರದ್ ಪವಾರ್ ಅವರಿಗೆ ಹರ್ವಿಂದರ್ ಸಿಂಗ್ ಎಂದು ಗುರುತಿಸಲಾಗಿರುವ ಯುವಕ ಕಪಾಳಮೊಕ್ಷ ಮಾಡಿದ್ದಾನೆ.
ಮೂಲತಹ ರೋಹಿಣಿಯವನಾಗಿರುವ ಹರ್ವಿಂದರ್ ಪಿಎಸ್‌ಯು ಕಂಪನಿಯ ಇಫ್ಕೋ ಆಯೋಜಿ ಸಿದ್ದ ಕಾರ್ಯಕ್ರಮದ ಸಂದರ್ಭದಲ್ಲಿ ಪ್ರಕ್ಷಕರ ಗುಂಪಿನಲ್ಲಿದ್ದ ಎನ್ನಲಾಗಿದ್ದು, ಪವಾರ್ ಅವರಿಗೆ ಒಂದು ಬಾರಿ ಬಾರಿಸಿದ ನಂತರವೂ ಸಿಂಗ್ ಹೊಡೆಯಲು ಯತ್ನಿಸುತ್ತಿದ್ದ ಎಂದು ವರದಿಯಾಗಿದೆ. ನಂತರ ತಮ್ಮಷ್ಟಕ್ಕೆ ತಾವೇ ಸಾವರಿಸಿಕೊಂಡ ಪವಾರ್ ತಮ್ಮ ಭದ್ರತಾ ಸಿಬ್ಬಂದಿಯೊಂದಿಗೆ ತೆರಳಿದರು ಎನ್ನಲಾಗಿದೆ.
ಲಂಚ ಪಡೆದ ಆರೋಪದಲ್ಲಿ ಜೈಲು ಶಿಕ್ಷೆಗೆ ಒಳಗಾದ ಮಾಜಿ ಸಂಪರ್ಕ ಖಾತೆ ಸಚಿವ ಸುಖರಾಮ್ ಅವರ ಮೇಲೆ ನಾಲ್ಕು ದಿನಗಳ ಹಿಂದೆ ಹಲ್ಲೆ ನಡೆಸಿದ ವ್ಯಕ್ತಿಯೇ ಗುರುವಾರ ಕೃಷಿ ಸಚಿವ ಶರದ್ ಪವಾರ್ ಅವರಿಗೆ ಕಪಾಳ ಮೋಕ್ಷ ಮಾಡಿದ್ದಾನೆ.
ಜನ ಸಾಮಾನ್ಯರ ಬದುಕನ್ನು ಕಂಗೆಡಿಸುತ್ತಿರುವ ಬೆಲೆ ಏರಿಕೆ ಮತ್ತು ಭ್ರಷ್ಟಾಚಾರಿ ರಾಜಕಾರಣಿ ಗಳಿಂದ ರೋಸಿ ಹೋಗಿ ಹತಾಶೆಯಿಂದ ಹೀಗೆ ಮಾಡಿದೆ ಎಂದು ಕೇಂದ್ರದ ಕೃಷಿ ಸಚಿವ ಶರದ್ ಪವಾರ್ ಅವರ ಮೇಲೆ ಹಲ್ಲೆ ನಡೆಸಿದ ಆ ವ್ಯಕ್ತಿ ಹೇಳಿಕೊಂಡಿದ್ದಾನೆ.
ಪವಾರ್‌ಗೆ ಕಪಾಳ ಮೋಕ್ಷ ಮಾಡಿದ ತಕ್ಷಣ ಭದ್ರತಾ ಸಿಬ್ಬಂದಿ ಮತ್ತು ಇತರರು ಯುವಕನನ್ನು ಹಿಡಿಕೊಂಡಿದ್ದಾರೆ. ಆದರೆ ಆತ ತನ್ನ ಪಾಕೆಟ್‌ನಲ್ಲಿದ್ದ ಪುಟ್ಟ ಚಾಕುವೊಂದನ್ನು ಹಿಡಿದು ’ಎಲ್ಲರೂ ಕಳ್ಳರೇ ನಾನು ಅವರನ್ನು ಕೊಲ್ಲಬೇಕು’ ಎಂದು ಚೀರುತ್ತಿದ್ದ ಎನ್ನಲಾಗಿದೆ.
ಹಣದುಬ್ಬರದ ಏರಿಕೆ ಮತ್ತು ಬೆಲೆ ಏರಿಕೆಯನ್ನು ತಡೆಗಟ್ಟುವಲ್ಲಿ ಸರ್ಕಾರ ವಿಫಲವಾಗಿರುವ ಹಿನ್ನೆಲೆಯಲ್ಲಿ ಸಚಿವರ ಮೇಲೆ ಆತ ಕೋಪಗೊಂಡಿದ್ದ ಎನ್ನಲಾಗಿದೆ. ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಿರುವ ಅಣ್ಣಾ ಹಜಾರೆ ಅವರ ಬೆಂಬಲಿಗ ಎನ್ನಲಾಗಿದೆ. ಆದರೆ, ಲೋಕಪಾಲ ಮಸೂದೆಯನ್ನು ಜಾರಿಗೆ ತರಲು ಗಾಂಧಿವಾದಿ ಅನುಸರಿಸುತ್ತಿರುವ ದಾರಿಯಲ್ಲಿ ಆತನಿಗೆ ನಂಬಿಕೆ ಇಲ್ಲವಂತೆ.
ಆದರೆ, ಕೇಂದ್ರ ಕ್ಯಾಬಿನೆಟ್ ಸಚಿವರಿಗೆ ಸೂಕ್ತ ಭದ್ರತೆ ಇಲ್ಲ ಎಂಬುದಕ್ಕೆ ಘಟನೆ ಸಾಕ್ಷಿಯಾಗುವ ಮೂಲ ಹೊಸ ಪ್ರಶ್ನೆಯನ್ನು ಹುಟ್ಟು ಹಾಕಿತು. ಘಟನೆಯ ನಂತರ ವಿಚಾರಣೆ ನಡೆಸಲು ಹರ್ವಿಂದರ್‌ನನ್ನು ಪೊಲೀಸರು ಕರೆದುಕೊಂಡು ಹೋದರು. Sharadh pawar
0 comments:
Post a Comment