ಕೋಲ್ಕತ್ತ,ನವದೆಹಲಿ (ಪಿಟಿಐ):ಪಶ್ಚಿಮ ಬಂಗಾಳದ ಪಶ್ಚಿಮ ಮಿಡ್ನಾಪುರ ಜಿಲ್ಲೆಯ ಅರಣ್ಯದಲ್ಲಿ ಗುರುವಾರ ಭದ್ರತಾ ಪಡೆ ನಡೆಸಿದ ಕಾರ್ಯಾಚರಣೆಯಲ್ಲಿ ಮಾವೊವಾದಿ ಮುಂಚೂಣಿ ನಾಯಕ ಕಿಶನ್‌ಜಿ ಸಾವಿಗೀಡಾಗಿದ್ದಾರೆ ಎಂದು ಹೇಳಲಾಗಿದೆ.
ಕಿಶನ್‌ಜಿ ಎಂತಲೇ ಗುರುತಿಸಿಕೊಂಡಿದ್ದ,ತೆಲುಗು ಭಾಷಿಕರಾದ 58ವರ್ಷದ ಮುಲ್ಲೊಜುಲಾ ಕೋಟೇಶ್ವರ ರಾವ್,ಮಾವೊವಾದಿಗಳ ಪಾಲಿಟ್‌ಬ್ಯೂರೊ ಸದಸ್ಯರಾಗಿದ್ದರು.ಅಲ್ಲದೆ ಜಂಗಲ್‌ಮಹಲ್‌ನಲ್ಲಿನ ಸಶಸ್ತ್ರ ಕಾರ್ಯಾಚರಣೆ ತಂಡದ ನೇತೃತ್ವವನ್ನೂ ವಹಿಸಿಕೊಂಡಿದ್ದರು.
ಕಿಶನ್‌ಜಿ ಅವರನ್ನು ಪ್ರಹ್ಲಾದ್,ಮುರಳಿ,ರಾಮ್‌ಜಿ,ಜಯಂತ್ ಹಾಗೂ ಶ್ರೀಧರ್ ಎಂಬ ಅಡ್ಡ ಹೆಸರುಗಳಿಂದ ಕರೆಯಲಾಗುತ್ತಿತ್ತು.2010ರಲ್ಲಿ ಸಿಲ್ದಾ ಶಿಬಿರದಲ್ಲಿ ನಡೆದ ದಾಳಿಯ ಹೊಣೆಯನ್ನು ಅವರು ಹೊತ್ತುಕೊಂಡಿದ್ದರು
0 comments:
Post a Comment