ಬಳ್ಳಾರಿ: ಬಳ್ಳಾರಿ ರೆಡ್ಡಿ ಸಹೋದರರ ಕುಟುಂಬದಲ್ಲಿ ಒಡಕುಂಟಾಗಿದೆಯೇ? ಹಿರಿಯ ಸಹೋದರ ಮಾಜಿ ಸಚಿವ ಕರುಣಾಕರ ರೆಡ್ಡಿ ತಮ್ಮ ಕುಟುಂಬದಿಂದ ದೂರುವಾಗುತ್ತಿದ್ದಾರೆಯೇ?ಈ ಎಲ್ಲಾ ಪ್ರಶ್ನೆಗಳು ಈಗ ಬಳ್ಳಾರಿಯ ಜನತೆಯನ್ನು ಮತ್ತು ಉಪ ಚುನಾವಣೆ ಪ್ರಚಾರದಲ್ಲಿ ತೊಡಗಿರುವ ರಾಜಕೀಯ ಪಕ್ಷಗಳನ್ನು ಕಾಡುತ್ತಿವೆ.ಈ ಬಗ್ಗೆ ರೆಡ್ಡಿ ಸಹೋದರರ ಆಪ್ತರಲ್ಲೂ ಸಹ ಹಲವು ಸಂದೇಹಗಳು ಮೂಡಿವೆ.
ಅಕ್ರಮ ಗಣಿಗಾರಿಕೆ ಆರೋಪದ ಮೇಲೆ ಕಿರಿಯ ಸಹೋದರ ಗಾಲಿ ಜನಾರ್ದನ ರೆಡ್ಡಿಯನ್ನು ಸಿಬಿಐ ಬಂಧಿಸಿದ ನಂತರ ಕರುಣಾಕರ ರೆಡ್ಡಿ ಅವರು ಎಲ್ಲೂ ಬಹಿರಂಗವಾಗಿ ಕಾಣಿಸಿಕೊಂಡಿಲ್ಲ. ಕನಿಷ್ಟ ಪಕ್ಷ ರೆಡ್ಡಿಗಳ ಆಪ್ತರಾಗಿರುವ ಮಾಜಿ ಸಚಿವ ಶ್ರೀರಾಮುಲು ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ ನಂತರವಾದರೂ ಅವರು ಬಹಿರಂಗವಾಗಿ ಕಾಣಿಸಿಕೊಂಡ ತಮ್ಮ ಬೆಂಬಲ ಸೂಚಿಸಬೇಕಾಗಿತ್ತು.ಆದರೆ ಸಹೋದರರಿಂದ ದೂರಾಗಿರುವ ಕರುಣಾಕರ ರೆಡ್ಡಿ ಶ್ರೀರಾಮುಲುಗೆ ಬೆಂಬಲ ನೀಡುವ ವಿಷಯದಲ್ಲಿ ಮೌನ ವಹಿಸಿರುವುದು ಎಲ್ಲರಲ್ಲೂ ಕೂತೂಹಲ ಮೂಡಿಸಿದೆ ಮತ್ತು ರೆಡ್ಡಿ ಕುಟುಂಬದಲ್ಲಿ ಒಡಕು ಮೂಡಿರುವ ಸೂಚನೆಗಳು ಕಾಣಿಸಿಕೊಂಡಿವೆ.
ಕರುಣಾಕರ ರೆಡ್ಡಿಯ ನಡೆಯ ಬಗ್ಗೆ ಯಾರಿಗೂ ಸರಿಯಾದ ಕಾರಣ ಗೊತ್ತಿಲ.ಆದರೆ ಅವರ ಸಹೋದರರ ರಾಜಕೀಯ ಶೈಲಿ ಬಗ್ಗೆ ಅಸಮಾಧಾನ ಇದೆ ಮತ್ತು ಲೋಕಾಯುಕ್ತರ ಗಣಿ ವರದಿ ಯಲ್ಲಿ ತಮ್ಮ ಹೆಸರು ಪ್ರಸ್ತಾಪವಾಗಿದ್ದಕ್ಕೆ ಬೇಸರಗೊಂಡಿದ್ದಾರೆ ಎಂದು ಕೆಲವರು ಹೇಳುತ್ತಿದ್ದಾರೆ.
ಈ ಮಧ್ಯೆ,ಕರುಣಾಕರ ರೆಡ್ಡಿ ಅವರು ಕಂದಾಯ ಸಚಿವರಾಗಿದ್ದಾಗಲೂ ಅವರು ಜನರೊಂದಿಗೆ ಬೆರೆಯುತ್ತಿರಲಿಲ್ಲ. ಹೀಗಾಗಿ ಅವರ ಮೌನ ನಡೆಯ ಬಗ್ಗೆ ಅಪಾರ್ಥ ಬೇಡ ಎಂದು ಶ್ರೀರಾಮುಲು ಬೆಂಬಲಿಗರೊಬ್ಬರು ಹೇಳಿದ್ದಾರೆ.
karunakar reddy bellary
0 comments:
Post a Comment