PLEASE LOGIN TO KANNADANET.COM FOR REGULAR NEWS-UPDATES



ಬಿಜೆಪಿಗೆ ಸಡ್ಡು ಹೊಡೆದ ಶ್ರೀರಾಮುಲು;ರಂಗೇರಿದ ಬಳ್ಳಾರಿ ಉಪ ಚುನಾವಣಾ ಕಣ
ಬಳ್ಳಾರಿ, ನ. : ಬಳ್ಳಾರಿ ಉಪ ಚುನಾವಣೆಯಲ್ಲಿ ಇಡೀ ಸರಕಾರವೇ ಪ್ರಚಾರ ನಡೆಸಿದರೂ ನನ್ನನ್ನು ಸೋಲಿ ಸಲು ಸಾಧ್ಯವಿಲ್ಲ ಎಂದು ಬಿಜೆಪಿಗೆ ಸಡ್ಡುಹೊಡೆದು ಪಕ್ಷೇತರನಾಗಿ ಸ್ಪರ್ಧೆಗಿಳಿದಿರುವ ಶ್ರೀರಾಮುಲು, ಗೆಲುವು ನನ್ನದೇ ಎಂದಿದ್ದಾರೆ.
ಚುನಾವಣೆಯಲ್ಲಿ ಮುಸ್ಲಿಂ ಮತದಾ ರರ ಮತ ಪಡೆಯಲು ಇಂದು ನಗರದ ಕೌಲ್‌ಬಝಾರ್‌ನಲ್ಲಿ ಆಯೋಜಿಸಿದ್ದ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತ ನಾಡಿದ ಅವರು, ನನ್ನನ್ನು ಸೋಲಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದರು.ನಮ್ಮನ್ನು ಬಿಜೆಪಿ ಅಸ್ಪಶ್ಯರಂತೆ ಕಂಡಿದೆ. ನಾನು ಯಾರನ್ನೂ ವೈಯಕ್ತಿಕ ವಾಗಿ ಟೀಕಿಸುವುದಿಲ್ಲ, ಆರೋಪಿಸು ವುದೂ ಇಲ್ಲ ಎಂದ ಶ್ರೀರಾಮುಲು, ಮುಖ್ಯಮಂತ್ರಿ ಸದಾನಂದಗೌಡ ಸೇರಿ ದಂತೆ ಇಡೀ ಸರಕಾರವೇ ಬಳ್ಳಾರಿಗೆ ಬಂದರೂ ನನ್ನನ್ನು ಸೋಲಿಸಲು ಸಾಧ್ಯ ವಿಲ್ಲ ಎಂದರು. ಬಿಜೆಪಿ ಸರಕಾರದಲ್ಲಿ ಅಧಿಕಾರಕ್ಕೆ ಆಸೆ ಪಟ್ಟವ ನಾನಲ್ಲ.
ಆದರೆ ಈಗ ಬಿಜೆಪಿ ನಾಯಕರು ತನ್ನ ವಿರುದ್ಧ ಅಪ ಪ್ರಚಾರ ಮಾಡುತ್ತಿದ್ದಾರೆ. ಬಿಜೆಪಿ ನಾಯಕರ ಸುಳ್ಳು ಮಾತನ್ನು ಬಳ್ಳಾರಿ ಜನ ನಂಬಲ್ಲ ಎಂದರು.ಬಿಜೆಪಿ ಸರಕಾರದ ವಿರುದ್ಧ ಹರಿ ಹಾಯ್ದ ಶ್ರೀರಾಮುಲು, ಬಿಜೆಪಿ ಅಭ್ಯ ರ್ಥಿಯನ್ನು ಈ ಬಾರಿಯ ಚುನಾವಣೆ ಯಲ್ಲಿ ಸೋಲಿಸುವ ಮೂಲಕ ಸರಕಾ ರಕ್ಕೆ ಪ್ರತ್ಯುತ್ತರ ನೀಡುತ್ತೇನೆ ಎಂದರು.ರಾಜ್ಯದಲ್ಲಿ ಬಿಜೆಪಿ ಸರಕಾರ ಆಡಳಿ ತಕ್ಕೆ ಬರಲು ಬಳ್ಳಾರಿ ಜಿಲ್ಲೆ ಕಾರಣ. ಸರಕಾರ ನಡೆಸುವ ಸಂದರ್ಭದಲ್ಲಿ ನಮ್ಮ ಸಹಕಾರ ಪಡೆದ ಬಿಜೆಪಿ ನಾಯಕರು ನಮ್ಮನ್ನು ಕಡೆಗಣಿಸಿರುವುದು ರಾಜ್ಯದ ಜನತೆಗೆ ತಿಳಿದಿದೆ. ಬಿಜೆಪಿ ನಾಯಕರು ಅಧಿಕಾರದ ಸೊಕ್ಕು, ಅಹಂಕಾರದಿಂದ ಬೀಗಿದ್ದಾರೆ. ಈ ಬಾರಿಯ ಚುನಾವಣೆ ಯಲ್ಲಿ ಅವರಿಗೆ ಪಾಠ ಕಲಿಸುತ್ತೇನೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಶ್ರೀರಾಮುಲು ರೊಂದಿಗೆ ಸಂಸದೆ ಜೆ.ಶಾಂತಾ ಹಾಗೂ ಸಣ್ಣ ಫಕೀರಪ್ಪ ಹಾಜರಿದ್ದರು.
ಬಳಿಕ ಶ್ರೀರಾಮುಲು ತಮ್ಮ ಬೆಂಬಲಿ ಗರೊಂದಿಗೆ ಸೇರಿಕೊಂಡು ಚುನಾವಣಾ ಪ್ರಚಾರ ನಡೆಸಿದರು. ಅವರೊಂದಿಗೆ ಅವರ ಬೆಂಬಲಿಗರ ದಂಡೇ ಸೇರಿತ್ತು.
ಇದೇ ವೇಳೆ ಬಳ್ಳಾರಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಮ್‌ಪ್ರಸಾದ್, ಬಿಜೆಪಿ ಅಭ್ಯರ್ಥಿ ಗಾದಿಲಿಂಗಪ್ಪ ಕೂಡಾ ಮತಯಾಚನೆ ನಡೆಸಿದರು.ಶ್ರೀರಾಮುಲು ಸೇರಿದಂತೆ ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳು ಮತ ಬೇಟೆಗಿಳಿಯುವ ಮೂಲಕ ಚುನಾವಣಾ ಕದನ ರಂಗೇರಿದೆ.
ನಾಮಪತ್ರ ಹಿಂಪಡೆಯಲು ಇಂದು ಕಡೆಯ ದಿನ
ಈ ತಿಂಗಳ 30ರಂದು ನಡೆಯಲಿರುವ ಬಳ್ಳಾರಿ ಉಪ ಚುನಾವಣೆಗೆ ನಾಮಪತ್ರ ವಾಪಸು ಪಡೆಯಲು ಮಂಗಳವಾರ ಕೊನೆಯ ದಿನವಾಗಿದೆ.14 ಮಂದಿ ಒಟ್ಟು 20 ನಾಮಪತ್ರ ಸಲ್ಲಿಸಿದ್ದು, ಈ ಪೈಕಿ 12 ನಾಮಪತ್ರ ಸ್ವೀಕೃತಗೊಂಡಿತ್ತು. ಉಳಿದಂತೆ ಬಿಜೆಪಿಯ ಅಶೋಕ್ ಹಾಗೂ ನಾಗೇಂದ್ರರ ನಾಮಪತ್ರ ಪರಿಶೀಲನೆ ವೇಳೆ ತಿರಸ್ಕೃತಗೊಂಡಿತ್ತು.ನಾಳೆ ನಾಮಪತ್ರ ಹಿಂದಕ್ಕೆ ಪಡೆಯಲು ಕೊನೆಯ ದಿನವಾಗಿರುವುದರಿಂದ ಅಂತಿಮ ಕಣದಲ್ಲಿ ಎಷ್ಟು ಮಂದಿ ಅಭ್ಯರ್ಥಿಗಳು ಉಳಿಯಲಿದ್ದಾರೆ ಎಂಬುದು ಸ್ಪಷ್ಟಗೊಳ್ಳಲಿದೆ

Advertisement

0 comments:

Post a Comment

 
Top