ದಿ ೧೦-೧೧-೨೦೧೧ ರಂದು ಅಳವಂಡಿ ಪೋಲಿಸ್ ಠಾಣೆಯಲ್ಲಿ ಹಂದ್ರಾಳ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಮಕ್ಕಳ ರಕ್ಷಾಣಾ ಯೋಜನೆಯವರಿಂದ ತೆರೆದ ಮನೆ ಕಾರ್ಯ ಕ್ರಮನ್ನು ಆಯೋಜಿಸಲಾಗಿತ್ತು. ಅಳವಂಡಿ ಪೋಲಿಸ್ ಠಾಣೆಯ ಮಕ್ಕಳ ವಿಶೇಷ ಪೋಲಿಸ ಘಟಕದ ಅಧೀಕಾರಿಗಳಾದ ಎ.ಎಸ್.ಐ ಅಬ್ದುಲ್ ರಜಾಕ್ ಮತ್ತು ಪೋಲಿಸ್ ಪೇದೆ ಪ್ರಭಾಕರವರು ಬಂದಕು. ವಾಕಿಟಾಕಿ, ಬಂದಿಖಾನೆ ರಸ್ತೆ ನಿಯಮಾವಳಿಗಳು ಮಕ್ಕಳಿಗೆ ಸಮಸ್ಯೆಗಳು ಉಂಟಾದರೆ ದೂರು ನೀಡುವ ಬಗ್ಗೆ ಪೋಲಿಸ ಠಾಣೆಯ್ಲಿ ಬರುವಂಥಹ ಎಲ್ಲಾ ಅಧಿಕಾರಿಗಳ ಕೆಲಸ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದರು, ತಾಲೂಕ ಸಂಯೋಜಕರಾದ ಸಂಗಣ್ಣ. ಎ, ಸಂಗಾಪೂರ ರವರು ಮಕ್ಕಳ ಹಕ್ಕುಗಳ ಬಗ್ಗೆ ಬಾಲ್ಯ ವಿವಾಹ, ಬಾಲಕಾರ್ಮಿಕತೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಮಾಹಿತಿ ನೀಡಿದರು. ಶಾಲೆಯ ಶಿಕ್ಷಕಿ. ಶ್ರೀಮತಿ ಶಶಿಕಲಾ ಹಾಗೂ ಮಹಾದೇವಪ್ಪ ಸಮುದಾಯ ಸಂಘಟಕರಾದ ಮಲ್ಲಿಕಾರ್ಜುನ ಹಳ್ಳಿ ಹಾಗೂ ಇತರೆ ಪೋಲಿಸ್ ಸಿಬ್ಬಂದಿಗಳು ಹಾಜರಿದ್ದರು.
Home
»
»Unlabelled
» ಅಳವಂಡಿ ಪೋಲಿಸ್ ಠಾಣೆಯಲ್ಲಿ ತೆರೆದ ಮನೆ ಕಾರ್ಯಕ್ರಮ:
Subscribe to:
Post Comments (Atom)
0 comments:
Post a Comment