PLEASE LOGIN TO KANNADANET.COM FOR REGULAR NEWS-UPDATES


koppal kavisamuha
ಕೊಪ್ಪಳ : ನಾವೆಲ್ಲರೂ ಯಾವತ್ತಿದ್ದರೂ ವಿದ್ಯಾರ್ಥಿಗಳು , ನಮ್ಮ ಕಲಿಕೆ ನಿರಂತರವಾಗಿರಬೇಕು, ಕವಿಯಾದವನು ಚಿಕಿತ್ಸಕ ಬುದ್ದಿಯುಳ್ಳವನಾಗಿರಬೇಕು ಎಂದು ಕಥೆಗಾರ,ಜಾನಪದ ಕಲಾವಿದ ಶರಣಪ್ಪ ವಡಿಗೇರಿ ಹೇಳಿದರು. ಅವರು ಕನ್ನಡನೆಟ್.ಕಾಂ ಕವಿಸಮೂಹ ನಗರದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ೮೧ನೇ  ಕವಿಸಮಯ ಕಾರ್‍ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಕವಿ ಒಳ ಮನಸ್ಸಿನಿಂದ ಚಿಕಿತ್ಸಕ ದೃಷ್ಠಿಯಿಂದ ಬರೆದಾಗ ಸಮಾಜ ಸುಧಾರಕನಾಗಬಲ್ಲ.ಕವಿತೆಯ ಸಾಫಲ್ಯತೆ ಅದರ ಒಳಾರ್ಥದಲ್ಲಿರುತ್ತದೆ. ಶಬ್ದಗಳ ಜೊತೆಗೆ ಚಮತ್ಕಾರ ಮಾಡಬೇಕು. ಇಂದಿನ ಪರಿಸ್ಥಿತಿಯಲ್ಲಿ ಕವಿ,ಸಾಹಿತಿಯಾದವನ ಜವಾಬ್ದಾರಿ ಹೆಚ್ಚಾಗಿದೆ. ಮಾನವೀಯ ಮೌಲ್ಯಗಳಿಗೆ ಮಿಡಿಯುಂತಹ ಕಾವ್ಯ ಹುಟ್ಟಬೇಕು ಎಂದು ಹೇಳಿದರು. ಶರಣಪ್ಪ ವಡಿಗೇರಿಯವರು ತಮ್ಮ ಭರ್ಜರಿ ಕಂಠದಿಂದ ಕೆಂಚ,ಕರಿಯ, ಜಮಾನಾ ಮುಂದೋತು, ಅಯ್ಯಯ್ಯೋ ಅನ್ಯಾಯ ಹಾಡುಗಳನ್ನು ಹಾಡಿ ರಂಜಿಸಿದರು.
ಕವಿಗೋಷ್ಠಿಯಲ್ಲಿ  ವಿಠ್ಠಪ್ಪ ಗೋರಂಟ್ಲಿ- ಆದ್ಮಾತ್ಮಿಕ ಅನುಭೂತಿ,ಎ.ಪಿ.ಅಂಗಡಿ- ಬಾಯಿ ಬಾಡಿಗೆಗಿದೆಯೆ, ಶಾಂತಾದೇವಿ ಹಿರೇಮಠ- ದವಿಪದಿಗಳು, ಡಾ.ರೇಣುಕಾ ಕರಿಗಾರ- ಕವಿಗಳು ಸಾರ್ ಕವಿಗಳು, ಕುರುವತ್ತಿಗೌಡರ- ಸಾವಿನ ಸರದಾರರು, ನಟರಾಜ ಸವಡಿ-ದಲಿತ ಮೀಸಲಾತಿ ಮತ್ತು ಅಂಬೇಡ್ಕರ್, ಗುರುರಾಜ ದೇಸಾಯಿ- ಕದ್ದವರು ಯಾರು ?, ಬಸವರಾಜ ಸಂಕನಗೌಡರ- ಸವತಿ ತರತೇನ, ಎನ್.ಜಡೆಯಪ್ಪ- ಆಸೆ ಕನ್ನಿಕೆ, ವಿಜಯಲಕ್ಷ್ಮೀ ಮಠದ- ಜನತಾಜನಾರ್ಧನ, ಮಹೇಶ ಬಳ್ಳಾರಿ- ಕಾವ್ಯ, ಶಿವಪ್ರಸಾದ ಹಾದಿಮನಿ- ಭಾವೈಕ್ಯತೆ, ಬಸವರಾಜ ಚೌಡ್‌ಕಿ-ಶಾರದಾಂಭೆ,ಬಸವರಾಜ ಕಉಂಬಾರ- ಪ್ರಜ್ಞೆಗೆ ಕವನಗಳನ್ನು ವಾಚನ ಮಾಡಿದರು.  ಇದಕ್ಕೂ ಮೊದಲು ಇತ್ತೀಚಿಗೆ ನಿಧನರಾಧ ಗಂಗಾವತಿಯ ಯುವಕವಿ ಎಲ್.ಬಿ.ಪಾಟೀಲ್‌ರಿಗೆ ಒಂದು ನಿಮಿಷದ ಮೌನಾಚಾರಣೆಯ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಕಾರ್‍ಯಕ್ರಮದಲ್ಲಿ ಯಶವಂತ ಮೇತ್ರಿ, ಶಿವಾನಂದ ಹೊದ್ಲೂರ, ಬಸವರಾಜ ಶೀಲವಂತರ ಸೇರಿದಂತೆ ಇತರರು ಉಪಸ್ಥಿತರಿದ್ದರು,  ಸ್ವಾಗತವನ್ನು ಗುರುರಾಜ ದೇಸಾಯಿ ಹಾಗೂ ವಂದನಾರ್ಪಣೆಯನ್ನು ಎನ್.ಜಡೆಯಪ್ಪ ನೆರವೇರಿಸಿದರೆ. ಸಿರಾಜ್ ಬಿಸರಳ್ಳಿ ಕಾರ್‍ಯಕ್ರಮ ನಡೆಸಿಕೊಟ್ಟರು. 

Advertisement

0 comments:

Post a Comment

 
Top