PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ ಅ: ಕೊಪ್ಪಳ ಜಿಲ್ಲೆಯಲ್ಲಿ ಭತ್ತದ ಬೆಳೆಯಲ್ಲಿ ನುಶಿ,  ಕಂದುಜಿಗಿ ಮತ್ತು ಬಿಳಿಜಿಗಿ ಬಾಧೆ ಕಂಡುಬಂದಿದ್ದು, ಇದರ ನಿಯಂತ್ರಣಕ್ಕೆ ರಾಯಚೂರು ಕೃಷಿ ವಿಶ್ವ ವಿದ್ಯಾಲಯ ವ್ಯಾಪ್ತಿಯ ಕೊಪ್ಪಳದ   ವಿಸ್ತರಣಾ ಶಿಕ್ಷಣ ಘಟಕ ರೈತರಿಗೆ ಸಲಹೆ ನೀಡಿದೆ.
ಭತ್ತದ ಬೆಳೆಗೆ ನುಶಿ, ಕಂದುಜಿಗಿ ಹಾಗೂ ಬಿಳಿಜಿಗಿಯ ಬಾಧೆಯು ಅಲ್ಲಲ್ಲಿ ಕಂಡುಬಂದಿದ್ದು ಬಾಧೆಗೊಳಗಾದ ಬೆಳೆಯ ಬೆಳವಣಿಗೆಯು ಕುಂಠಿತವಾಗಿದ್ದು, ಸಸ್ಯಗಳು ಬಾಡಿದಂತೆ ಕಂಡು ಬರುವವು. ಬಾಧೆಗೊಳಗಾದ ಎಲೆಗಳ ಕೆಳಗೆ ಅಸಂಖ್ಯಾತ ಸೂಕ್ಷ್ಮವಾದ ನುಶಿಗಳು ಹರಿದಾಡುವುದನ್ನು ಕಾಣಬಹುದು, ಮತ್ತು ನುಶಿಯು ಎಲೆಯ ಪತ್ರಹರಿತ್ತನ್ನು ಕೆರೆದು ತಿನ್ನುವುದರಿಂದ ಎಲೆಗಳ ಮೇಲೆಲ್ಲಾ ಬೆಳ್ಳನೆಯ ಸೂಕ್ಷ್ಮವಾದ ಗೀರುಗಳನ್ನು ಕಾಣಬಹುದು. ನುಶಿಯ ಬಾಧೆಯು ವಾತಾವರಣದಲ್ಲಿ ತೇವಾಂಶ ಕಡಿಮೆಯಾಗಿ ಮಳೆ ಇಲ್ಲದೆ ಬಿಸಿಲು ಹೆಚ್ಚು ಇರುವಂತಹ ಸಂದರ್ಭದಲ್ಲಿ ಬೆಳೆಯು ನುಶಿಯ ಬಾಧೆಗೊಳಗಾಗುವುದು. ಸಾಮಾನ್ಯವಾಗಿದೆ, ಇದರ ಬಾಧೆ ನಿಯಂತ್ರಿಸದಿದ್ದರೆ, ಬೆಳವಣಿಗೆ ಕುಂಠಿತವಾಗಿ, ಇಳುವರಿ ಗಣನೀಯವಾಗಿ ಕಡಿಮೆಯಾಗುತ್ತದೆ. ಕಂದುಜಿಗಿ ಮತ್ತು ಬಿಳಿಜಿಗಿಯ ಬಾಧೆಯು ಕೀಟ ಅಲ್ಲಲ್ಲಿ ಕಂಡುಬಂದಿದ್ದು, ಸಸ್ಯದ ಬುಡದಲ್ಲಿ ಅಸಂಖ್ಯಾತ ಪ್ರೌಢ ಮತ್ತು ಮರಿ ಜಿಗಿಹುಳುಗಳ ಇರುವಿಕೆಯನ್ನು ಕಾಣಬಹುದು. ಇವುಗಳು ಯಾವಾಗಲೂ ಸಸ್ಯದ ಬುಡದಲ್ಲಿಯೇ ಇದ್ದು, ಕಾಂಡ ಮತ್ತು ತಿರುಳ ರಸವನ್ನು ಹೀರುವುದರಿಂದ ಸಸಿಗಳು ಬಾಡಿದಂತೆ ಆಗಿ ಕ್ರಮೇಣ ಒಣಗಲು ಪ್ರಾರಂಭಿಸುತ್ತವೆ. ಅವುಗಳ ಬಾಧೆ ತೀವ್ರವಾದಂತೆ ಬೆಳೆಯೂ ಸುಟ್ಟಂತೆ ಕಾಣುವುದನ್ನು ದುಂಡಾಕಾರಾಗಿ ಅಲ್ಲಲ್ಲಿ ಕಾಣಬಹುದು. ನಿಯಂತ್ರಣ ಕ್ರಮವನ್ನು ಸೂಕ್ತ ವೇಳೆಯಲ್ಲಿ ಕೈಗೊಳ್ಳದಿದ್ದ ಪಕ್ಷದಲ್ಲಿ ಬೆಳೆಯ ಇಳುವರಿಯು ಗಣನೀಯವಾಗಿ ಕುಗ್ಗುವುದರ ಜೊತೆಗೆ ಅತಿಯಾದ ಆರ್ಥಿಕ ನಷ್ಟವನ್ನುಂಟು ಮಾಡುತ್ತದೆ.
ನುಶಿ ಮತ್ತು ಜಿಗಿಯ ನಿಯಂತ್ರಣಕ್ಕಾಗಿ ಸೂಕ್ತ ರಾಸಾಯನಿಕ ಕೀಟನಾಶಕ ಸಂಪರಣೆ ಕೈಗೊಳ್ಳಲು ಸೂಚಿಸಲಾಗಿದೆ. ಥಯೋಮೆತಾಕ್ಸಮ್ ೨೫ ಡಬ್ಲು.ಜಿ. ೧೦೦ ಗ್ರಾಂ. ಪ್ರತಿ ಹೆಕ್ಟೇರಿಗೆ ೦.೨ ಗ್ರಾಂ. ಪ್ರತಿ ನೀರಿಗೆ ಅಥವಾ ಎಥೊಫೆನ್‌ಫ್ರಾಕ್ಸ ೧೦೦ ಇ.ಸಿ. ಪ್ರತಿ ಹೆಕ್ಟೇರಿಗೆ ೨ ಮಿ.ಲೀ. ಪ್ರತಿ ಲೀಟರಿಗೆ ೫೦೦ ಎಂ. ಎಲ್ ಅಥವಾ ಕಾರ್ಟಫ್ ಹೈಡ್ರೋಕ್ಲೋರೈಡ್ ೦.೫ ಕೆ.ಜಿ. ಪ್ರತಿ ಹೆಕ್ಟೇರಿಗೆ ೨ ಗ್ರಾಂ./ಲೀಟರ ನೀರಿಗೆ ಅಥವಾ ಪ್ರೊಫೆನೊಫಾಸ್ ೦.೫ ಕೆ.ಜಿ ೧೨ ಗ್ರಾಂ./ಲೀ/ ಪ್ರತಿ ಹೆಕ್ಟೇರಿಗೆ ೦.೨ ಗ್ರಾಂ./ಲೀಟರ್ ನೀರಿಲ್ಲಿ ಬೆರೆಸಿ ಸಿಂಪರಣೆ ಮಾಡಬೇಕು. ಅಥವಾ ಅಸಿಪೇಟ್ ೭೫ ಡಬ್ಲು.ಜಿ. ೯೫೦ ಗ್ರಾಂ. ಪ್ರತಿ ಹೆಕ್ಟೇರಿಗೆ ೧.೫೮ ಗ್ರಾಂ./ಲೀಟರ ನೀರಿನಲ್ಲಿ ಮಿಶ್ರಣ ಮಾಡಿ ಸಿಂಪಡಿಸಬೇಕು.
ನುಶಿ ನಿಯಂತ್ರಣಕ್ಕೆ ಸೂಕ್ತ ನುಶಿನಾಶಕಗಳನ್ನು ಬಳಸಿ ಸಿಂಪಡಿಸಬೇಕು.  ಡೈಕೋಪಾಲ್ (ಕೆಲ್ತೇನ್ ೧೮.೫ ಇ.ಸಿ.) ೫೦೦ ಮಿ.ಲೀ. ಪ್ರತಿ ಹೆಕ್ಟೇರಿಗೆ ೨.೭ ಮಿ.ಲೀ. ನೀರಿಗೆ ಅಥವಾ ಡೈಫೆನ್‌ಥ್ಯೊರಾನ್ (ಪೋಲೊ ೫೦ ಡಬ್ಲು.ಪಿ.) ೪೫೦ ಪ್ರತಿ ಹೆಕ್ಟೇರಿಗೆ ೨.೨ ಮಿ.ಲೀ. ಪ್ರತಿ ಲೀಟರ್ ಅಥವಾ ಪೆನ್‌ಜಿಕ್ವಿನ್ (ಮ್ಯಾಜಿಸ್ಟರ್ ೧೦ ಇ.ಸಿ) ೧೨೫ ಗ್ರಾಂ. ಪ್ರತಿ ಹೆಕ್ಟೇರಿಗೆ ೦.೨೫ ಗ್ರಾಂ. ಪ್ರತಿ ಲೀಟರ್ ನೀರಿಗೆ ಹೈವಾಲ್ಯುಮ್ ಸ್ಪ್ರೇ (ಹ್ಯಾಂಡ್ ಕಂಪ್ರೆಷನ್ ಸಿಂಪರಣೆಗೆ) ೫೦ ದಿನದ ಬೆಳೆಗೆ ೫೦೦ ರಿಂದ ೬೦೦ ಲೀಟರ್ ನೀರನ್ನು ಪ್ರತಿ ಹೆಕ್ಟೇರಿಗೆ ಬಳಸಬೇಕು.
        ೫೦ ದಿನ ಮೀರಿದ ಬೆಳೆಗೆ ೭೦೦ ರಿಂದ ೮೦೦ ಲೀಟರ್ ನೀರನ್ನು ಪ್ರತಿ ಹೆಕ್ಟೇರಿಗೆ ಬಳಸಬೇಕು.  ಲೋವಾಲ್ಯುಮ್ ಸ್ಪ್ರೇ (ಪವರ್ ಕಂಪ್ರೆಷನ್ ಸಿಂಪರಣೆಗೆ) ೪೦ ದಿನದ ಬೆಳೆಗೆ ೧೨೦ ಲೀಟರ್ ನೀರನ್ನು ಪ್ರತಿ ಹೆಕ್ಟೇರಿಗೆ ಬಳಸಬೇಕು. ೬೦ ದಿನದ ಬೆಳೆಗೆ ೧೮೦ ನೀರನ್ನು ಪ್ರತಿ ಹೆಕ್ಟೇರಿಗೆ ಬಳಸಬೇಕು ಎಂದು ಡಾ: ಆರ್. ಕಿರಣಕುಮಾರ ಕೀಟಶಾಸ್ತ್ರಜ್ಞ ಇವರು ಸಲಹೆ ನೀಡಿದ್ದಾರೆ ಎಂದು ವಿಸ್ತರಣಾ ಶಿಕ್ಷಣ ಘಟಕದ ಪ್ರಕಟಣೆ ತಿಳಿಸಿದೆ.

Advertisement

0 comments:

Post a Comment

 
Top