PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ ಅ. : ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ರಾಜ್ಯ ಮತ್ತು ಜಿಲ್ಲಾ ಮಟ್ಟದ ಲೇಖನ ಸ್ಪರ್ಧೆಗೆ ಕಾಲೇಜು ವಿದ್ಯಾರ್ಥಿಗಳಿಂದ ಮತ್ತು ೧೭-೨೦ ವಯಸ್ಸಿನ ಯುವ ಸಮುದಾಯದವರಿಂದ ಲೇಖನಗಳನ್ನು ಆಹ್ವಾನಿಸಿದೆ.
  ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಹಾಗೂ ಕಣಜ ಅಂತರಜಾಲ ಕನ್ನಡ ಜ್ಞಾನಕೋಶ ಇವರ ವತಿಯಿಂದ ಜಂಟಿಯಾಗಿ ಸಂಘಟಿಸಿರುವ ಕದಿರು ಕಾಲೇಜು ವಿದ್ಯಾರ್ಥಿಗಳ, ಯುವ ವಯಸ್ಸಿನವರ ರಾಜ್ಯ ಮಟ್ಟದ ಲೇಖನ ಸ್ಪರ್ಧೆಗೆ ಲೇಖನಗಳನ್ನು ಆಹ್ವಾನಿಸಲಾಗಿದ್ದು, ಜಾತ್ರೆ, ಸಾಂಸ್ಕೃತಿಕ ಪರಂಪರೆ, ಸಂಪ್ರದಾಯ, ಜಾನಪದ ಆಚರಣೆಗಳು, ಕೃಷಿಯಲ್ಲಿ ಹೊಸ ವಿಧಾನಗಳು, ರೈತರ, ವಿಷಯ ತಜ್ಞರ, ಹಿರಿಯರ ಪಾರಂಪರಿಕ ಅನುಭವಗಳು, ಸಂದರ್ಶನ ಇತ್ಯಾದಿ- ತಮ್ಮ ಊರಿನ ವಿಶೇಷ ಸಂಗತಿ ಕುರಿತ ಲೇಖನವನ್ನು ಸೂಕ್ತ ಛಾಯಾಚಿತ್ರಗಳನ್ನೂ ತೆಗೆದು ಕಳುಹಿಸಿಕೊಡಬಹುದಾಗಿದೆ.  ಕಾಲೇಜಿನಲ್ಲಿ ನಡೆಸಿದ ವಿಶೇಷ ವಿಜ್ಞಾನ ಪ್ರಯೋಗಗಳು (ಹೆಚ್ಚು ಪ್ರಚಲಿತದಲ್ಲಿ ಇರದ ಸಂಗತಿಗಳು) ವಿಜ್ಞಾನ ಪ್ರಯೋಗಗಳು, ಪರಿಸರ ಸಮೀಕ್ಷೆಗಳು, ಅಪರೂಪದ ಪ್ರೇಕ್ಷಣೀಯ ತಾಣ ಇತ್ಯಾದಿಗಳ ಬಗೆಗೆ ವಿವರವಾದ ಲೇಖನ.  ನೀವು ಹುಡುಕಿದ ಯಾವುದೇ ಹೊಸ ಸಂಗತಿಯ ಬಗ್ಗೆ ಮಾಹಿತಿಪೂರ್ಣವಾದ ಲೇಖನವನ್ನು ಕಳುಹಿಸಿಕೊಡಬಹುದಾಗಿದೆ. ಪ್ರತಿ ಲೇಖನದ ಪದ ಮಿತಿ ಗರಿಷ್ಟ ೧೦೦೦ ಪದಗಳು.  ಆದರೆ ಸಾಮಾಜಿಕ ಸಮಸ್ಯೆಗಳು ಮತ್ತಿತರ ವಿಷಯಗಳ ಬಗ್ಗೆ ಮಾಡಿದ ಚರ್ಚಾಸ್ಪರ್ಧೆಯ ಮಾಹಿತಿ ಅಥವಾ ನಿಮ್ಮ ಕಾಲೇಜಿಗಾಗಿ, ಸ್ಪರ್ಧೆಗಾಗಿ ಬರೆದ ಪ್ರಬಂಧಗಳು, ನಿಮ್ಮ ಅಭಿಪ್ರಾಯಗಳು, ಕನಸುಗಳು, ವಿಚಾರಗಳು ತುಂಬಿರುವ ಲೇಖನಗಳನ್ನು ಕಳುಹಿಸಬಾರದು.  ಅಲ್ಲದೆ ಬೇರೆ ಪುಸ್ತಕ, ಮಾಹಿತಿ ಮೂಲಗಳಿಂದ ನಕಲು ಮಾಡಬಾರದು.  ಈ ಸ್ಪರ್ಧೆಯಲ್ಲಿ ಭಾಗವಹಿಸಲು ಎಲ್ಲ ಪದವಿ ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ೧೭ ರಿಂದ ೨೦ ವರ್ಷ ವಯಸ್ಸಿನ ಯುವಕರಿಗೆ ಅವಕಾಶವಿದೆ.  ಕಾಲೇಜು ವಿದ್ಯಾರ್ಥಿಗಳು ಲೇಖನದ ಜೊತೆಗೆ ಕಾಲೇಜಿನ ಮುಖ್ಯಸ್ಥರಿಂದ ವಿದ್ಯಾರ್ಥಿ ದೃಢೀಕರಣ ಪತ್ರವನ್ನು ಲಗತ್ತಿಸಿ ಕಳುಹಿಸಬೇಕು.  ಪ್ರತಿ ವಿದ್ಯಾರ್ಥಿ ಗರಿಷ್ಟ ಎರಡು ಲೇಖನಗಳನ್ನು ಕಳುಹಿಸಬಹುದಾಗಿದೆ.  ಸ್ಪರ್ಧೆಗೆ ಬರೆಯುವ ಲೇಖನಗಳನ್ನು ಆಯಾ ಕಾಲೇಜಿನಿಂದೇ ಒಂದೇ ಕಂತಿನಲ್ಲಿ ಕಳುಹಿಸಿಕೊಟ್ಟಲ್ಲಿ ಒಳ್ಳೆಯದು. ಲೇಖನಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ಇ-ಮೇಲ್ ಮೂಲಕ ಞಚಿಜiಡಿu@ಞಚಿಟಿಚಿರಿಚಿ.iಟಿ ವಿಳಾಸಕ್ಕೆ ಕಳುಹಿಸಿಕೊಟ್ಟಲ್ಲಿ ಒಳ್ಳೆಯದು.  ಅಂಚೆ ಮೂಲಕ ಕಳುಹಿಸುವವರು ಲೇಖನಗಳನ್ನು  ಸಲಹಾ ಸಮನ್ವಯಕಾರ, ಕಣಜ ಅಂತರಜಾಲ ಕನ್ನಡ ಜ್ಞಾನಕೋಶ, ಯೋಜನಾ ಕಚೇರಿ, ನಂ. ೨೪/೨,೩, ವಿಜ್ಞಾನ ಭವನ, ೨೨ನೇ ಮುಖ್ಯ ರಸ್ತೆ, ಬನಶಂಕರಿ ೨ನೇ ಹಂತ, ಬೆಂಗಳೂರು- ೫೬೦೦೭೦ ವಿಳಾಸಕ್ಕೆ ನವೆಂಬರ್ ೧೪ ರ ಒಳಗಾಗಿ ತಲುಪುವಂತೆ ಕಳುಹಿಸಬೇಕು.  ಉತ್ತಮ ಲೇಖನಗಳಿಗೆ ರಾಜ್ಯ ಮಟ್ಟದ ನಗದು ಬಹುಮಾನ ಪ್ರಥಮ- ರೂ. ೪೦೦೦೦, ದ್ವಿತೀಯ- ೩೦೦೦೦, ಮೂರನೇ ಬಹುಮಾನ- ೨೫೦೦೦ ಅಲ್ಲದೆ ಜಿಲ್ಲಾ ಮಟ್ಟದ ನಗದು ಬಹುಮಾನವಾಗಿ ಪ್ರಥಮ- ರೂ. ೫೦೦೦, ದ್ವಿತೀಯ- ರೂ. ೩೦೦೦, ತೃತೀಯ- ರೂ. ೨೦೦೦ ಜೊತೆಗೆ ಜಿಲ್ಲಾ ಮಟ್ಟದಲ್ಲಿ ಹತ್ತು ಪ್ರಶಂಸಾ ಬಹುಮಾನಗಳು ಮತ್ತು ವಿಶೇಷ ಪುಸ್ತಕಗಳ ಕೊಡುಗೆ ನೀಡಲಾಗುವುದು.  ಹೆಚ್ಚಿನ ವಿವರಗಳನ್ನು ತಿತಿತಿ.ಞಚಿಟಿಚಿರಿಚಿ.iಟಿ ವೆಬ್‌ಸೈಟ್‌ನಿಂದ ಪಡೆಯಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Advertisement

0 comments:

Post a Comment

 
Top