ವಿಷ್ಣುವರ್ಧನ್ ಅತ್ಯುತ್ತಮ ನಟ ♦ ಸುದರ್ಶನ್‌ಗೆ ರಾಜ್‌ಕುಮಾರ್ ಪ್ರಶಸ್ತಿ ♦ ಸಿ.ವಿ.ಶಂಕರ್‌ಗೆ ಕಣಗಾಲ್ ಗೌರವ
ಬೆಂಗಳೂರು, ಅ.19: ‘ರಸಋಷಿ ಕುವೆಂಪು’ 2009-10ನೆ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದುಕೊಂಡಿದ್ದು, ವಿಷ್ಣುವರ್ಧನ್ ಅತ್ಯುತ್ತಮ ನಟನಾಗಿ ಮರಣೋತ್ತರ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಅನು ಪ್ರಭಾಕರ್ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. 2009-10ನೆ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ಬುಧವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಪ್ರಕಟಿಸಿ ದರು. ಆರ್. ಎನ್. ಸುದರ್ಶನ್ ಡಾ. ರಾಜ್‌ಕುಮಾರ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದರೆ, ಸಿ.ವಿ. ಶಂಕರ್, ಪುಟ್ಟಣ ಕಣಗಾಲ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಜೀವಮಾನ ಸಾಧನೆಗಾಗಿ ನೀಡುವ ಡಾ. ವಿಷ್ಣುವರ್ಧನ್ ಪ್ರಶಸ್ತಿಯನ್ನು ಎಸ್.ಡಿ. ಅಂಕಲಗಿಯವರಿಗೆ ನೀಡಲಾಗಿದೆ.
ಈ ವಿಷಯ ಪ್ರಕಟಿಸಿದ ಮುಖ್ಯಮಂತ್ರಿ, ನಟ, ನಿರ್ಮಾಪಕ ದ್ವಾರಕೀಶ್ ನೇತೃತ್ವದ ಪ್ರಶಸ್ತಿ ಆಯ್ಕೆ ಸಮಿತಿ ಸತತ ಮೂರು ತಿಂಗಳ ಕಾಲ 54 ಚಲನಚಿತ್ರಗಳನ್ನು ವೀಕ್ಷಿಸಿ, ಉತ್ತಮ ಚಿತ್ರಗಳನ್ನು ಆಯ್ಕೆ ಮಾಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರಶಸ್ತಿಗಳ ಉಳಿದ ವಿವರಗಳು ಕೆಳಗಿನಂತಿವೆ:
ಪ್ರಥಮ ಅತ್ಯುತ್ತಮ ಚಿತ್ರ: ರಸಋಷಿ ಕುವೆಂಪು, ನಿರ್ಮಾಪಕ-ಪದ್ಮಾ ಪ್ರಕಾಶ್, ಅರವಿಂದ ಪ್ರಕಾಶ್, ಪ್ರಶಸ್ತಿ ಮೊತ್ತ-ಒಂದು ಲಕ್ಷ ರೂ. ಮತ್ತು 50 ಗ್ರಾಂ ಚಿನ್ನದ ಪದಕ ಹಾಗೂ ಫಲಕ. ನಿರ್ದೇಶಕ (ಎಚ್‌ಎಲ್‌ಎನ್ ಸಿಂಹ ಪ್ರಶಸ್ತಿ)-ಋತ್ವಿಕ್ ಸಿಂಹ, ಪ್ರಶಸ್ತಿ ಮೊತ್ತ-ಒಂದು ಲಕ್ಷ ರೂ ಮತ್ತು 50 ಗ್ರಾಂ ಚಿನ್ನದ ಪದಕ ಹಾಗೂ ಫಲಕ. ದ್ವಿತೀಯ ಅತ್ಯುತ್ತಮ ಚಿ್ರ - ಮನಸಾರೆ, ನಿರ್ಮಾಪಕ- ರಾಕ್‌ಲೈನ್ ವೆಂಕಟೇಶ್, ಪ್ರಶಸ್ತಿ ಮೊತ್ತ 75 ಸಾವಿರ ರೂ.ಮತ್ತು 100 ಗ್ರಾಂ ಬೆಳ್ಳಿಯ ಪದಕ ಹಾಗೂ ಫಲಕ, ನಿರ್ದೇಶಕ-ಯೋಗರಾಜ್ ಭಟ್, ಪ್ರಶಸ್ತಿ ಮೊತ್ತ-75 ಸಾವಿರ ರೂ. ಮತ್ತು 100 ಗ್ರಾಂ ಬೆಳ್ಳಿ ಪದಕ ಹಾಗೂ ಫಲಕ.
ತೃತೀಯ ಅತ್ಯುತ್ತಮ ಚಿ್ರ-ಲವ್‌ಗುರು, ನಿರ್ಮಾಪಕ-ಜಿ.ಎಸ್.ನವೀನ್, ಪ್ರಶಸ್ತಿ ಮೊತ್ತ - 50 ಸಾವಿರ ರೂ. ಮತ್ತು 100 ಗ್ರಾಂ ಬೆಳ್ಳಿಯ ಪದಕ ಹಾಗೂ ಫಲಕ. ನಿರ್ದೇಶಕ-ಪ್ರಶಾಂತ್ ಬಿ.ಎಸ್., ಪ್ರಶಸ್ತಿ ಮೊತ್ತ- 50 ಸಾವಿರ ರೂ. ಮತ್ತು 100 ಗ್ರಾಂ ಬೆಳ್ಳಿಯ ಪದಕ ಹಾಗೂ ಫಲಕ. ವಿಶೇಷ ಸಾಮಾಜಿಕ ಪರಿಣಾಮ ಬೀರುವ ಚಿತ್ರ: ಶಬರಿ, ನಿರ್ಮಾಪಕ-ರಮೇಶ್ ಯಾದವ್, ಪ್ರಶಸ್ತಿ ಮೊತ್ತ-75 ಸಾವಿರ ರೂ.ಮತ್ತು 50 ಗ್ರಾಂ ಚಿನ್ನದ ಪದಕ ಹಾಗೂ ಫಲಕ, ನಿರ್ದೇಶಕ-ಬರಗೂರು ರಾಮಚಂದ್ರಪ್ಪ, ಪ್ರಶಸ್ತಿ ಮೊತ್ತ-75 ಸಾವಿರ ರೂ. ಮತ್ತು 50 ಗ್ರಾಂ ಚಿನ್ನದ ಪದಕ ಹಾಗೂ ಫಲಕ.
ಅತ್ಯುತ್ತಮ ಮಕ್ಕಳ ಚಿತ್ರ: ಪ್ರಥಮ-ಕಿನ್ನರ ಬಾಲೆ, ನಿರ್ಮಾಪಕ-ಎವರೆಸ್ಟ್ ಇಂಡಿಯಾ, ಪ್ರಶಸ್ತಿ ಮೊತ್ತ-50 ಸಾವಿರ ರೂ. ಮತ್ತು 50 ಗ್ರಾಂ ಚಿನ್ನದ ಪದಕ ಹಾಗೂ ಫಲಕ., ನಿರ್ದೇಶಕ-ಪಿ.ಎಚ್.ವಿಶ್ವನಾಥ್, ಪ್ರಶಸ್ತಿ ಮೊತ್ತ-50 ಸಾವಿರ ರೂ.ಮತ್ತು 100 ಗ್ರಾಂ ಬೆಳ್ಳಿಯ ಪದಕ ಹಾಗೂ ಫಲಕ.
ದ್ವಿತೀಯ-ಗುರುಕುಲ, ನಿರ್ಮಾಪಕ-ಎಂ.ಎಸ್.ಫಿಲಂಸ್, ಎಚ್.ಕೆ.ಶ್ರೀನಿವಾಸ್, ಪ್ರಶಸ್ತಿ ಮೊತ್ತ-50 ಸಾವಿರ ರೂ. ಮತ್ತು 50 ಗ್ರಾಂ ಚಿನ್ನದ ಪದಕ ಹಾಗೂ ಫಲಕ., ನಿರ್ದೇಶಕ-ಸುನೀಲ್ ಪುರಾಣಿಕ್, ಪ್ರಶಸ್ತಿ ಮೊತ್ತ-50 ಸಾವಿರ ರೂ.ಮತ್ತು 100 ಗ್ರಾಂ ಬೆಳ್ಳಿಯ ಪದಕ ಹಾಗೂ ಫಲಕ. ಅತ್ಯುತ್ತಮ ನಟ(ಸುಬ್ಬಯ್ಯ ನಾಯ್ಡು ಪ್ರಶಸ್ತಿ)-ಡಾ.ವಿಷ್ಣುವರ್ಧನ್(ಮರಣೋತ್ತರ) ಚಿತ್ರ-ಆಪ್ತರಕ್ಷಕ. ಪ್ರಶಸ್ತಿ ಮೊತ್ತ-20 ಸಾವಿರ ರೂ.100 ಗ್ರಾಂ ಬೆಳ್ಳಿಯ ಪದಕ ಹಾಗೂ ಫಲಕ.
ಅತ್ಯುತ್ತಮ ನಟಿ-ಅನು ಪ್ರಭಾಕರ್, ಚಿತ್ರ-ಪರೀಕ್ಷೆ, ಪ್ರಶಸ್ತಿ ಮೊತ್ತ-20 ಸಾವಿರ ರೂ.100 ಗ್ರಾಂ ಬೆಳ್ಳಿಯ ಪದಕ ಹಾಗೂ ಫಲಕ. ಅತ್ಯುತ್ತಮ ಪೋಷಕ ನಟ(ಕೆ.ಎಸ್.ಅಶ್ವತ್ಥ್ ಪ್ರಶಸ್ತಿ)-ನಿನಾಸಂ ಅಶ್ವತ್ಥ್, ಚಿತ್ರ-ಬನ್ನಿ, ಪ್ರಶಸ್ತಿ ಮೊತ್ತ-10 ಸಾವಿರ ರೂ.100 ಗ್ರಾಂ ಬೆಳ್ಳಿಯ ಪದಕ ಹಾಗೂ ಫಲಕ.
ಅತ್ಯುತ್ತಮ ಪೋಷಕ ನಟಿ-ಚಂದ್ರಕಲಾ(ಚಿತ್ರ-ಋಣಾನುಬಂಧ), ಅತ್ಯತ್ತಮ ಕಂಠದಾನ ಕಲಾವಿದ-ಸಿದ್ದರಾಜ ಕಲ್ಯಾಣಕರ(ಚಿತ್ರ-ಬನ್ನಿ), ಅತ್ಯುತ್ತಮ ಕಂಠದಾನ ಕಲಾವಿದೆ-ದೀಪು(ಚಿತ್ರ-ಜಸ್ಟ್ ಮಾತ್‌ಮಾತಲ್ಲಿ), ಅತ್ಯುತ್ತಮ ಕಥೆ ಬರಹಗಾರ-ನಾಗತಿಹಳ್ಳಿ ಚಂದ್ರಶೇಖರ್(ಚಿತ್ರ-ಒಲವೇ ಜೀವನ ಲೆಕ್ಕಾಚಾರ), ಅತ್ಯುತ್ತಮ ಚಿತ್ರಕಥೆ ಬರಹಗಾರ- ಗುರುಪ್ರಸಾದ್(ಚಿತ್ರ-ಎದ್ದೇಳು ಮಂಜುನಾಥ), ಅತ್ಯುತ್ತಮ ಸಂಭಾಷಣೆಕಾರ- ಗೋಡಚಿ ಮಹಾರುದ್ರ(ಚಿತ್ರ-ಬನ್ನಿ). ಅತ್ಯುತ್ತಮ ಛಾಯಾಗ್ರಾಹಕ-ಸುಂದರನಾಥ ಸುವರ್ಣ(ಚಿತ್ರ-ಕಳ್ಳರ ಸಂತೆ), ಅತ್ಯುತ್ತಮ ಸಂಗೀತ ನಿರ್ದೇಶಕ-ಹರೀಕೃಷ್ಣ(ಚಿತ್ರ-ರಾಜ್), ಅತ್ಯುತ್ತಮ ಧ್ವನಿಗ್ರಾಹಕ-ಕುಮಾರ್(ಚಿತ್ರ-ಜಸ್ಟ್ ಮಾತ್‌ಮಾತಲ್ಲಿ), ಸಂಕಲನಕಾರ-ಶ್ರೀನಿವಾಸ್ ಪಿ.ಬಾಬು(ಚಿತ್ರ-ರಾಜ್), ಬಾಲನಟ-ಮಾ.ಚಿರಂಜೀವಿ(ಚಿತ್ರ-ಏಕಮೇವ), ಬಾಲ ನಟಿ-ಬೇಬಿ ಮಧುಶ್ರೀ(ಚಿತ್ರ-ಕಿನ್ನರಬಾಲೆ), ಅತ್ಯುತ್ತಮ ಕಲಾ ನಿರ್ದೇಶಕ-ವೇಣು(ಚಿತ್ರ-ಆಪ್ತರಕ್ಷಕ), ಅತ್ಯುತ್ತಮ ಗೀತ ರಚನೆಕಾರ-ನಾಗೇಂದ್ರ ಪ್ರಸಾದ್(ಚಿತ್ರ-ಸತ್ಯ, ಗೀತೆ-ಎರಡಕ್ಷರ), ಅತ್ಯುತ್ತಮ ಹಿನ್ನೆಲೆ ಗಾಯಕ-ಟಿಪ್ಪು(ಚಿತ್ರ-ರಾಜ್, ಗೀತೆ-ಪಾರೂ), ಅತ್ಯುತ್ತಮ ಹಿನ್ನೆಲೆ ಗಾಯಕಿ-ಲಕ್ಷ್ಮಿ ನಟರಾಜ್(ಚಿತ್ರ-ಆಪ್ತರಕ್ಷಕ, ಗೀತೆ-ಓಂಕಾರ).
0 comments:
Post a Comment