PLEASE LOGIN TO KANNADANET.COM FOR REGULAR NEWS-UPDATES

ಹೊಸದಿಲ್ಲಿ, ಆ.20: ಅಣ್ಣಾ ತಂಡ ಸೂಕ್ತ ರೀತಿಯಲ್ಲಿ ಸರಕಾರವನ್ನು ಸಂಪರ್ಕಿಸಿದಲ್ಲಿ ಮಾತುಕತೆಗೆ ಕೇಂದ್ರ ಸರಕಾರ ಸಿದ್ಧ ಎಂದು ಕಾಂಗ್ರೆಸ್‌ನ ಉನ್ನತ ಮೂಲಗಳು ತಿಳಿಸಿವೆ.
ಸಶಕ್ತ ಜನಲೋಕಪಾಲ ಮಸೂದೆಯ ಮಂಡನೆಗಾಗಿ ಇಲ್ಲಿನ ರಾಮ್‌ಲೀಲಾ ಮೈದಾನದಲ್ಲಿ ಹಿರಿಯ ಗಾಂಧಿವಾದಿ ಅಣ್ಣಾ ಹಝಾರೆ ತನ್ನ ಸಾವಿರಾರು ಅಭಿಮಾನಿಗಳೊಂದಿಗೆ ನಡೆಸುತ್ತಿರುವ ಉಪವಾಸ ನಿರಶನದ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿ ನಡೆದ ಕಾಂಗ್ರೆಸ್ ಪಕ್ಷದ ಕೋರ್ ಕಮಿಟಿ ಸಭೆಯಲ್ಲಿ ಚರ್ಚಿಸಿದ ಬಳಿಕ ಪ್ರಧಾನಿ ಮನಮೋಹನ್ ಸಿಂಗ್ ಈ ಸಂದೇಶ ರವಾನಿಸಿದ್ದಾರೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.
ನಾಗರಿಕ ಸಮಿತಿ ಸದಸ್ಯರ ತಂಡ ಸರಕಾರದೊಂದಿಗೆ ಮಾತುಕತೆಗೆ ಸಿದ್ಧವಾದಲ್ಲಿ, ಸರಕಾರ ಕೂಡಾ ಅವರೊಂದಿಗೆ ಮಾತುಕತೆಗೆ ಸಿದ್ಧವಾಗಿದೆ. ಯಾವುದೇ ಸಮಸ್ಯೆಯಿಲ್ಲ ಎಂದು ಕಾಂಗ್ರೆಸ್ ಪಕ್ಷದ ಉನ್ನತ ಮೂಲಗಳು ತಿಳಿಸಿವೆ.
ಆಗಸ್ಟ್ 30ರೊಳಗೆ ಸಂಸತ್ತಿನಲ್ಲಿ ಸಶಕ್ತ ಜನಲೋಕಪಾಲ ಮಸೂದೆಯನ್ನು ಜಾರಿಗೊಳಿಸದಿದ್ದಲ್ಲಿ, ಕೊನೆಯ ಉಸಿರುವವರೆಗೂ ಆಮರಣ ನಿರಶನ ಕೈಗೊಳ್ಳುವುದಾಗಿ ಅಣ್ಣಾ ಹಝಾರೆ ಗಡುವು ನೀಡಿದ್ದರಿಂದ, ಸರಕಾರ ಕೂಡಲೇ ಹಝಾರೆ ತಂಡದ ಸದಸ್ಯರೊಂದಿಗೆ ಮಾತುಕತೆ ನಡೆಸಲು ನಿರ್ಧರಿಸಿದೆ.
ಅಣ್ಣಾ ಹಝಾರೆ ನೇತೃತ್ವದ ನಾಗರಿಕ ಸಮಿತಿ, ಸಶಕ್ತ ಜನ ಲೋಕಪಾಲ ಮಸೂದೆಯ ವ್ಯಾಪ್ತಿಗೆ ಪ್ರಧಾನಮಂತ್ರಿ, ನ್ಯಾಯಾಂಗ ಮತ್ತು ಸಂಸತ್ತಿನಲ್ಲಿನ ಸಂಸದರ ನಡುವಳಿಕೆಗಳನ್ನು ಲೋಕಪಾಲ ಸೇರ್ಪಡೆಗೊಳಿಸಬೇಕು ಎಂದು ಸರಕಾರವನ್ನು ಒತ್ತಾಯಿಸುತ್ತಿದೆ.

Advertisement

0 comments:

Post a Comment

 
Top