PLEASE LOGIN TO KANNADANET.COM FOR REGULAR NEWS-UPDATES




: ಭಾವನೆಗಳು ಪ್ರತಿಯೊಬ್ಬರಲ್ಲಿಯೂ ಇರುತ್ತವೆ. ಅದು ಅಕ್ಷರ ರೂಪದಲ್ಲಿ ವ್ಯಕ್ತಪಡಿಸುವದು ಎಲ್ಲರಿಗೂ ಸಾಧ್ಯವಾಗುವುದಿಲ್ಲ. ಅದಕ್ಕೆ ಸತತ ಅಧ್ಯಯನದ ಅಗತ್ಯವಿರುತ್ತದೆ ಎಂದು ಕತೆಗಾರ ಶರಣಪ್ಪ ಬಾಚಲಾಪೂರ ಹೇಳಿದರು. ಅವರು ಕನ್ನಡನೆಟ್.ಕಾಂ ಕವಿಸಮೂಹ ನಗರದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ೪೨ನೇ ಕವಿಸಮಯ ಕಾರ್‍ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಓದುವ ಹವ್ಯಾಸ ಬಹಳ ಕಡಿಮೆಯಾಗಿದೆ. ಮಾಧ್ಯಮಗಳು ಮೂಡನಂಬಿಕೆಯನ್ನು ಹೆಚ್ಚಿಸುತ್ತಿವೆ. ಇಂತಹ ಸಮಯದಲ್ಲಿ ಬರವಣಿಗೆಗೆ ನಿಜಕ್ಕೂ ಬೇಕಾಗಿರುವುದು ಉತ್ತಮ ಓದು. ಜನಪರವಾದ ತುಡಿತ ಸಾಹಿತ್ಯದಲ್ಲಿರಬೇಕು. ಪಿ.ಬಿ.ದುತ್ತರಗಿಯವರಂತಹ ಸಹವಾಸದಿಂದ ಸಾಹಿತ್ಯದ ಒಲುಮೆ ಹೆಚ್ಚಾಯಿತು. ಇತ್ತೀಚಿನ ದಿನಗಳಲ್ಲಿ ಒತ್ತಡಗಳ ನಡುವೆ ಬರವಣಿಗೆ ಕಡಿಮೆಯಾಗಿದೆ ಎಂದರು. ಇದಕ್ಕೂ ಮೊದಲು ಕಥಾವಾಚನವನ್ನು ಹಮ್ಮಿಕೊಳ್ಳಲಾಗಿತ್ತು. "ದಾಳಗಳು" ಕಥೆಯನ್ನು ಸಿರಾಜ್ ಬಿಸರಳ್ಳಿ ವಾಚನ ಮಾಡಿದರು. ನಂತರ ನಡೆದ ಕಾವ್ಯಗೋಷ್ಠಿಯಲ್ಲಿ ಮಹಾಂತೇಶ ಕೊತಬಾಳ- ಅವರು ಪಿಸುಗುಡುತ್ತಾರೆ, ಎನ್.ಜಡೆಯಪ್ಪ-ಶಾಸ್ತ್ರ, ಧೂಳು, ನಟರಾಜ ಸವಡಿ- ಆಹ್ವಾನ, ವಿರಹಗೀತೆ, ನಾಗೇಂದ್ರ ಪ್ರಸಾದ- ಗಾಯಗಳು, ಹನುಮಂತಪ್ಪ ಅಂಡಗಿ- ಒಲವೇ ನಮ್ಮ ಬದುಕು, ವಾಗೀಶ ಪಾಟೀಲ್- ಹಂಬಲ, ಡಾ.ರೇಣುಕಾ ಕರಿಗಾರ- ಹೂ ನಾನು - ದುಂಬಿ ನೀನು, ಮಹೇಶ ಬಳ್ಳಾರಿ- ನಿತ್ಯಾನಂದ, ಪುಷ್ಪಲತಾ ಏಳುಬಾವಿ- ಕೆಂಪು, ಮಲ್ಲಿಕಾರ್ಜುನ ಎಚ್.- ಒಲವಿನ ಓಲೆ, ಮೆಹಮೂದಮಿಯಾ- ದೇಶ ಪ್ರೇಮ ಕವನಗಳನ್ನು ವಾಚನ ಮಾಡಿದರು. ಹಿರಿಯ ಸಾಹಿತಿ ಜಿಲ್ಲೆಯ ಕತೆಗಾರರ ಕುರಿತು ಮಾತನಾಡಿದರು. ಕಾರ್‍ಯಕ್ರಮದಲ್ಲಿ ಡಾ.ಮಹಾಂತೇಶ ಮಲ್ಲನಗೌಡರ,ಶಿವಾನಂದ ಹೊದ್ಲೂರ, ತಿಪ್ಪೇಸ್ವಾಮಿ ಬೋದಾ, ಬಸವರಾಜ ಶೀಲವಂತರ, ರಾಕೇಶ ಮುಂತಾದವರು ಭಾಗವಹಿಸಿದ್ದರು. ಸ್ವಾಗತವನ್ನು ಮಹೇಶ ಬಳ್ಳಾರಿ, ವಂದನಾರ್ಪಣೆಯನ್ನು ಎನ್.ಜಡೆಯಪ್ಪ ಮಾಡಿದರೆ ಸಿರಾಜ್ ಬಿಸರಳ್ಳಿ ಕಾರ್‍ಯಕ್ರಮ ನಡೆಸಿಕೊಟ್ಟರು.

Advertisement

0 comments:

Post a Comment

 
Top