PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ,ಜ೨೫: ಸಂಗೀತ ಕ್ಷೇತ್ರದಲ್ಲಿ ಪಂಡಿತ ಭೀಮಸೇನ ಜ್ಯೋಯವರು ಸಂಗೀತ ಲೋಕದ ಮೇರು ಪರ್ವತವಾಗಿದ್ದರು ಎಂದು ಕಸಾಪ ಜಿಲ್ಲಾಧ್ಯಕ್ಷ ಶೇಖರಗೌಡ ಮಾಲಿಪಾಟೀಲ ಅವರು ಅಭಿಪ್ರಾಯಪಟ್ಟರು.
ನಗರದ ಸಹಕಾರಿ ಯೂನಿಯನ ಕಾರ್ಯಾಲಯದಲ್ಲಿ ಜಿಲ್ಲಾ ಕಸಾಪ ಹಾಗೂ ತಾಲೂಕ ಕಸಾಪದ ವತಿಂದ ಹಮ್ಮಿ ಕೊಳ್ಳಲಾಗಿದ್ದ ಪಂ. ಭೀಮಸೇನ ಜ್ಯೋಯವರಿಗೆ ಶ್ರದ್ಧಾಂಜಲಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಸಂಗೀತ ಕ್ಷೇತ್ರದ ಧೀಮಂತ ಪ್ರತಿಭೆಯಾದ ಜ್ಯೋಯವರು ತಮ್ಮ ಬಾಲ್ಯದಿಂದಲೇ ಈ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು ಎಂಬ ಅಪಾರ ಆಶೆಯನ್ನು ಇಟ್ಟುಕೊಂಡ ಅದ್ಭುತ ವ್ಯಕ್ತಿಯಾಗಿದ್ದರು ಎಂದ ಅವರು, ಜ್ಯೋಯವರಿಗೆ ಭಾರತ ಸರಕಾರದಿಂದ ಭಾರತ ರತ್ನ ಹಾಗೂ ಕರ್ನಾಟಕ ಸರಕಾರದಿಂದ ಕರ್ನಾಟಕ ರತ್ನ ಪ್ರಶಸ್ತಿಗಳು ಸೇರಿದಂತೆ ಹತ್ತು ಹಲವಾರು ಪ್ರಶಸ್ತಿ, ಸನ್ಮಾನಗಳು ಹುಡುಕಿಕೊಂಡು ಬಂದಿದ್ದವು ಎಂದು ಹೇಳಿದರು.
ನಾಡಿನ ಸಂಗೀತವನ್ನು ರಾಷ್ಟ್ರ, ಅಂತರ್‍ಟ್ರಾಯ ಮಟ್ಟದಲ್ಲಿ ಬೆಳಗಿಸಿದ ಕೀರ್ತಿ ಪಂ.ಜ್ಯೋಯವರಿಗೆ ಸಲ್ಲುತ್ತದೆ. ಮತ್ತು ನಾಡಿನ ಇನ್ನೊಬ್ಬ ಗಾನಗಂಗೆಯಾಗಿದ್ದ ಗಂಗೂಬಾಯಿ ಹಾನಗಲ್ ಅವರೊಂದಿಗೆ ಸಹೋದರತ್ವದ ಭಾವನೆಯೊಂದಿಗೆ ಸಂಬಂಧವನ್ನು ಹೊಂದಿದ್ದರು. ಪಂ.ಜ್ಯೋಯವರ ಆತ್ಮಕ್ಕೆ ಶಾಂತಿ ಹಾಗೂ ಅಗಲಿಕೆಂದ ಅವರ ಕುಟುಂಬ ವರ್ಗಕ್ಕೆ ದುಃಖವನ್ನು ತಡೆದುಕೊಳ್ಳುವ ದೈರ್ಯ ನೀಡಲಿ ಎಂದು ಅವರು ಪ್ರಾರ್ಥಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಹಿರಿಯ ಸಾಹಿತಿ ವಿಠ್ಠಪ್ಪ ಗೋರಂಟ್ಲಿ, ಪಂ.ಜ್ಯೋಯವರ ೮೯ ವರ್ಷಗಳ ಬದುಕು ಬಹಳಷ್ಟು ಅರ್ಥಪೂರ್ಣ ಹಾಗೂ ಸಾರ್ಥಕತೆಂದ ಕೂಡಿರುವಂತದಾಗಿತ್ತು ಎಂದು ಅಭಿಪ್ರಾಯ ಪಟ್ಟರು.
ಚಿಕ್ಕಂದಿನಿಂದಲೇ ಪಂ.ಜ್ಯೋಯವರ ಗುರುಗಳಾದ ಸವಾಯಿ ಗಂಧರ್ವರ ಬಳಿ ಬಹಳಷ್ಟು ಶ್ರದ್ಧೆಂದ ಸಂಗೀತವನ್ನು ಕಲಿತವರಾಗಿದ್ದರು. ಮತ್ತು ಗುರು ಸೇವೆ ಹಾಗೂ ಅದ್ಭುತ ಪ್ರತಿಭೆಂದಾಗಿ ಜ್ಯೋಯವರು ಸಂಗೀತ ಕ್ಷೇತ್ರದಲ್ಲಿ ಅತಿ ಎತ್ತರಕ್ಕೆ ಬೆಳೆದವರಾಗಿದ್ದವರು ಎಂದು ಹೇಳಿದರು.
ಕೊಪ್ಪಳ ತಾಲೂಕ ಕಸಾಪ ಅಧ್ಯಕ್ಷ ಜಿ.ಎಸ್.ಗೋನಾಳ,ಶರಣಬಸಪ್ಪ ಕಾಟ್ರಳ್ಳಿ ಈ ಸಂದರ್ಭದಲ್ಲಿ ಮಾತನಾಡಿದರು. ಡಾ.ಮಹಾಂತೇಶ ಮಲ್ಲನಗೌಡರ, ಪ್ರಮೋದ ತುರ್ವಿಹಾಳ, ಪತ್ರಕರ್ತರಾದ ವೈ.ಬಿ.ಜೂಡಿ, ಎನ್.ಎಂ.ದೊಡ್ಡಮನಿ, ಶಿವರಾಜ ನುಗಡೋಣಿ, ಬಸಪ್ಪ ದೇಸಾ ಗಿರಿಶ್ ಪಾನಘಂಟಿ, ಶ್ರೀನಿವಾಸ ಚಿತ್ರಗಾರ ಎ.ಪಿ.ಅಂಗಡಿ ಉಪಸ್ಥಿತಿರಿದ್ದರು. ಜಿಲ್ಲಾ ಕಸಾಪ ಗೌರವ ಖಜಾಂಚಿ ರಾಜಶೇಖರ ಅಂಗಡಿ ಸ್ವಾಗತಿಸಿದರು.


Advertisement

0 comments:

Post a Comment

 
Top