PLEASE LOGIN TO KANNADANET.COM FOR REGULAR NEWS-UPDATES

ನಾಡಿನಲ್ಲಿ ಈಗ ಚಳಿಗಾಲದ ಸಮಯ. ವಾತಾವರಣದಲ್ಲಿ ಹೆಚ್ಚಿನ ಚಳಿ ಬೀಳುತ್ತಿದ್ದು, ಜನ ಗಡಗಡ ನಡುಗುವಂತೆ ಮಾಡಿದೆ. ಆದರೆ ಸದ್ಯ ರಾಜ್ಯಾದ್ಯಂತ ಜಿಲ್ಲಾ ಪಂಚಾಯತ್ ಹಾಗೂ ತಾಲೂಕಾ ಪಂಚಾಯತ್ ಸಾರ್ವತ್ರಿಕ ಚುನಾವಣೆ ಘೋಷಣೆಯಾಗಿರುವುದರಿಂದ, ಚುನಾವಣೆ ಗ್ರಾಮೀಣ ಜನರಲ್ಲಿ ಬಿಸಿಯ ಅನುಭವ ಮೂಡಿಸಿದೆ. ಗ್ರಾಮೀಣ ಜನರು ತಮ್ಮ ನೆಚ್ಚಿನ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವಂತಹ ಸುಸಂದರ್ಭ ಒದಗಿಬಂದಿದೆ. ಇಂತಹ ಸಂದರ್ಭದಲ್ಲಿ ಕಳೆದ ೨೦೦೫ ರಲ್ಲಿ ನಡೆದ ಜಿಲ್ಲಾ ಪಂಚಾಯತ್ ಚುನಾವಣೆಯ ಆಗು ಹೋಗುಗಳ ಕಡೆ ಒಮ್ಮೆ ಗಮನ ಹರಿಸಿದಾಗ ನಿಜಕ್ಕೂ ರೋಚಕ ಅನುಭವ ನೀಡುತ್ತದೆ.
ಕಳೆದ ೨೦೦೫ ರ ಡಿಸೆಂಬರ್ ೨೩ ರಂದು ಜಿಲ್ಲಾ ಪಂಚಾಯತ್‌ಗೆ ನಡೆದ ಚುನಾವಣೆ ಸಂದರ್ಭದಲ್ಲಿ ಎಷ್ಟು ಜನ ಅಭ್ಯರ್ಥಿಗಳು ಕದನ ಕಣದಲ್ಲಿದ್ದರು, ಡಿ. ೨೭ ರಂದು ನಡೆದ ಮತ ಎಣಿಕೆಯ ನಂತರ ಯಾರು ವಿಜಯಮಾಲೆ ಧರಿಸಿದರು, ಅಲ್ಪ ಮತಗಳ ಅಂತರದಲ್ಲಿ ಸೋಲು ಅನುಭವಿಸಿದ ಅಭ್ಯರ್ಥಿಗಳು ಯಾರು ಎಂಬುದನ್ನು ಜನತೆ ಈಗಾಗಲೆ ಮರೆಯುವ ಹಂತ ತಲುಪಿದ್ದಾರೆ. ಜಿ.ಪಂ. ಸದಸ್ಯರಾಗಿ ಆಯ್ಕೆಯಾಗಿದ್ದಂತಹ ಅಭ್ಯರ್ಥಿಗಳು ತಮ್ಮ ತಮ್ಮ ಕ್ಷೇತ್ರದಲ್ಲಿ ಎಷ್ಟೆಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ, ಯಾರು ವಿಫಲವಾಗಿದ್ದಾರೆ ಎಂಬುದು ಆಯಾ ಕ್ಷೇತ್ರದ ಜನತೆಯ ಗಮನಕ್ಕೆ ಬಂದಿರಬಹುದಾಗಿದೆ.
ಕಳೆದ ೨೦೦೫ ರಲ್ಲಿ ಜಿ.ಪಂ. ಹಾಗೂ ತಾ.ಪಂ. ಚುನಾವಣೆ ಘೋಷಣೆಯಾದ ಸಂದರ್ಭದಲ್ಲಿ ಜಿಲ್ಲೆಯಲ್ಲಿ ೩೪೨೬೯೭ ಪುರುಷ ಮತದಾರರು ಹಾಗೂ ೩೪೮೮೪೭ ಮ"ಳಾ ಮತದಾರರು ಸೇರಿದಂತೆ ೬೯೧೫೪೪ ಮತದಾರರಿದ್ದರು. ಮತದಾನ ಪ್ರಕ್ರಿಯೆ ಸುಗಮವಾಗಿ ನಡೆಯಲು ೮೬೪ ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಆ ಪೈಕಿ ೩೦೭ ಸೂಕ್ಷ್ಮ, ೩೫೦ ಅತಿಸೂಕ್ಷ್ಮ ಹಾಗೂ ೨೦೭ ಸಾಮಾನ್ಯ ಮತಗಟ್ಟೆಗಳಾಗಿದ್ದವು. ಮತದಾನ ಕಾರ್ಯದ ಸಂದರ್ಭದಲ್ಲಿ ೫೧೮೪ ಸಿಬ್ಬಂದಿಗಳು ಹಾಗೂ ೫೧೬ ಹೆಚ್ಚುವರಿ ಸಿಬ್ಬಂದಿಗಳನ್ನು ನಿಯೋಜಿಸಲಾಗಿತ್ತು. ಡಿ. ೨೭ ರಂದು ನಡೆದ ಮತ ಎಣಿಕೆ ಕಾರ್ಯಕ್ಕಾಗಿ ಸುಮಾರು ೭೯೧ ಸಿಬ್ಬಂದಿಗಳನ್ನು ನೇಮಿಸಲಾಗಿತ್ತು. ಜಿಲ್ಲೆಯಾದ್ಯಂತ ಮತದಾನ ಹಾಗೂ ಮತ ಎಣಿಕೆ ಕಾರ್ಯ ಸುಗಮವಾಗಿ ಹಾಗೂ ಶಾಂತಿಯುತವಾಗಿ ನಡೆದು, ಜಿಲ್ಲಾಡಳಿತ ಎಲ್ಲರ ಶ್ಲಾಘನೆಗೆ ಪಾತ್ರವಾತು. ಕೊಪ್ಪಳ ಜಿಲ್ಲಾ ಪಂಚಾಯತಿಯ ಒಟ್ಟು ೨೭ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಒಟ್ಟು ೧೨೮ ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದರು. ಕೊಪ್ಪಳ ಜಿಲ್ಲಾ ಪಂಚಾಯತಿಗೆ ನಡೆದ ಚುನಾವಣೆಯಲ್ಲಿ ಗೆದ್ದಂತಹ ಹಾಗೂ ಸಮೀಪದ ಸೋಲು ಅನುಭವಿಸಿದ ಅಭ್ಯರ್ಥಿಗಳ ವಿವರ ಮತ್ತು ಅವರು ಪಡೆದಂತಹ ಮತಗಳ ಸಂಖ್ಯೆಯ ವಿವರ ಈ ಕೆಳಗಿನಂತಿದೆ. ಅಭ್ಯರ್ಥಿಗಳು ಪಡೆದ ಒಟ್ಟು ಮತಗಳನ್ನು ಆವರಣದಲ್ಲಿ ನಮೂದಿಸಲಾಗಿದೆ.
ಕೊಪ್ಪಳ ತಾಲೂಕು ವ್ಯಾಪ್ತಿಯಲ್ಲಿ ಬರುವ ಅಳವಂಡಿ ಕ್ಷೇತ್ರದ ಸದಸ್ಯ ಸ್ಥಾನಕ್ಕಾಗಿ ನಡೆದ ಚುನಾವಣೆಯಲ್ಲಿ ಒಟ್ಟು ೦೪ ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಆ ಪೈಕಿ ಕಾಂಗ್ರೆಸ್ ಅಭ್ಯರ್ಥಿ ಕೆ. ರಾಘವೇಂದ್ರ "ಟ್ನಾಳ್ ಅವರು (೮೫೮೮), ಜೆಡಿಎಸ್ ಅಭ್ಯರ್ಥಿ ಗೋಣೇಶ್ ಉಪ್ಪಾರ್ (೭೭೮೨) ಅವರಿಗಿಂತ ೮೦೬ ಅಧಿಕ ಮತಗಳಿಸಿ ಗೆಲುವು ಸಾದಿಸಿದರು. "ರೇಸಿಂದೋಗಿ ಕ್ಷೇತ್ರದ ಸ್ಥಾನಕ್ಕಾಗಿ ನಡೆದ ಚುನಾವಣೆಯಲ್ಲಿ ಒಟ್ಟು ೦೭ ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಆ ಪೈಕಿ ಕಾಂಗ್ರೆಸ್ ಅಭ್ಯರ್ಥಿ ಈಶಪ್ಪ ಮಾದಿನೂರ (೬೩೬೯) ಅವರು ಸ"ಪದ ಸ್ಪರ್ಧಿ ಜೆಡಿಎಸ್ ಪಕ್ಷದ ಗುರನಗೌಡ ಪಾಟೀಲ್ ಹಲಗೇರಿ (೫೧೫೮) ಅವರಿಗಿಂತ ೧೨೧೧ ಹೆಚ್ಚು ಮತಗಳನ್ನು ಪಡೆದು "ಜೇತರಾದರು. ಲೇಬಗೇರಾ ಕ್ಷೇತ್ರದ ಚುನಾವಣೆಯಲ್ಲಿ ಒಟ್ಟು ೦೫ ಅಭ್ಯರ್ಥಿಗಳು ಆಯ್ಕೆ ಬಯಸಿ ಸ್ಪರ್ಧೆಯಲ್ಲಿದ್ದರು. ಆ ಪೈಕಿ ಜೆಡಿಎಸ್ ಅಭ್ಯರ್ಥಿ ಪ್ರಸನ್ನ ಗಡಾದ್ ಅವರು(೮೧೬೯) ಕಾಂಗ್ರೆಸ್ ಅಭ್ಯರ್ಥಿ ತುಕಾರಾಮಪ್ಪ ಗಡಾದ (೬೧೩೧) ಅವರನ್ನು ೨೦೩೮ ಮತಗಳ ಅಂತರದಿಂದ ಸೋಲಿಸಿದರು. ಇರಕಲ್ಲಗಡಾ ಕ್ಷೇತ್ರದ ಸದಸ್ಯ ಸ್ಥಾನಕ್ಕಾಗಿ ಒಟ್ಟು ೦೬ ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಇವರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಮರೇಶ್ ಹೊಸಮನಿ ಅವರು ಗಳಿಸಿದ್ದು ೪೮೮೧ ಮತಗಳಾದರೆ, ಸ"ಪದ ಪ್ರತಿಸ್ಪರ್ಧಿ ಜೆಡಿಎಸ್‌ನ ಬಸವಕುಮಾರ ಪಟ್ಟಣಶೆಟ್ಟಿ ೪೩೪೩ ಮತಗಳನ್ನು ಪಡೆದರು, ಗೆಲು"ನ ಅಂತರ ೫೩೮ ಮತಗಳು. ಕುತೂಹಲ ಮೂಡಿಸಿದ್ದ ಬಂಡಿಹರ್ಲಾಪುರ ಕ್ಷೇತ್ರದ ಚುನಾವಣೆಯಲ್ಲಿ ೦೪ ಅಭ್ಯರ್ಥಿಗಳು ಅಂತಿಮ ಕಣದಲ್ಲಿ ಉಳಿದಿದ್ದರು. ಜಿದ್ದಾಜಿದ್ದಿನಿಂದ ಕೂಡಿದ್ದ ಈ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪಾರ್ವತಿ ಪರಶುರಾಮುಲು (೬೯೮೧) ಅವರು ಜೆಡಿಎಸ್ ಪಕ್ಷದ ". ನರಸಮ್ಮ ಈಶ್ವರಪ್ಪ ಕಂಪಸಾಗರ (೫೪೦೩) ಅವರಿಗಿಂತ ೧೫೭೮ ಹೆಚ್ಚು ಮತಗಳನ್ನು ಪಡೆದು ಆಯ್ಕೆಗೊಂಡರು.
"ಟ್ನಾಳ್ ಕ್ಷೇತ್ರದಿಂದ ಆಯ್ಕೆ ಬಯಸಿ ಕಣದಲ್ಲಿದ್ದುದು ಒಟ್ಟು ೦೬ ಅಭ್ಯರ್ಥಿಗಳು, ಆ ಪೈಕಿ ಜೆಡಿಎಸ್ ಅಭ್ಯರ್ಥಿ ಎ. ಕಲಾವತಿ ಸುಬ್ಬಾರೆಡ್ಡಿ (೫೯೫೯) ಅವರು ತಮ್ಮ ಸ"ಪದ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಡಾ: ರುಕ್ಸಾನಾ ಬೇಗಂ (೪೬೦೬) ಅವರಿಗಿಂತ ೧೩೫೩ ಹೆಚ್ಚು ಮತಗಳನ್ನು ಪಡೆದು "ಜಯಶಾಲಿಯಾದರು. ತುರುಸಿನಿಂದ ನಡೆದ ಗಿಣಿಗೇರಾ ಕ್ಷೇತ್ರದ ಚುನಾವಣೆಯಲ್ಲಿ ಒಟ್ಟು ೦೮ ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಆ ಪೈಕಿ ಕಾಂಗ್ರೆಸ್ ಅಭ್ಯರ್ಥಿ ಯಂಕಪ್ಪ ಕ್ಯಾಶಪ್ಪನವರ (೪೪೭೮) ಅವರು ಜೆಡಿಎಸ್‌ನ ತೋಟಪ್ಪ ಕಾಮನೂರ (೪೨೪೪) ಅವರಿಗಿಂತ ಕೇವಲ ೨೩೪ ಹೆಚ್ಚು ಮತಗಳನ್ನು ಪಡೆದು "ಜಯದ ನಗೆ ಬೀರಿದರು.
ಗಂಗಾವತಿ ತಾಲೂಕು ವ್ಯಾಪ್ತಿಯ ಪ್ರತ್ಠಿತ ಕ್ಷೇತ್ರಗಳಲ್ಲೊಂದಾದ ಆನೆಗುಂದಿ ಕ್ಷೇತ್ರದ ಸ್ಪರ್ಧೆಯಲ್ಲಿ ೧೦ ಅಭ್ಯರ್ಥಿಗಳು ಆಯ್ಕೆ ಬಯಸಿ ಕಣದಲ್ಲಿದ್ದರು, ಈ ಸ್ಪರ್ಧಿಗಳ ಪೈಕಿ ಕಾಂಗ್ರೆಸ್ ಅಭ್ಯರ್ಥಿ ಪರಶುರಾಮ ಬಾಲಪ್ಪ (೭೧೬೦) ಅವರು ತಮ್ಮ ಸ"ಪದ ಸ್ಪರ್ಧಿ ಜೆಡಿಎಸ್‌ನ ದೇವಪ್ಪ ಕಾಮದೊಡ್ಡಿ (೩೯೫೬) ಅವರಿಗಿಂತ ೩೨೦೪ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿದರು. ಮರಳಿ ಕ್ಷೇತ್ರದ ಚುನಾವಣೆಯಲ್ಲಿ ೦೪ ಅಭ್ಯರ್ಥಿಗಳು ಸ್ಪರ್ಧಿಸಿದ್ದರು, ಆ ಪೈಕಿ ಜೆಡಿಎಸ್ ಅಭ್ಯರ್ಥಿ ಎನ್. ಶೇಷರತ್ನಂ ಚಂದ್ರರಾವ್ (೬೦೭೫) ಅವರು ಕಾಂಗ್ರೆಸ್ ಅಭ್ಯರ್ಥಿ "ಜಯಲಕ್ಷ್ಮಿ ರಾಮಕೃಷ್ಣ (೬೨೩೪) ಅವರಿಗಿಂತ ಕೇವಲ ೧೫೯ ಅಲ್ಪ ಮತಗಳ ಅಂತರದಿಂದ ಸೋಲನ್ನು ಅನುಭ"ಸಿದರು. ಸಿದ್ದಾಪುರ ಕ್ಷೇತ್ರದ ಸ್ಪರ್ಧೆಯಲ್ಲಿ ಕಣದಲ್ಲಿದ್ದಿದ್ದು ೦೪ ಅಭ್ಯರ್ಥಿಗಳು, ಇವರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಬಿ. ಬಸವರಾಜಪ್ಪ (೯೯೧೪) ಅವರು ಪಕ್ಷೇತರ ಅಭ್ಯರ್ಥಿ ಪರನಗೌಡ ಪವಾಡಿಗೌಡರ (೪೪೭೯) ಅವರನ್ನು ೫೪೩೫ ಮತಗಳ ಬೃಹತ್ ಅಂತರದಿಂದ ಸೋಲುಣಿಸಿದರು. ಕಾರಟಗಿ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ ಅಂತಿಮ ಕಣದಲ್ಲಿ ಉಳಿದಿದ್ದು ಕೇವಲ ೦೨ ಅಭ್ಯರ್ಥಿಗಳು ಮಾತ್ರ, ಕುತೂಹಲ ಮೂಡಿಸಿದ್ದ ಈ ಸ್ಪಧೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ದೇವಪ್ಪ ಕಂಟೆಪ್ಪ ಖೈರವಾಡಗಿ (೯೪೩೩) ಅವರು ತಮ್ಮ ಪ್ರತಿಸ್ಪರ್ಧಿ ಜೆಡಿಎಸ್ ಪಕ್ಷದ ಪರಮೇಶಪ್ಪ ಬಸಲಿಂಗಪ್ಪ (೬೬೭೪) ಅವರಿಗಿಂತ ೨೭೫೯ ಅಧಿಕ ಮತಗಳನ್ನು ಪಡೆದು "ಜಯಮಾಲೆ ಧರಿಸಿದರು. ಅತ್ಯಂತ ಜಿದ್ದಾಜಿದ್ದಿನಿಂದ ಕೂಡಿದ್ದ ಹೇರೂರು ಕ್ಷೇತ್ರದ ಸ್ಪರ್ಧೆಯಲ್ಲಿ ಒಟ್ಟು ೦೫ ಅಭ್ಯರ್ಥಿಗಳು ಆಯ್ಕೆ ಬಯಸಿದ್ದರು. ಅವರಲ್ಲಿ ಜೆಡಿಎಸ್ ಅಭ್ಯರ್ಥಿ ಮಂಜುನಾಥ ಕೇಸರಹಟ್ಟಿ (೮೮೦೪) ಅವರು ತಮ್ಮ ಸ"ಪದ ಪ್ರತಿಸ್ಫರ್ದಿ ಕಾಂಗ್ರೆಸ್‌ನ ಹೇರೂರು "ರುಪಾಕ್ಷಗೌಡ ದಾನನಗೌಡ (೮೬೬೩) ಅವರಿಗಿಂತ ಕೇವಲ ೧೪೧ ಅಧಿಕ ಮತಗಳನ್ನು ಪಡೆದು ಆಯ್ಕೆಯಾದರು. ಕನಕಗಿರಿ ಕ್ಷೇತ್ರದ ಸ್ಪಧೆಯಲ್ಲಿ ೦೫ ಅಭ್ಯರ್ಥಿಗಳು ಸ್ಪರ್ಧಿಸಿದರು, ಆ ಪೈಕಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸ"ತಾ ಕೆ. ಗಂಗಾಧರಸ್ವಾ" (೭೪೬೦) ತಮ್ಮ ಸ"ಪದ ಪ್ರತಿಸ್ಪರ್ಧಿ ಬಿಜೆಪಿ ಪಕ್ಷದ ಅಭ್ಯರ್ಥಿ ಪಾರ್ವತಮ್ಮ "ರುಪಾಕ್ಷಪ್ಪ ಭತ್ತದ (೬೩೨೧) ಅವರನ್ನು ೧೧೩೯ ಮತಗಳ ಅಂತರದಿಂದ ಸೋಲಿಸಿ, ಆಯ್ಕೆಯಾದರು. ಕುತೂಹಲ ಮೂಡಿಸಿದ ಹುಲಿಹೈದರ ಕ್ಷೇತ್ರದ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಕೇವಲ ೦೨ ಅಭ್ಯರ್ಥಿಗಳು ಮಾತ್ರ, ಇವರಲ್ಲಿ ಕಾಂಗ್ರೆಸ್ ಅಭ್ಯರ್ತಿ ಸುಜಾತಾ ಹನುಮೇಶನಾಯಕ್ (೮೦೯೧) ಅವರು ಬಿಜೆಪಿ ಅಭ್ಯರ್ಥಿ ಕೆ. ಬಸವರಾಜೇಶ್ವರಿ (೬೪೬೮) ಅವರಿಗಿಂತ ೧೬೨೩ ಅಧಿಕ ಮತಗಳನ್ನು ಪಡೆದು "ಜಯಶಾಲಿಯಾದರು. ನವಲಿ ಕ್ಷೇತ್ರದ ಸದಸ್ಯ ಸ್ಥಾನಕ್ಕೆ ನಡದ ಸ್ಪರ್ಧೆಯಲ್ಲಿ ೦೨ ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದರು. ಆ ಪೈಕಿ ಬಿಜೆಪಿ ಪಕ್ಷದ ಅಭ್ಯರ್ಥಿ ಬಾಲಪ್ಪ ಮಹಾಂತಪ್ಪ ಹೂಗಾರ (೭೬೬೦) ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಶರಣಪ್ಪ ನಾಗೋಜಿ (೭೩೦೩) ಅವರನ್ನು ೩೫೭ ಮತಗಳ ಅಂತರದಿಂದ ಸೋಲಿಸಿ ಆಯ್ಕೆಯಾದರು.
ಕುಷ್ಟಗಿ ತಾಲೂಕು ವ್ಯಾಪ್ತಿಯಲ್ಲಿ ಬರುವ ಹನುಮನಾಳ ಕ್ಷೇತ್ರದ ಸ್ಪರ್ಧೆಯಲ್ಲಿ ಕಣದಲ್ಲಿದ್ದಿದ್ದು ೦೬ ಅಭ್ಯರ್ಥಿಗಳು, ಅವರಲ್ಲಿ ಜೆಡಿಎಸ್ ಅಭ್ಯರ್ಥಿ ಮಾಲತಿ ರಾಮಚಂದ್ರ ನಾಯಕ್ (೪೪೫೪) ಅವರು ಸ"ಪದ ಪ್ರತಿಸ್ಪರ್ದಿಯಾದ ಪಕ್ಷೇತರ ಅಭ್ಯರ್ಥಿ ಜಗದೀಶ್ ಭೀಮಪ್ಪ ಇಟಗಿ (೩೯೯೯) ಅವರನ್ನು ೪೫೫ ಮತಗಳ ಅಂತರದಿಂದ ಮಣಿಸಿದರು. ಹನುಮಸಾಗರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸ್ಪರ್ಧಿಸಿದ್ದು ಒಟ್ಟು ೦೩ ಅಭ್ಯರ್ಥಿಗಳು, ಆ ಪೈಕಿ ಪಕ್ಷೇತರ ಅಭ್ಯರ್ಥಿ ಫಕೀರಪ್ಪ ಸೋಮಪ್ಪ ವಕೀಲರು (೬೫೧೨), ಕಾಂಗ್ರೆಸ್ ಪಕ್ಷದ ಅಭ್ಯಥಿ ಮಲ್ಲಣ್ಣ ಹನುಮಪ್ಪ ಪಲ್ಲೇದ (೫೬೬೦) ಅವರಿಗಿಂತ ೮೫೨ ಅಧಿಕ ಮತಗಳನ್ನು ಪಡೆದು ಆಯ್ಕೆಯಾದರು. ಚಳಗೇರಾ ಕ್ಷೇತ್ರದ ಚುನಾವಣೆಯಲ್ಲಿ ೦೩ ಅಭ್ಯರ್ಥಿಗಳು ಸ್ಪರ್ಧಿಸಿದ್ದರು, ಇವರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ್ ಎಲ್ ರಾಠೋಡ್ (೬೪೦೩) ಅವರು ಪಕ್ಷೇತರ ಅಭ್ಯರ್ಥಿ ನಾಗರಾಜ ಹನುಮಪ್ಪ (೪೫೮೭) ಅವರನ್ನು ೧೮೧೬ ಮತಗಳ ಅಂತರದಿಂದ ಸೋಲಿಸಿ, ಗೆಲು"ನ ನಗು ಬೀರಿದರು. ಕೊರಡಕೇರಾ ಕ್ಷೇತ್ರದ ಸದಸ್ಯ ಸ್ಥಾನಕ್ಕೆ ನಡೆದ ಚುನಾವಣೆಗಾಗಿ ಸ್ಪರ್ಧಿಸಿದ್ದು ೦೪ ಅಭ್ಯರ್ಥಿಗಳು, ಆ ಪೈಕಿ ಪಕ್ಷೇತರರಾಗಿ ಸ್ಪರ್ಧಿಸಿದ ಶಾವಮ್ಮ ಮರಿಯಪ್ಪ ಕತ್ತಿ (೫೫೯೮) ತಮ್ಮ ಸ"ಪದ ಪ್ರತಿಸ್ಪರ್ಧಿ ಜೆಡಿಎಸ್‌ನ ಗಿರಿಜಾ ಟಾಕನಗೌಡ ಪಾಟೀಲ್ (೩೯೧೯) ಅವರಿಗಿಂತ ೧೬೭೯ ಅಧಿಕ ಮತಗಳನ್ನು ಪಡೆದು ಆಯ್ಕೆಗೊಂಡರು. "ರೇಮನ್ನಾಪುರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕಣದಲ್ಲಿ ಉಳಿದಿದ್ದು ಬರೋಬ್ಬರಿ ೦೮ ಅಭ್ಯರ್ಥಿಗಳು, ಇವರ ಪೈಕಿ ಜೆಡಿಎಸ್ ಅಭ್ಯರ್ಥಿ ದೊಡ್ಡಯ್ಯ ಗದ್ದಡಕಿ (೫೦೫೧) ಅವರು ತಮ್ಮ ಸ"ಪದ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಶೇಖರಗೌಡ ಮಾಲಿಪಾಟೀಲ್ (೩೯೮೪) ಅವರನ್ನು ೧೦೬೭ ಮತಗಳಿಂದ ಸೋಲಿಸಿ ಆಯ್ಕೆಗೊಂಡರು. ತಾವರಗೇರಾ ಕ್ಷೇತ್ರದ ಸ್ಪರ್ಧೆಯಲ್ಲಿದ್ದಿದ್ದು ೦೪ ಅಭ್ಯರ್ಥಿಗಳು, ಇವರಲ್ಲಿ ಕಾಂಗ್ರೆಸ್‌ನ ಭಾಗ್ಯಲಕ್ಷ್ಮಿ ಸುರೇಶ ಐಲಿ (೫೦೧೬) ಅವರು ಜೆಡಿಎಸ್ ಅಭ್ಯರ್ಥಿ ಸುವರ್ಣ ಶೇಖರಪ್ಪ (೪೮೩೬) ಅವರಿಗಿಂತ ೧೪೭೨ ಅಧಿಕ ಮತಗಳನ್ನು ಪಡೆದು "ಜೇತರಾದರು.


ಯಲಬುರ್ಗಾ ತಾಲೂಕು ವ್ಯಾಪ್ತಿಯ "ರೇವಂಕಲಕುಂಟಾ ಕ್ಷೇತ್ರದ ಚುನಾವಣೆಯಲ್ಲಿ ೦೪ ಅಭ್ಯರ್ಥಿಗಳು ಸ್ಪರ್ಧಿಸಿದರು. ಆ ಪೈಕಿ ಕಾಂಗ್ರೆಸ್ ಅಭ್ಯರ್ಥಿ ದೇವೇಂದ್ರಪ್ಪ ತಳವಾರ (೭೨೭೮) ಅವರು ಜೆಡಿಎಸ್ ಅಭ್ಯರ್ಥಿ ಶರಣಪ್ಪ ಹೊಸಕೇರಾ (೫೪೩೬) ಅವರಿಗಿಂತ ೧೮೪೨ ಅಧಿಕ ಮತಗಳನ್ನು ಪಡೆದು ಆಯ್ಕೆಗೊಂಡರು. ಚಿಕ್ಕಮ್ಯಾಗೇರಿ ಕ್ಷೇತ್ರ ಸ್ಪರ್ಧೆಯಲ್ಲಿ ಕಣದಲ್ಲಿ ಇದ್ದದ್ದು ೦೬ ಅಭ್ಯರ್ಥಿಗಳು, ಇವರ ಪೈಕಿ ಕಾಂಗ್ರೆಸ್ ಅಭ್ಯರ್ಥಿ "ಜಯಲಕ್ಷ್ಮಿ ರಾಮಣ್ಣ ಭಜಂತ್ರಿ (೭೬೩೧) ಅವರು ಸ"ಪದ ಪ್ರತಿಸ್ಪರ್ಧಿ ಜೆಡಿಎಸ್ ಪಕ್ಷದ ಯಮನವ್ವ ಟೋಪಣ್ಣ ನಾಯಕ (೪೬೮೯) ಅವರನ್ನು ೨೯೪೨ ಮತಗಳ ಅಂತರದಿಂದ ಪರಾಭವಗೊಳಿಸಿದರು. ಮಂಗಳೂರು ಕ್ಷೇತ್ರ ಸದಸ್ಯ ಸ್ಥಾನಕ್ಕಾಗಿ ನಡೆದ ಚುನಾವಣೆಯಲ್ಲಿ ೦೪ ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದರು. ಇವರಲ್ಲಿ ಕಾಂಗ್ರೆಸ್ ಅಭ್ಯರ್ಥಿ ರತ್ನವ್ವ ಮಹೇಶ್ ಹಳ್ಳಿ (೫೩೦೭) ಅವರು ಕೆಎಸ್‌ಪಿ ಪಕ್ಷದ ಅಭ್ಯರ್ಥಿ ಪ"ನಬಾನು (೩೮೦೫) ಅವರಿಗಿಂತ ೧೫೦೨ ಅಧಿಕ ಮತಗಳನ್ನು ಪಡೆದು "ಜಯದ ನಗೆ ಬೀರಿದರು. ತಳಕಲ್ ಕ್ಷೇತ್ರದ ಸದಸ್ಯ ಸ್ಥಾನಕ್ಕಾಗಿ ೦೩ ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಬಿರುಸಿನಿಂದ ನಡೆದ ಈ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯಂಕಣ್ಣ ಯರಾಶಿ (೯೧೪೯) ಅವರು ತಮ್ಮ ಸ"ಪದ ಪ್ರತಿಸ್ಪರ್ಧಿ ಬಿಜೆಪಿ ಪಕ್ಷದ ಶಿವಪ್ಪ ಚನ್ನಪ್ಪ ಮುತ್ತಾಳ (೬೬೪೨) ಅವರನ್ನು ೨೫೦೭ ಮತಗಳ ಅಂತರದಿಂದ ಸೋಲಿಸಿ ಆಯ್ಕೆಗೊಂಡರು. ಕುತೂಹಲ ಮೂಡಿಸಿದ ಕುಕನೂರು ಕ್ಷೇತ್ರಕ್ಕೆ ಸಂಬಂಧಿಸಿದಂತೆ ಒಟ್ಟು ೦೪ ಅಭ್ಯರ್ಥಿಗಳು ಸ್ಪರ್ಧಿಸಿದ್ದ ಈ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹೇಮಾ ನೀಲಪ್ಪ ಕಡೇಮನಿ (೮೮೯೮) ಅವರು ಬಿಜೆಪಿ ಅಭ್ಯರ್ಥಿ ಕಮಲವ್ವ ಮುದಕಪ್ಪ (೬೧೯೪) ಅವರಿಗಿಂತ ೨೬೯೮ ಹೆಚ್ಚು ಮತಗಳನ್ನು ಪಡೆದು "ಜೇತರಾದರು. ಮುಧೋಳ ಕ್ಷೇತ್ರದ ಸದಸ್ಯ ಸ್ಥಾನಕ್ಕೆ ನಡೆದ ಸ್ಪರ್ಧೆಯಲ್ಲಿ ೦೫ ಅಭ್ಯರ್ಥಿಗಳು ಭಾಗವ"ಸಿದ್ದರು. ಇವರಲ್ಲಿ ಜೆಡಿಎಸ್ ಅಭ್ಯರ್ಥಿ ಚನ್ನಬಸನಗೌಡ ಹಲಗನಗೌಡ (೭೫೨೨) ಅವರು ಕಾಂಗ್ರೆಸ್ ಅಭ್ಯರ್ಥಿ ಬಸವರಾಜ ಮಲ್ಲಪ್ಪ ಶಿರೂರು (೪೩೩೩) ಅವರನ್ನು ೩೧೮೯ ಮತಗಳ ಅಂತರದಿಂದ ಮಣಿಸಿ "ಜಯದ ನಗೆ ಬೀರಿದರು.
೨೦೦೫ ರಲ್ಲಿ ನಡೆದ ಕೊಪ್ಪಳ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಜಿಲ್ಲೆಯ ಒಟ್ಟು ೬೯೧೫೪೪ ಮತದಾರರ ಪೈಕಿ ಪುರುಷ- ೨೨೯೧೪೮ ಹಾಗೂ ಮ"ಳೆ- ೨೨೦೫೦೬ ಸೇರಿದಂತೆ ಒಟ್ಟು ೪೪೯೬೫೪ ಮತದಾರರು ತಮ್ಮ ಹಕ್ಕು ಚಲಾಸಿದ್ದರು. ಇದರಿಂದಾಗಿ ಒಟ್ಟಾರೆ ಶೇ. ೬೪. ೮೮ ಮತದಾನವಾಗಿತ್ತು. ಈ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಪಕ್ಷಗಳ ಬಲಾಬಲ ಈ ರೀತಿ ಇದೆ. ಒಟ್ಟು ೨೭ ಸ್ಥಾನಗಳ ಪೈಕಿ ಕಾಂಗ್ರೆಸ್ ಪಕ್ಷ ಅತಿ ಹೆಚ್ಚು ೧೮ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತು. ಉಳಿದಂತೆ ಜೆಡಿಎಸ್-೦೬, ಬಿಜೆಪಿ- ೦೧ ಕ್ಷೇತ್ರದಲ್ಲಿ "ಜಯ ಸಾಧಿಸಿದರೆ, ೦೨ ಕ್ಷೇತ್ರಗಳು ಪಕ್ಷೇತರ ಅಭ್ಯರ್ಥಿಗಳ ಪಾಲಾತು.
ಈಗ ಮತ್ತೊಮ್ಮೆ ಜಿ.ಪಂ. ಹಾಗೂ ತಾ.ಪಂ. ಸಾರ್ವತ್ರಿಕ ಚುನಾವಣೆ ಘೋಷಣೆಯಾಗಿದೆ. ಜಿಲ್ಲಾಡಳಿತ ಸುಗಮವಾಗಿ ಹಾಗೂ ಶಾಂತಿಯುತ ಚುನಾವಣೆ ನಡೆಸಲು ಸರ್ವಸನ್ನದ್ಧವಾಗಿದೆ. ಈ ಚುನಾವಣೆಯನ್ನು ಶಾಂತಿಯುತವಾಗಿ ಹಾಗೂ ನಿಷ್ಪಕ್ಷಪಾತವಾಗಿ ನಡೆಸಲು ಅನುಕೂಲವಾಗುವಂತೆ ಸಾರ್ವಜನಿಕರೂ ಸಹ ಜಿಲ್ಲಾ ಆಡಳಿತದೊಂದಿಗೆ ಕೈಜೋಡಿಸುವುದು ಅಗತ್ಯವಾಗಿದೆ.

- ತುಕಾರಾಂ ರಾವ್ ಬಿ.ವಿ. ವಾರ್ತಾ ಸಹಾಯಕರು, ಕೊಪ್ಪಳ

Advertisement

0 comments:

Post a Comment

 
Top