ಕೊಪ್ಪಳ : ಕೇಂದ್ರ ಹಾಗೂ ರಾಜ್ಯ ಸರಕಾರದ ಜನವಿರೋಧಿ ನೀತಿ ಪ್ರತಿಭಟಿಸಿ ರಾಷ್ಟ್ರಮಟ್ಟದ ಭಾರತ್ ಬಂದ್ ಚಳುವಳಿಗೆ ಕಡೆ ನೀಡಿದ್ದು , ಎಡ ಪಕ್ಷಗಳ ಹೋರಾಟಕ್ಕೆ ಬೆಂಬಲಿಸಿ ಕೊಪ್ಪಳದ ಸಿಪಿಐ ಜಿಲ್ಲಾ ಕಮಿಟಿಯವರು ಇಂದು ಕರೆ ನೀಡಿದ್ದ ಕೊಪ್ಪಳ ಬಂದ್ ಹೋರಾಟಕ್ಕೆ ಕೊಪ್ಪಳದ ಜನಪರ ಸಂಘಟನೆಗಳಾದ ಎಐಯುಟಿಸಿ, ಎಐವಾಯ್ ಎಫ್, ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ, ಅಟೋ ಚಾಲಕರ ಹಾಗೂ ಮಾಲಿಕರ ಸಂಘ, ಜೈ ಭೀಮ ಅಟೋ ಸಂಘಟನೆ, ದಲಿತ ವಿಮೋಚನಾ ಮಾನವ ಹಕ್ಕುಗಲ ವೇದಿಕೆ, ಡಾ.ಬಿ.ಆರ್.ಅಂಬೇಡ್ಕರ್ ದಲಿತ ಸೇವಾ ಸಮಿತಿ, ಸಿನಿಮಾ ಕಾರ್‍ಮಿಕರ ಸಂಘಟನೆ, ಹಿಂದೂಸ್ಥಾನ ಕೊಕಾಕೊಲಾ ಬೇವರೇಜ್ ಪ್ರೈ ಲಿ ಕಾರ್‍ಮಿಕ ಸಂಘಟನೆ ಹಿರೇಬಗನಾಳ, ದಲಿತ ಸಂಘಟನೆಗಳ ಒಕ್ಕೂಟ, ಸ್ಲಂ ಜನಜಾಗೃತಿ ವೇದಿಕೆ ಮತ್ತು ಇತರ ಸಂಘಟನೆಗಳು ಬೆಂಬಲಿಸಿ ಪಾಲ್ಗೊಂಡು ಬಂದ್ ಯಶಸ್ವಿಗೊಳಿಸಿದರು.
ಗವಿಮಠ ಹತ್ತಿರದಿಂದ ಮೆರವಣಿಗೆ ಹೊರಟ ಪ್ರತಿಭಟನಾಕಾರರು ಕೇಂದ್ರ ಸರಕಾರ, ರಾಜ್ಯ ಸರಕಾರದ ಜನವಿರೋಧಿ ನೀತಿ, ಬೆಲೆ ಏರಿಕೆ ನೀತಿಯಂತಹ ಗಂಭಿರ ಸಮಸ್ಯೆಗಳನ್ನು ವಿರೋಧಿಸಿ ಧಿಕ್ಕಾರ ಹಾಕಿದರು. ಮಾತಿಗೆ ತಪ್ಪಿ ನಡೆದುಕೊಂಡ ಸರಕಾರಗಳು ಅಧಿಕಾರದಿಂದ ಕೆಳಗಿಳಯಬೇಕೆಂದು ಘೊಷಣೆ ಹಾಕಿದರು.
ಗಡಿಯಾರ ಕಂಬ,ಅಶೋಕ್ ಸರ್‍ಕಲ್ , ಹೊಸ ಬಸ್ ನಿಲ್ದಾಣದ ಹಾದಿಗುಂಟ ಸಾಗಿ ರೈಲ್ವೆ ನಿಲ್ದಾಣದ ಹತ್ತಿರ ಬಂದು ಸೇರಿದ ಪ್ರತಿಭಟನಾಕಾರರನ್ನು ಉದ್ದೇಶಿಸಿ ಜನರ ಬದುಕುವ ಹಕ್ಕನ್ನು ಕಿತ್ತುಕೊಂಡ ಸರಕಾರಗಳ ದೇಶದ್ರೋಹಿ ನೀತಿ ಖಂಡಿಸಿ ಮಾತನಾಡಿದ ಮುಖಂಡರು ಸರಕಾರದ ಬೆಲೆಗಳನ್ನು ಇಳಿಸುವ ವಿಚಾರವಾಗಿ ಕ್ರಮ ಕೈಗೊಳ್ಳದಿದ್ದಲ್ಲಿ ಗಂಭೀರ ಹೋರಾಟ ರೂಪಿಸಬೇಕಾಗುವುದೆಂದು ಎಚ್ಚರಿಸಿದರು. ಜನರನ್ನು ಉದ್ದೇಶಿಸಿ ಬಸವರಾಜ ಶೀಲವಂತರ, ವಿಠ್ಠಪ್ಪ ಗೋರಂಟ್ಲಿ, ಮೈಲಪ್ಪ ಬಿಸನಳ್ಳಿ, ಮಾರುತಿ ಹೊಸಮನಿ, ಶಂಕ್ರಮ್ಮ ಹೊದ್ಲೂರ, ಹನ್ಮಂತಪ್ಪ ಮ್ಯಾಗಳಮನಿ, ಎಸ್.ಎ.ಗಫಾರ್, ಮರ್‍ದಾನಸಾಬ ಕೊತವಾಲಿ, ನಾಗರಾಜ ಭಾಗ್ಯನಗರ, ಯಮನೂರಪ್ಪ ದೊಡ್ಡಮನಿ ಸೇರಿದಂತೆ ಇನ್ನಿತರರು ಮಾತನಾಡಿದರು. ಹುಸೇನಪಾಷಾ, ಸಿರಾಜ್ ಬಿಸರಳ್ಳಿ ಸೇರಿದಂತೆ ಬಹಳಷ್ಟು ಸಂಖ್ಯೆಯಲ್ಲಿ ಕಾರ್‍ಯಕರ್ತರು ,ಅಟೋ ಚಾಲಕರು, ಮಹಿಳೆಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
0 comments:
Post a Comment