PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ : ಕವಿಸಮೂಹ ನಗರದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಕವಿಸಮಯ ಯಶಸ್ವಿಯಾಗಿ ನಡೆಯಿತು. ಕವಿಸಮೂಹ ಪ್ರತಿವಾರ ಹಮ್ಮಿಕೊಳ್ಳುತ್ತಿರುವ ಈ ಕಾರ್‍ಯಕ್ರಮದಲ್ಲಿ ಪ್ರತಿವಾರ ಕವಿಗಳು ಹೊಸ ಹೊಸ ಕವನಗಳನ್ನು ರಚಿಸುತ್ತಿದ್ದಾರೆ ಮತ್ತು ಅವುಗಳ ಬಗ್ಗೆ ಮುಕ್ತವಾದ ವಿಮರ್ಶೆ , ಸಂವಾದ ನಡೆಯುತ್ತಿದೆ. ಈ ಹೊಸ ಬಗೆಯ ಪರಿಕಲ್ಪನೆಯು ಆಸಕ್ತರನ್ನು ಸೆಳೆಯುತ್ತಿದೆ.

ಅದೇ ರೀತಿ ಈ ವಾರ ಹಮ್ಮಿಕೊಂಡಿದ್ದ ಕಾರ್‍ಯಕ್ರಮದಲ್ಲಿ ಆಧ್ಯಾತ್ಮಿಕ ಕವನಗಳನ್ನು ರಚಿಸುವುದರ ಮೂಲಕ ಹೆಸರು ಮಾಡಿರುವ ವೀರಣ್ಣ ಹುರಕಡ್ಲಿಯವರು ನೀರು-ಪನ್ನೀರು ಎಂಬ ಕವನವನ್ನು ವಾಚಿಸಿದರು. ಎಲ್ಲರನ್ನೂ ಸಮಾನವಾಗಿ ಕಾಣುವ ನೀರು ಪನ್ನೀರಾಗುವ ಬಗೆ,ಕಲ್ಪನೆ ಎಲ್ಲರ ಮೆಚ್ಚುಗೆ ಪಡೆಯಿತು. ಪುಷ್ಪಾವತಿ ಏಳುಬಾವಿಯವರು ವಾಚಿಸಿದ - ಮಣ್ಣು, ವಲಸೆ ಪಕ್ಷಿಗಳು ಮತ್ತು ಹಾಯ್ಕುಗಳು, ವಾಗೀಶ ಬಳ್ಳಾರಿ- ಕೋರಿಕೆ, ಕರೆಯೋಲೆ, ಶರಣಬಸಪ್ಪ ಅಳ್ಳಳ್ಳಿ- ನಿರ್‍ಮೂಲನೆ,ಶೀಲಗೆಟ್ಟವಳು, ಶಿ.ಕಾ.ಬಡಿಗೇರರ- ಸಂಭ್ರಮ, ಬರ, ಜಡೆಯಪ್ಪ- ನಿಷ್ಪಲ, ಹೆಣ್ಣಿಗೊಂದು ಸಂದೇಶ, ಮಹೇಶ ಬಳ್ಳಾರಿ- ಬದುಕು ಜಟಕಾ ಬಂಡಿ, ಶಾಂತಾದೇವಿ ಹಿರೇಮಠರ- ಬರ-ವರ,ಶಿಕ್ಷಣ ಮತ್ತು ಸಿರಾಜ್ ಬಿಸರಳ್ಳಿ - ವಿರಹ, ರಾತ್ರಿ ಚುಟುಕು ಮತ್ತು ಕವನಗಳನ್ನು ವಾಚಿಸಿದರು. ಈ ಕವನಗಳ ಬಗ್ಗೆ ಮುಕ್ತವಾಗಿ ಶಿ.ಕಾ.ಬಡಿಗೇರ ವಿಮರ್ಶೆ ಮಾಡಿದರು. ಎಲ್ಲ ಕವಿಗಳು,ಕವಿಯಿತ್ರಿಯರು ಸಂವಾದದಲ್ಲಿ ಪಾಲ್ಗೊಂಡರು. ಕವಿಸಮೂಹದ ಸಿರಾಜ್ ಬಿಸರಳ್ಳಿ ಕಾರ್‍ಯಕ್ರಮ ನಡೆಸಿಕೊಟ್ಟರು. ಕಾರ್‍ಯಕ್ರಮದಲ್ಲಿ ಜಿ.ಎಸ್.ಗೋನಾಳ,ಮಹೇಶ ಉಳ್ಳಾಗಡ್ಡಿ ಮತ್ತಿತರ ಆಸಕ್ತರು ಪಾಲ್ಗೊಂಡಿದ್ದರು.

Advertisement

0 comments:

Post a Comment

 
Top