ಕೊಪ್ಪಳ : ನಗರಸಭೆಯ ವತಿಯಿಂದ ಅಗಲೀಕರಣ ಕಾರ್ಯ ಮುಂದುವರೆದಿದ್ದು ಸ್ಟೇಷನ್ ರಸ್ತೆಯಲ್ಲಿ ಅಗಲೀಕರಣ ಕಾರ್ಯ ನಡೆಸಲಾಯಿತು.
ಕನಕಾಚಲ ಚಿತ್ರಮಂದಿರದ ಕಂಪೌಂಡ್ , ಖಾದ್ರಿಯವರ ಬಿಲ್ಡಿಂಗ್ ಸೇರಿದಂತೆ ಸ್ಟೇಷನ್ ತನಕದ ರಸ್ತೆಯನ್ನು ಅಗಲ ಮಾಡಲಾಯಿತು. ಇದಕ್ಕೆ ನಾಗರೀಕರು ಸ್ವಯಂ ಪ್ರೇರಿತರಾಗಿ ಸ್ಪಂದಿಸಿ ತಮ್ಮ ಕಟ್ಟಡಗಳನ್ನು ತೆರವುಗೊಳಿಸಿದರು. ರಸ್ತೆ ಅಗಲೀಕರಣದ ಜೊತೆ ಚರಂಡಿ ನಿರ್ಮಾಣ ಕಾರ್ಯವೂ ನಡೆದಿದೆ. ಕೆಲವೊಂದು ಕಟ್ಟಡದ ಮಾಲಿಕರು ನಗರಸಭೆಯ ಸಿಬ್ಬಂದಿಯ ಜೊತೆ ಮಾತಿನ ಚಕಮಕಿ ನಡೆಸಿದರು.
0 comments:
Post a Comment