PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ : ನಿಮಗೊಂದು ಅಚ್ಚರಿಯ ವಿಷಯ ಗೊತ್ತಿರಬಹುದು. ನಮ್ಮಲ್ಲಿ ವಿದ್ಯಾರ್ಥಿಯನ್ನು ಶಾಲೆಯಲ್ಲಿ ಅಡ್ಮಿಷನ್ ಗಾಗಿ ಕರೆತಂದಾಗ ತಂದೆ ತಾಯಿಯರಿಗೆ ಜನ್ಮದಿನಾಂಕ ಗೊತ್ತಿರದಿದ್ದ ಸಂದರ್ಭದಲ್ಲಿ ಶಿಕ್ಷಕರು ಅನುಸರಿಸುತ್ತಿದ್ದ ತಂತ್ರ ಎಂದರೆ ಎಲ್ಲಿ ನಿನ್ನ ಕೈಯನ್ನು ತಲೆಯಮೇಲಿನಿಂದ ಇಟ್ಟುಕೊಂಡು ಎಡಕಿವಿ ಮುಟ್ಟು ಎನ್ನುವುದು. ಕೈ ಕಿವಿಗೆ ಮುಟ್ಟಿತೋ ಅಡ್ಮಿಷನ್ ಮಾಡಿಕೊಳ್ಳುವಷ್ಟು ವಯಸ್ಸಾಗಿದೆ ಎಂದು ನಿರ್ಧರಿಸಿ ಜನ್ಮದಿನಾಂಕವನ್ನು ಒಂದನೇ ಜೂನ್ ಎಂದೇ ಬರೆದು ಬಿಡುತ್ತಿದ್ದರು. ಹೀಗಾಗಿ ಇವತ್ತು ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿರುವವರು ಬಹಳ ಜನ ಇದ್ದಾರೆ ಅವರಿಗೆಲ್ಲ ಕನ್ನಡನೆಟ್.ಕಾಂ ನ ಶುಭಾಷಯಗಳು.

Advertisement

0 comments:

Post a Comment

 
Top