ಗಂಗಾವತಿ : ಶನಿವಾರ ಕಾಂಗ್ರೆಸ್ ಮುಖಂಡ ದೊಡ್ಡಪ್ಪ ದೇಸಾಯಿಯವರ ಮೇಲೆ 40 ಕ್ಕೂ ಹೆಚ್ಚು ಜನರಿದ್ದ ಗುಂಪೊಂದು ಮಾರಣಾಂತಿಕ ದಾಳಿ ಮಾಡಿದೆ. ಅವರ ಎರಡು ಕಾರುಗಳು ಮತ್ತು ಮನೆ ಜಖಂಗೊಳಗಾಗಿದೆ.
ಗ್ರಾಮ ಪಂಚಾಯತ್ ಚುನಾವಣೆ ಹಿನ್ನೆಲೆಯಲ್ಲಿ ಈ ಗಲಾಟೆ ನಡೆದಿದೆ ಎನ್ನಲಾಗುತ್ತಿದೆ. ಶಿವರಾಜ ತಂಗಡಗಿ ಗುಂಪಿನೊಂದಿಗೆ ಗುರುತಿಸಿಕೊಂಡಿದ್ದ ದೊಡ್ಡಪ್ಪ ದೇಸಾಯಿ ಕಾಂಗ್ರೆಸ್ ಪಾಳಯಕ್ಕೆ ಹಾರಿದ್ದರು. ಅವರ ಬೆಂಬಲಿಗರು ಅವಿರೋಧವಾಗಿ ಆಯ್ಕೆಯಾಗುವಲ್ಲಿ ಅವರ ಪ್ರಭಾವವಿತ್ತು. ವಿರೋಧಿ ಗುಂಪು ಇದನ್ನು ಸಹಿಸಲಾಗದೆ ದಾಳಿ ಮಾಡಿದೆ ಎನ್ನಲಾಗುತ್ತಿದೆ. ದೇಸಾಯಿ ಖಾಸಗಿ ಆಸ್ಪತ್ರೆಯಲ್ಲಿಚಿಕಿತ್ಸೆಪಡೆಯುತ್ತಿದ್ದಾರೆ.ದೂರು ದಾಖಲಿಸಿದ್ದಾರೆ
0 comments:
Post a Comment