PLEASE LOGIN TO KANNADANET.COM FOR REGULAR NEWS-UPDATES

ಕನ್ನಡದ ಪ್ರತಿಭಾನ್ವಿತ ಕವಯಿತ್ರಿ ವಿಭಾ ಅವರ ನೆನಪಿನಲ್ಲಿ `ವಿಭಾ ಸಾಹಿತ್ಯ ಪ್ರಶಸ್ತಿ'ಯನ್ನು ಈ ವರ್ಷದಿಂದ ಆರಂಭಿಸಲಾಗಿದೆ. ಇದಕ್ಕಾಗಿ ಯಾವುದೇ ವಯಸ್ಸಿನ ನಿರ್ಬಂಧವಿಲ್ಲದೇ ಕನ್ನಡದ ಕವಿ/ಕವಯಿತ್ರಿಯರ ಕವಿತೆಗಳ ಹಸ್ತಪ್ರತಿಯನ್ನು ಆಹ್ವಾನಿಸಲಾಗಿದೆ. ಹಸ್ತಪ್ರತಿಯಲ್ಲಿ ಕನಿಷ್ಟ ೩೦ ಕವಿತೆಗಳಿರಬೇಕು.

ಪ್ರಶಸ್ತಿಯು ರೂ. ೫೦೦೦/- ನಗದು ಬಹುಮಾನವನ್ನು ಒಳಗೊಂಡಿರುತ್ತದೆ.ಪ್ರಶಸ್ತಿ ವಿಜೇತ ಹಸ್ತಪ್ರತಿಯನ್ನು ಗದುಗಿನ ಲಡಾಯಿ ಪ್ರಕಾಶನದಿಂದ ಪ್ರಕಟಿಸಿ, ೨೭-೯-೨೦೧೦ ರಂದು ವಿಭಾ ಹುಟ್ಟಿದ ದಿನವೇ ಬಿಡುಗಡೆಗೊಳಿಸಲಾಗುವುದು. ಪ್ರಶಸ್ತಿ ಪ್ರದಾನ ಸಮಾರಂಭ ಕೂಡ ಆಯೋಜಿಸಲಾಗುವುದು. ಹಸ್ತಪ್ರತಿ ಕಳುಹಿಸಲು ಕೊನೆಯ ದಿನಾಂಕ: ೧೫ ಜುಲೈ ೨೦೧೦. ಹಸ್ತಪ್ರತಿಯನ್ನು ಈ ಕೆಳಗಿನ ವಿಳಾಸಕ್ಕೆ ಕಳುಹಿಸಿಕೊಡಬೇಕಾಗಿ ವಿನಂತಿ.

ಪ್ರಕಾಶ ಮತ್ತು ಸುನಂದಾ ಕಡಮೆ, ಸಂಚಾಲಕರು, `ವಿಭಾ ಸಾಹಿತ್ಯ ಪ್ರಶಸ್ತಿ' ನಂ. ೯೦, ನಾಗಸುಧೆ, ಕಾಳಿದಾಸನಗರ,ವಿದ್ಯಾನಗರ ವಿಸ್ತರಣೆ, ಹುಬ್ಬಳ್ಳಿ-೫೮೦೦೩೧. ದೂರವಾಣಿ:೦೮೩೬-೨೩೭೬೮೨೬, ೯೮೪೫೭೭೯೩೮೭

Advertisement

0 comments:

Post a Comment

 
Top