ಕೊಪ್ಪಳ-02- ಮಹಿಳೆಯರು ಮತ್ತು ಮಕ್ಕಳಿಗಾಗಿ ಇರುವ ಕಾನೂನಿ ಕುರಿತ ತಿಳುವಳಿಕೆ ಅಗತ್ಯವಿದೆ. ಇದರ ಬಗ್ಗೆ ಮಹಿಳೆಯರಲ್ಲಿ ಅರಿವು ಮೂಡಬೇಕು ಮಹಿಳೆಯರಿಗೆ ಕಾನೂನು ಬಹಳಷ್ಟು ಅವಕಾಶಗಳನ್ನು, ರಕ್ಷಣೆಯನ್ನು ಅನುಕೂಲಗಳನ್ನು ಒದಗಿಸಿದೆ. ಅರಿವಿನಿಂದ ನಿಮ್ಮ ಹಕ್ಕುಗಳನ್ನು ಪಡೆದುಕೊಳ್ಳಬೇಕು ಎಂದು ಹಿರಿಯ ಸಿವಿಲ್ ನ್ಯಾಯಾದೀಶ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿ ಬಿ.ದಶರಥ ಕರೆ ನೀಡಿದರು. ಅವರಿಂದು ಜಿಲ್ಲಾ ಕಾನೂನು ಸೇವೆಗಳ ಪ್ರಾದಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ ,ಸೇವಾ
ಸಂಸ್ಥೆ ಕೊಪ್ಪಳ ಹಾಗೂ ಹೊಸಬಂಡಿಹರ್ಲಾಪುರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ
ಸಂಯುಕ್ತಾಶ್ರಯದಲ್ಲಿ ಹೆಣ್ಣುಮಕ್ಕಳ ರಕ್ಷಣೆ ಹಾಗೂ ಮಹಿಳಾ ಮತ್ತು ಕೌಟುಂಬಿಕ
ದೌರ್ಜನ್ಯಗಳ ಕುರಿತು ಜಾಗೃತಿ ಕಾರ್‍ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು. ಹೆಣ್ಣು
ಮಕ್ಕಳ ರಕ್ಷಣೆಗಾಗಿ ಹಲವಾರು ಕಾನೂನುಗಳನ್ನು ಜಾರಿ ಮಾಡಲಾಗಿದೆ. ಆರ್ಥಿಕ ಸಹಾಯ ಮಾಡಲು
ಹಲವಾರು ಇಲಾಖೆಗಳು ಮುಂದೆ ಬರುತ್ತವೆ. ಮಹಿಳೆಯರಿಗೆ ಉಚಿತ ಕಾನೂನಿನ ಸೇವೆ, ನಿರ್ಭಯ
ಕೇಂದ್ರಗಳನ್ನು ಸ್ಥಾಪಿಸಿ ಸರಕಾರ ಅವರ ರಕ್ಷಣೆಗೆ ಮುಂದಾಗುತ್ತದೆ ಅದರ ಸದುಪಯೋಗ
ಡೆದುಕೊಳ್ಳಬೇಕು ಎಂದು ಹೇಳಿದರು.
Home
»
Koppal News
»
koppal organisations
» ಕಾನೂನಿನ ಅರಿವು ಹೆಚ್ಚಿಸಿಕೊಂಡು ನಿಮ್ಮ ಹಕ್ಕುಗಳನ್ನು ಪಡೆದುಕೊಳ್ಳಿ- ಬಿ.ದಶರಥ.
Subscribe to:
Post Comments (Atom)
0 comments:
Post a Comment