PLEASE LOGIN TO KANNADANET.COM FOR REGULAR NEWS-UPDATES

ಕಾರಟಗಿ ಫೆ. 27 ಕೊಪ್ಪಳ ಜಿಲ್ಲಾ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷರ ಚುನಾವಣೆಯು ನಾಳೆ ನಡೆಯಲಿದೆ. ಕಾರಟಗಿ ಮತ್ತು ಕನಕಗಿರಿಯಲ್ಲಿ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ ಜಿ.ಎಸ್ ಗೋನಾಳರವರೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಇವರ ಸಹೋದರ ನಾಗರಾಜ ತಂಗಡಗಿಯವರು ತಮ್ಮ ಅಪರ ಬೆಂಬಲದೊಂದಿಗೆ ಕಸಾಪದ ಅಜೀವ ಸದಸ್ಯರೊಂದಿಗೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದರು. ಸಂಘಟನಾ ಚರ್ತರ ಪ್ರಕಾಶಕರು ಮತ್ತು ಯುವ ಸಾಹಿತಿಗಳಾದ ಕಸಾಪ ಜಿಲ್ಲಾ ಅಧ್ಯಕ್ಷ ಸ್ಥಾನದ ಅಭ್ಯಾರ್ಥಿ ಜಿ.ಎಸ್. ಗೋನಾಳರು ಈಗಾಗಲೇ ಅನೇಕ ಲೇಖಕರ ಪುಸ್ತಕಗಳನ್ನು ತಮ್ಮ ಪ್ರಕಾಶನದ ಮೂಲಕ ಪ್ರಕಟಿಸಿ ಜಿಲ್ಲೆಯಲ್ಲಿ ಸಾಹಿತ್ಯ ಲೋಕವನ್ನೇ ಸೃಷ್ಠಿಸಿದ್ದಾರೆಂದು ನಾಗರಾಜ ತಂಗಡಗಿ ಬಂಣಿಸಿದರು.
ನಾಗರಾಜ ತಂಗಡಗಿಯವರು ನನಗೆ ಬೆಂಬಲಿಸುವುದರಿಂದ ಕಾರಟಗಿ ಮತ್ತು ಕನಕಗಿರಿ ಕ್ಷೇತ್ರದಲ್ಲಿ ಅಭೂತಪೂರ್ವ ಬೆಂಬಲ ದೊರತಂತೆಯಾಗಿದೆ ಎಂದು ಈ ಸಂಬರ್ಧದಲ್ಲಿ ಜಿ.ಎಸ್. ಗೋನಾಳ ಹೇಳಿದರು. ಈ ಸಂಬರ್ದದಲ್ಲಿ ನಾಗರಿಕ ವೇದಕೆ ರಾಜ್ಯಾಧಕ್ಷ ಮಹೇಶ ಬಾಬು ಸುರ್ವೆ, ಕಾನಿಪ ಸಂಘದ ಜಿಲ್ಲಾಧ್ಯಕ್ಷ ಎಂ.ಸಾಧಿಕ್ ಅಲಿ, ಹನುಮಂತ ಹಳ್ಳಿಕೇರಿ, ವೈ.ಬಿ.ಜೂಡಿ, ಮಂಜುನಾಥ ಗೊಂಡಬಾಳ, ಮತ್ತು ಕನಕಗಿರಿ ಕಾರಟಗಿಯ ಯುವ ಸಾಹಿತಿಗಳು ಉಪಸ್ಥಿತರಿದ್ದರು.

Advertisement

0 comments:

Post a Comment

 
Top