PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ-16-  ಸಂಸ್ಥಾನ ಶ್ರೀಗವಿಮಠದ ಜಾತ್ರೆಯು ಜನೆವರಿ ೨೬ ರಂದು ಮಂಗಳವಾರ ಜರುಗುವ ಪ್ರಯುಕ್ತ   ಗವಿಮಠದಲ್ಲಿ ಸಿದ್ಧತೆಗಳು ಭರದಿಂದ ಸಾಗುತ್ತಲಿವೆ. ವರ್ಷದಿಂದ ವರ್ಷಕ್ಕೆ ವಿಭಿನ್ನತೆಯನ್ನು ಪಡೆದುಕೊಳ್ಳುತ್ತಾ  ನಾಡಿನಾಧ್ಯಂತ ಪ್ರಸಿದ್ಧಿ ಪಡೆದುಕೊಳ್ಳುತ್ತಿರುವ ಅಜ್ಜನ ಜಾತ್ರೆಯಲ್ಲಿ ಪ್ರತಿ ವರ್ಷ ಏನಾದರೊಂದು ವಿಶೇಷತೆ ಇದ್ದೆ ಇರುತ್ತದೆ.
ಪೂಜ್ಯ ಶ್ರೀಗವಿಸಿದ್ಧೇಶ್ವರ ಸ್ವಾಮಿಗಳು ಜಾತ್ರೆಯನ್ನು  ಕೇವಲ ಧಾರ್ಮಿಕ ಚೌಕಟ್ಟಿನಲ್ಲಿ ನೋಡಲಾರದೇ ಜನರಲ್ಲಿ ವೈಚಾರಿಕತೆಯ ಅರಿವನ್ನು ಬಿತ್ತರಿಸುವ ಪ್ರಯತ್ನ ಮಾಡಿದ್ದಾರೆ. ಈ ವರ್ಷ ಬಾಲ್ಯವಿವಾಹ ತಡೆಗೆ ಜಾಗೃತಿ ನಡಿಗೆ  ಎಂಬ ಅಭಿಯಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವದು  ಅವರ ದೂರ ದೃಷ್ಟಿಗೆ ಹಿಡಿದ ಕನ್ನಡಿಯಾಗಿದೆ.
 ಮಕ್ಕಳ ಜೀವನದಲ್ಲಿ ಬಾಲ್ಯವಿವಾಹವು  ಅನೇಕ ಯಾತನೆಗಳನ್ನು ನೀಡಿ ಅವರ ಭವಿಷ್ಯವನ್ನು ಹಾಳುಮಾಡುತ್ತದೆ. ಈ ಅನಿಷ್ಟ ಪದ್ದತಿಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಕೊಪ್ಪಳ ಜಿಲ್ಲಾಡಳಿತ ಪಣತೊಟ್ಟಿದ್ದು, ಗವಿಮಠವು ಈ ನಿಟ್ಟಿನಲ್ಲಿ ಸಮಾಜಮುಖಿಯಾಗಿ ಕೈಜೋಡಿಸುತ್ತಿದೆ. ಇದಕ್ಕಾಗಿ ೨೦೧೬ ರ ಜಾತ್ರಾ ಮಹೋತ್ಸವದಲ್ಲಿ ಬಾಲ್ಯವಿವಾಹ ತಡೆ  ಜಾತ್ರೆಯ ಪ್ರಮುಖ ವಿಷಯವಾಗಿಟ್ಟುಕೊಂಡು ಹಲವು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ.
ಬಾಲ್ಯ ವಿವಾಹ ನಿರ್ಮೂಲನೆಯಲ್ಲಿ ವಿದ್ಯಾರ್ಥಿಗಳ ಪಾತ್ರ ಈ ವಿಷಯದ ಅಡಿ ಜಿಲ್ಲೆಯ ಎಲ್ಲ ಸರಕಾರಿ, ಅನುದಾನಿತ, ಖಾಸಗಿ ಪ್ರೌಡಶಾಲೆಗಳಲ್ಲಿ, ಪದವಿ ಪೂರ್ವ ಹಾಗೂ ಪದವಿಕಾಲೇಜುಗಳಲ್ಲಿ ಪ್ರತ್ಯೇಕವಾಗಿ ಪ್ರಬಂಧ ಸ್ಪರ್ಧೆಯನ್ನು ದಿನಾಂಕ ೧೬-೦೧-೨೦೧೬ ರಂದು ಆಯೋಜಿಸುವದು, ಉತ್ತಮವಾಗಿ ಪ್ರಬಂಧ ಬರೆದ ಒಬ್ಬ ವಿದ್ಯಾರ್ಥಿ/ನಿಯನ್ನು ಆಯ್ಕೆ ಮಾಡಿ  ಅವರನ್ನು ದಿನಾಂಕ ೨೦-೦೧-೨೦೧೬ ರಂದು ಶ್ರೀಗವಿಸಿದ್ದೇಶ್ವರ ಕಾಲೇಜಿನಲ್ಲಿ ನಡೆಯುವ ಜಿಲ್ಲಾಮಟ್ಟದ ಪ್ರಬಂಧ ಸ್ಪರ್ಧೆಗೆ ಭಾಗವಹಿಸುವಂತೆ ಮಾಡುವದು. ಅಲ್ಲಿ ವಿಜೇತರರಾದ ವಿದ್ಯಾರ್ಥಿ/ನಿ ಗಳಿಗೆ ಜಾತ್ರಾ ಮಹೋತ್ಸವದಲ್ಲಿ ಪ್ರಶಸ್ತಿ ಹಾಗೂ ಸನ್ಮಾನ ಮಾಡಲಾಗುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಅಲ್ಲದೇ ಕೊಪ್ಪಳ ಜಿಲ್ಲೆಯಾಧ್ಯಾಂತ  ಸರಕಾರಿ, ಅನುದಾನಿತ, ಖಾಸಗಿ ಶಾಲಾ ಕಾಲೇಜುಗಳು ದಿನಾಂಕ ೨೩-೦೧-೨೦೧೬ ರಂದು  ಶನಿವಾರ ಬಾಲ್ಯವಿವಾಹ ತಡೆಗೆ ಜಾಗೃತಿ ನಡಿಗೆ    ಅಭಿಯಾನವನ್ನು ಆಯೋಜಿಸುವದು. ಅಂದು ಬೆಳಿಗ್ಗೆ ೯ ಗಂಟೆಗೆ ಗ್ರಾಮಪಂಚಾಯತಿ, ಎಸ್.ಡಿ.ಎಂ.ಸಿ, ಮಕ್ಕಳ ರಕ್ಷಣಾ ಸಮಿತಿ, ಅಂಗನವಾಡಿ,  ಬಾಲಿಕಾ ಸಂಘ,  ಮಹಿಳಾ ಸ್ವಸಹಾಯ ಸಂಘಗಳು, ಪಾಲಕರು, ಮಕ್ಕಳು, ಮತ್ತು ಸಾರ್ವಜನಿಕರನ್ನು ಸೇರಿಸಿಕೊಂಡು ಜಾಗೃತಿ ಜಾಥಾವನ್ನುಆಯೋಜಿಸುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
 ಕೊಪ್ಪ[ಳ ನಗರದಲ್ಲಿಯೂ ಈ  ಅಭಿಯಾನವು ದಿನಾಂಕ ೨೩-೦೧-೨೦೧೬ ಶನಿವಾರ ಬೆಳಿಗ್ಗೆ ೯ ಕ್ಕೆ ಗೌರಿಶಂಕರ ದೇವಸ್ಥಾನದ ಬನ್ನಿಕಟ್ಟಿಯಿಂದ ಆಶೋಕವೃತ್ತ, ಗಡಿಯಾರಕಂಭ, ಮಾರ್ಗವಾಗಿ ಶ್ರೀಗವಿಮಠಕ್ಕೆ ಬರುತ್ತದೆ. ಇದರಲ್ಲಿ  ಶಾಲಾ, ಕಾಲೇಜುಗಳ ವಿದ್ಯಾರ್ಥಿ/ನಿಯರು, ವಿವಿಧ ಮಹಿಳಾ ಸಂಘ ಸಂಸ್ಥೆಗಳ ಪ್ರತಿನಿಧಿಗಳು, ವಿವಿಧ ಸಂಘಟನೆಯವರು ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಭಾಗವಹಿಸುತ್ತಾರೆ.
ಕೊಪ್ಪಳ ಜಿಲ್ಲಾಡಳಿತ ಹಾಗೂ ಗವಿಮಠದ ವತಿಯಿಂದ ಜರುಗುವ ಈ  ಜಾಗೃತಿ ಅಭಿಯಾನಕ್ಕೆ  ಯುನಿಸೆಫ್, ವಾರಿಯರ್‍ಸ ಸ್ಪೋರ್ಟ್ಸ ಕ್ಲಬ್ ಕೊಪ್ಪಳ, ಹಾಗೂ ವಿವಿಧ ಸಂಘಟನೆಗಳು ಸಹಕಾರ ನೀಡಿವೆ,
ಈ ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆಯುವಲ್ಲಿ ಪತ್ರಕರ್ತ ಸೋಮರೆಡ್ಡಿ ಅಳವಂಡಿ, ರಾಜೇಶಯಾವಗಲ್,ಶಂಕರ ಕೊಪ್ಪದ, ಪ್ರವೀಣ ಇಟಗಿ,  ವಿನೋಧ ಚನ್ನಿನಾಯ್ಕರ್, ಜಗದೀಶ ಗುತ್ತಿ,ಶಶಿಧರ, ಮಲ್ಲಿಕಾರ್ಜುನ ಹ್ಯಾಟಿ, ಹುಲುಗಪ್ಪ ಕಟ್ಟಿಮನಿ ಮೊದಲಾದ ಸಂಘಟಕರು ಶ್ರಮಿಸುತ್ತಿದ್ದಾರೆ.

Advertisement

0 comments:

Post a Comment

 
Top