ಕೊಪ್ಪಳ,
ಜ.೧೨ (ಕ ವಾ) ಕೊಪ್ಪಳ ನಗರದ ಕಿನ್ನಾಳ ರಸ್ತೆಗೆ ಡಾ||ರಾಜ್‌ಕುಮಾರ್
ರಸ್ತೆ ಎಂದು ನಾಮಕರಣ ಮಾಡಲು ನಗರಸಭೆಯಿಂದ ನಿರ್ಣಯಿಸಲಾಗಿದ್ದು, ಆಕ್ಷೇಪಣೆಗಳನ್ನು
ಆಹ್ವಾನಿಸಲಾಗಿದೆ.
ಕಳೆದ ೨೦೧೫ರ ನ.೧೧ ರಂದು ನಡೆದ ನಗರಸಭೆಯ ಸಾಮಾನ್ಯ ಸಭೆಯಲ್ಲಿ ನಗರದ ಅಶೋಕ ವೃತ್ತದ ಉತ್ತರಕ್ಕೆ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಛೇರಿ ಮುಂಭಾಗದಲ್ಲಿ ಹಾದುಹೋಗುವ ಕಿನ್ನಾಳ ರಸ್ತೆಗೆ ಡಾ||ರಾಜ್‌ಕುಮಾರ್ ರಸ್ತೆ ಎಂದು ನಾಮಕರಣ ಮಾಡುವ ವಿಷಯದಲ್ಲಿ ಕೆಲ ಸಂಘಟನೆಗಳ ಅಭಿಪ್ರಾಯದ ಮೇರೆಗೆ ನಿರ್ಣಯಿಸಿ, ಅಂಗೀಕರಿಸಲಾಗಿದ್ದು, ಈ ಕುರಿತು ಸಾರ್ವಜನಿಕರಿಂದ ಆಕ್ಷೇಪಣೆ ಹಾಗೂ ಸಲಹೆಗಳನ್ನು ಪಡೆಯಲು ನಿರ್ಧರಿಸಲಾಗಿದೆ. ಈ ಹಿನ್ನೆಲೆಯಲ್ಲಿ ರಸ್ತೆಗೆ ಡಾ||ರಾಜ್‌ಕುಮಾರ್ ರಸ್ತೆ ಎಂದು ನಾಮಕರಣ ಮಾಡಲು ಯಾರದ್ದಾದರೂ ಆಕ್ಷೇಪಣೆ, ಸಲಹೆಗಳಿದ್ದಲ್ಲಿ ಸುದ್ದಿ ಪ್ರಕಟಣೆಗೊಂಡ ೩೦ ದಿನಗಳೊಳಗಾಗಿ ಕೊಪ್ಪಳ ನಗರಸಭೆ ಕಾರ್ಯಾಲಯಕ್ಕೆ ಸಲ್ಲಿಸುವಂತೆ ನಗರಸಭೆ ಪೌರಾಯುಕ್ತ ರಮೇಶ ಪಟ್ಟೇದಾರ್ ಅವರು ತಿಳಿಸಿದ್ದಾರೆ.

0 comments:
Post a Comment