PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ ಡಿ. ೦೯ (ಕ ವಾ) ಕೊಪ್ಪಳ ನಗರದ ಕುಷ್ಟಗಿ ರಸ್ತೆಯಲ್ಲಿನ ಹಾಳು ಬಾವಿಯಲ್ಲಿ ಕಳೆದ ಡಿ. ೦೨ ರಂದು ಪತ್ತೆಯಾಗಿದ್ದ ಓರ್ವ ವ್ಯಕ್ತಿಯ ಶವದ ಪ್ರಕರಣಕ್ಕೆ ಸಂಬಂಧಿಸಿದಂತೆ, ಬೂದಿಹಾಳ ಗ್ರಾಮದ ಕರಿಯಪ್ಪ (೨೬) ಎಂಬುವವರನ್ನು ಕೊಲೆ ಮಾಡಿದ ಆರೋಪದ ಮೇಲೆ ಕೊಪ್ಪಳ ಗ್ರಾಮೀಣ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
     ಬೂದಿಹಾಳ ಗ್ರಾಮದ ಮಲ್ಲಿಕಾರ್ಜುನ ಹಾಗೂ ಈತನ ಸಂಬಂಧಿಗಳಾದ ಗವಿಸಿದ್ದಪ್ಪ ಹಾಗೂ ಹನಮಪ್ಪ ಎಂಬುವವರೇ ಬಂಧನಕ್ಕೆ ಒಳಗಾಗಿರುವ ಆರೋಪಿಗಳು.
     ಕೊಪ್ಪಳ ತಾಲೂಕು ಬೂದಿಹಾಳ ಗ್ರಾಮದ ಲಕ್ಕಪ್ಪ ತಂದೆ ಶಿವಪ್ಪ, ತನ್ನ ತಮ್ಮ ಕರಿಯಪ್ಪ ಕಳೆದ ನವೆಂಬರ್ ೨೫ ರಿಂದ ಕಾಣೆಯಾಗಿದ್ದಾನೆ. ಅದೇ ಗ್ರಾಮದ ಮಲ್ಲಿಕಾರ್ಜುನ ಎಂಬಾತ ತನ್ನ ತಮ್ಮನನ್ನು ಮನೆಯಿಂದ ಕರೆದುಕೊಂಡು ಹೋಗಿದ್ದು, ಇಬ್ಬರೂ ಮನೆಗೆ ಹಿಂದಿರುಗಿಲ್ಲ.  ಮಲ್ಲಿಕಾರ್ಜುನನೇ ತನ್ನ ತಮ್ಮನನ್ನು ಅಪಹರಿಸಿಕೊಂಡು ಹೋಗಿದ್ದಾನೆ ಎಂಬುದಾಗಿ ಅಳವಂಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.  ಪ್ರಕರಣ ದಾಖಲಿಸಿಕೊಂಡ ಪೊಲೀಸರು, ತನಿಖೆಯನ್ನು ಕೈಗೊಂಡ ಸಂದರ್ಭದಲ್ಲಿ, ಕೊಪ್ಪಳ ನಗರದ ಕುಷ್ಟಗಿ ರಸ್ತೆಯಲ್ಲಿನ ಪಾಳು ಬಾವಿಯಲ್ಲಿ ಅಪರಿಚಿತ ಪುರುಷ ಶವ ಪತ್ತೆಯಾಗಿತ್ತು.  ಶವದ ಬಳಿ ಇದ್ದ ಬಟ್ಟೆಯಿಂದಾಗಿ ಶವವು ಕರಿಯಪ್ಪನದ್ದೇ ಎಂದು ಲಕ್ಕಪ್ಪ ಗುರುತಿಸಿದ್ದರು.  ಕಾಣೆಯಾಗಿದ್ದ ಮಲ್ಲಿಕಾರ್ಜುನನನ್ನು ಡಿ. ೦೮ ರಂದು ಚಿಕ್ಕಬಗನಾಳ ಗ್ರಾಮದಲ್ಲಿ ವಶಕ್ಕೆ ಪಡೆದು, ತನಿಖೆಗೆ ಒಳಪಡಿಸಿದಾಗ, ತನ್ನ ಸ್ನೇಹಿತ ಕರಿಯಪ್ಪನನ್ನು ಕೊಲೆ ಮಾಡಿರುವುದಾಗಿ ಹೇಳಿಕೆ ನೀಡಿದ್ದಾನೆ.  ತನ್ನ ತಂಗಿಯ ಜೊತೆ ಕರಿಯಪ್ಪ ಹೆಚ್ಚು ಸಲುಗೆಯಿಂದ ವರ್ತಿಸುತ್ತಿದ್ದ.  ಆತನಿಗೆ ಬುದ್ದಿವಾದ ಹೇಳಿದರೂ, ಆತ ಅದನ್ನು ಮುಂದುವರೆಸಿದ್ದ.  ಕೊನೆಗೆ ಆತನನ್ನು ಮುಗಿಸಲು ತನ್ನ ಸಂಬಂಧಿಗಳಾದ ಗವಿಸಿದ್ದಪ್ಪ ಹಾಗೂ ಹನಮಪ್ಪ ಅವರ ನೆರವನ್ನು ಪಡೆಯಲು ನಿರ್ಧರಿಸಲಾಯಿತು.  ನಿಗದಿಯಂತೆ ತಾನು ಕರಿಯಪ್ಪನನ್ನು ಬೂದಿಹಾಳ ಗ್ರಾಮದಿಂದ ಬೈಕ್ ಮೇಲೆ ಕೊಪ್ಪಳದ ಕುಷ್ಟಗಿ ರಸ್ತೆಯಲ್ಲಿನ ಹೊಲದ ಬಳಿ ಕರೆ
     ಪ್ರಕರಣದ ಪತ್ತೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ತ್ಯಾಗರಾಜನ್ ಅವರು ತಂಡ ರಚಿಸಿದ್ದರು.  ಡಿವೈಎಸ್‌ಪಿ ಶ್ರೀಕಾಂತ್ ಕಟ್ಟಿಮನಿ ಅವರ ನೇತೃತ್ವದಲ್ಲಿ ಕೊಪ್ಪಳ ಗ್ರಾಮೀಣ ಠಾಣೆ ಸಿಪಿಐ ಪಿ. ಮೋಹನ್ ಪ್ರಸಾದ್, ಪಿಎಸ್‌ಐ ಚಿತ್ತರಂಜನ್, ಅಳವಂಡಿ ಠಾಣೆ ಪಿಎಸ್‌ಐ ಸಿ. ಗಣೇಶ್, ಮುನಿರಾಬಾದ್ ಪಿಎಸ್‌ಐ ಜಯಪ್ರಕಾಶ್ ಹಾಗೂ ಸಿಬ್ಬಂದಿಗಳಾದ ಶಂಕರಗೌಡ, ಸುಭಾಸ್, ಮಹೇಶ್ ಸಜ್ಜನ್, ಬಸವರಾಜ, ಪ್ರಸಾದ್, ಗವಿಸಿದ್ದಪ್ಪ, ಶರಣಬಸಪ್ಪ ಹೋರಿ, ಮೌಲಾಲಿ, ಖಾದರ್, ಶಿವಪ್ಪ ಅವರು ಅಪರಾಧಿಗಳ ಪತ್ತೆಹಚ್ಚಲು ಶ್ರಮಿಸಿದ್ದರು ಎಂದು ತಿಳಿಸಿದೆ.
ದುಕೊಂಡು ಹೋಗಲಾಯಿತು.  ಆದರೆ ಗವಿಸಿದ್ದಪ್ಪ ಹಾಗೂ ಹನಮಪ್ಪ ಅವರು ಸ್ಥಳಕ್ಕೆ ಬರಲಿಲ್ಲ.  ತಾನೇ ಕಟ್ಟಿಗೆಯ ಗುಣಕಿಯಿಂದ ಕರಿಯಪ್ಪನ ತಲೆಗೆ ಹೊಡೆದು, ಶವವನ್ನು ಹಾಳು ಬಾವಿಯಲ್ಲಿ ಹಾಕಿದ್ದಾಗಿ ಹೇಳಿಕೆ ನೀಡಿದ್ದಾನೆ.  ಪೊಲೀಸರು ಮೃತ ವ್ಯಕ್ತಿಯ ಮೋಟಾರ್ ಬೈಕ್ ಹಾಗೂ ಕೊಲೆಗೆ ಉಪಯೋಗಿಸಿದ ಕಟ್ಟಿಗೆಯ ಗುಣಕಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.  ಕೊಲೆಯ ಪ್ರಮುಖ ಆರೋಪಿ ಮಲ್ಲಿಕಾರ್ಜುನ ಸೇರಿದಂತೆ ಮೂವರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Advertisement

0 comments:

Post a Comment

 
Top