PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ-08- ಕರ್ನಾಟಕ ರಕ್ಷಣಾ ವೇದಿಕೆ (ಟಿ.ಎ. ನಾರಾಯಣಗೌಡ ಬಣ) ಕೊಪ್ಪಳ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಧಿಕಾರಿಗಳು ಕೊಪ್ಪಳ ಇವರ ಮುಖಾಂತರ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
    ಜಿಲ್ಲೆಗೆ ಇಗಾಗಲೇ ಮಂಜೂರಾಗಿರುವ ಸರಕಾರಿ ಇಂಜನೀಯರಿಂಗ್ ಕಾಲೇಜಿನ ಕಟ್ಟಡ ನಿರ್ಮಾಣಕ್ಕೆ ಅಗತ್ಯ ಅನುದಾನವನ್ನು ರಾಜ್ಯ ಸರಕಾರ ಮಂಜೂರು ಮಾಡುವಲ್ಲಿ ವಿಳಂಬ ಮಾಡುತ್ತಿದೆ. ಈ ಕುರಿತು ಜಿಲ್ಲಾ ಸಂಚಾಲಕರಾದ ಬಿ. ಗಿರೀಶಾನಂದ ಜ್ಞಾನಸುಂದರ್ ಮಾತನಾಡಿ ಕೊಪ್ಪಳ ಜಿಲ್ಲೆಯು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಸಾಕಷ್ಟು ಹಿಂದೆ ಉಳಿದ್ದಿದ್ದು, ಜಿಲ್ಲೆಯಲ್ಲಿ ವಿದ್ಯಾವಂತ ನಿರುದ್ಯೋಗಿಗಳ ಪ್ರಮಾಣ ಹೆಚ್ಚಿದೆ. ಜಿಲ್ಲೆಯ ಶೇ. ೭೫ ರಷ್ಟು ರೈತ ಬಂಧುಗಳು ಒಣ ಬೇಸಾಯ ಪದ್ದತಿಯನ್ನು ನಂಬಿದ್ದಾರೆ. ಅನಾವೃಷ್ಠಿಯಿಂದ ರ್‍ಯತ ಸಮುದಾಯ ಬೇಸತ್ತು ಆತ್ಮಹತ್ಯೆ ಹಾಗೂ ಗುಳೆ ಹೊರಟಿದ್ದಾರೆ. ಹಾಗೂ ಹೈದ್ರಾಬಾದ್ ಕನಾಟಕದ ಕೊನೆಯ ಜಿಲ್ಲೆಯಾದ
ಕೊಪ್ಪಳವು ತಾಂತ್ರಿಕ ಶಿಕ್ಷಣ ರಂಗದಲ್ಲಿ ಜಿಲ್ಲೆಯಾಧ್ಯಂತ ಬೀಡು ಬಿಟ್ಟಿರುವ ಕಾರ್ಖಾನೆಗಳಲ್ಲಿ ಸ್ಥಳಿಯ ಇಂಜಿನಿಯರಿಂಗ ಪದವಿದರರಿಗೆ ಉದ್ಯೋಗದಲ್ಲಿ ಸಾಕಷ್ಟು ಅವಕಾಶಗಳಿವೆ. ಆದ್ದರಿಂದ ಈಗಾಗಲೇ ಜಿಲ್ಲೆಯಲ್ಲಿ ಪ್ರಾರಂಭಿಸಲು ಉದ್ದೇಶಿಸಿದ್ದ ಸರಕಾರಿ ಇಂಜನಿಯರಿಂಗ್ ಕಾಲೇಜಿಗೆ ಸೂಕ್ತ ಸ್ಥಳಾವಕಾಶ ಕಲ್ಪಸಿ, ಕಟ್ಟಡ ನಿರ್ಮಾಣಕ್ಕೆ ಅಗತ್ಯ ಅನುದಾನವನ್ನು ಮಂಜೂರು ಮಾಡಬೇಕು. ಮತತು ಈ ಒಂದು ಕಾಲೇಜನ್ನು ಮುಂದಿನ ಶೈಕ್ಷಣಿಕ ವರ್ಷದಿಂದಲೇ ಪ್ರಾರಂಭಿಸಿ ಜಿಲ್ಲೆಯ ಅವಕಾಶ ವಂಚಿತ ವಿದ್ಯಾರ್ಥಿ ಸಮುದಾಯಕ್ಕೆ ನ್ಯಾಯ ವದಗಿಸಿ ಕೊಡಬೇಕು ಎಂದರು. ಇಲ್ಲದಿದ್ದರೆ ವಿದ್ಯಾರ್ಥಿಗಳ ಹಿತ ದೃಷ್ಠಿಯಿಂದ ಕರವೇ ಜಿಲ್ಲಾ ಘಟಕವು ಬೀದಿಗಿಳಿದು ಉಗ್ರವಾಗಿ ಪ್ರತಿಭಟಿಸಬೇಕಾಗುತ್ತದೆ ಎಂದು ಈ ಮನವಿ ಪತ್ರದ ಮೂಲಕ ಎಚ್ಚರಿಸುತ್ತಿದ್ದೇವೆ. ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ ಪ್ರವೀಣ ಬ್ಯಾಹಟ್ಟಿ, ತಾಲೂಕ ಅಧ್ಯಕ್ಷ ಹನುಮಂತ ಬೆಸ್ತರ, ತಾಲೂಕು ಉಪಾಧ್ಯಕ್ಷ ನಿಂಗರಾಜ ಮೂಗಿನ, ತಾಲೂಕು ಸಂಘಟನಾ ಕಾರ್ಯದರ್ಶಿ ಬಸವರಾಜ ದೇಸಾಯಿ, ನಗರಾಧ್ಯಕ್ಷ ಗವಿಸಿದ್ದಪ್ಪ ಹಂಡಿ, ಆಟೋ ಘಟಕದ ಅಧ್ಯಕ್ಷ ಶಿವಕುಮಾರ ಕುಕನೂರ, ನವೀನ ಬಿಡನಾಳ ಉಪಸ್ಥಿತರಿದ್ದರು.

Advertisement

0 comments:

Post a Comment

 
Top