PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ- ನ. ೧. ಸಾಮಾಜಿಕ ಚಟುವಟಿಕೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುವ ಯುವಚೇತನ ಶಿವರಾಜ ತಂಗಡಗಿ ವೇದಿಕೆಯಿಂದ ಹೊರತಂದಿರುವ ಹಜರತ್ ಟಿಪ್ಪು ಸುಲ್ತಾನ ಭಾವಚಿತ್ರವನ್ನು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ಎಸ್. ತಂಗಡಗಿ ಇಂದಿಲ್ಲಿ ಬಿಡುಗಡೆಗೊಳಿಸಿದರು. ನವೆಂಬರ್ ೧೦ ರಂದು ಸರ
    ಈ ಸಂದರ್ಭದಲ್ಲಿ ಶಾಸಕ ಕೆ. ರಾಘವೇಂದ್ರ ಹಿಟ್ನಾಳ, ನಗರಸಭೇ ಸದಸ್ಯ ಮುತ್ತುರಾಜ ಕುಷ್ಟಗಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಬಿ. ಕಲ್ಲೇಶ ಇತರರು ಇದ್ದರು. ಸದರಿ ಭಾವಚಿತ್ರಗಳನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಇಲಾಖೆ ಮುಖಾಂತರ ಸಂಬಂಧಪಟ್ಟವರಿಗೆ ತಲುಪಿಸಲಾಗುವದು ಎಂದು ತಿಳಿಸಿದ್ದಾರೆ.

ಕಾರದಿಂದ ಪ್ರಥಮ ಬಾರಿಗೆ ಹಜರತ್ ಟಿಪ್ಪು ಸುಲ್ತಾನರವರ ಜಯಂತಿಯನ್ನು ಆಚರಿಸುತ್ತಿದ್ದು, ಜಿಲ್ಲೆಯ ಎಲ್ಲಾ ಶಾಲಾ ಕಾಲೇಜು, ಸರಕಾರಿ ಕಛೇರಿಗಳಲ್ಲಿ ಜಯಂತಿ ಆಚರಣೆಗೆ ಅನುಕೂಲವಾಗಲೆಂದು, ಸರಕಾರ ಅಧಿಕೃತಗೊಳಿಸಿರುವ ಟಿಪ್ಪು ಸುಲ್ತಾನ್ ಭಾವಚಿತ್ರವನ್ನು ವಿನ್ಯಾಸಗೊಳಿಸಿ ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಮಂಜುನಾಥ ಜಿ. ಗೊಂಡಬಾಳ ನೇತೃತ್ವದಲ್ಲಿ ೨೦೦೦ ಭಾವಚಿತ್ರಗಳನ್ನು ಉಚಿತವಾಗಿ ಸರಬುರಾಜು ಮಾಡಲಾಗುತ್ತಿದೆ. ಸುಮಾರು ನಲವತ್ತು ಸಾವಿರ ಮೌಲ್ಯದ ಭಾವಚಿತ್ರಗಳನ್ನು ಉಚಿತವಾಗಿ ತಂಗಡಗಿ ವೇದಿಕೆಯಿಂದ ನೀಡುತ್ತಿರುವದಕ್ಕೆ ಮುಸ್ಲಿಂ ಸಮುದಾಯ ಮೆಚ್ಚುಗೆ ವ್ಯಕ್ತಪಡಿಸಿದೆ.

Advertisement

0 comments:

Post a Comment

 
Top