PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ ನ. ೦೨ (ಕ ವಾ) ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಈ.ಕ.ರ.ಸಾ.ಸಂಸ್ಥೆ ಕೊಪ್ಪಳ ವಿಭಾಗದವರ ಸಹಯೋಗದೊಂದಿಗೆ ಕೊಪ್ಪಳದ ಕೇಂದ್ರೀಯ ಬಸ್ ನಿಲ್ದಾಣ ಆವರಣದಲ್ಲಿ ಸೋಮವಾರದಂದು ಆಯೋಜಿಸಿದ್ದ, ಕನ್ನಡ ನಾಡು-ನುಡಿ ಸಂಬಂಧಿಸಿದ 'ಬಾರಿಸು ಕನ್ನಡ ಡಿಂಡಿಮವ' ಅಪರೂಪದ ಛಾಯಾಚಿತ್ರ ಪ್ರದರ್ಶನವನ್ನು ನಿಲ್ದಾಣಕ್ಕೆ ಆಗಮಿಸಿದ್ದ ನೂರಾರು ಪ್ರಯಾಣಿಕರು ಹಾಗೂ ಸಾರ್ವಜನಿಕರು ವೀಕ್ಷಿಸಿದರು.
        ಕನ್ನಡ ನಾಡು, ನುಡಿ, ಕನ್ನಡ ನಾಡಿನ ಮೊದಲ ದೊರೆಗಳು, ಕನ್ನಡದ ಪ್ರಮುಖ ಶಾಸನಗಳು, ಭಾರತ ರತ್ನ ಮತ್ತು ಕರ್ನಾಟಕ ರತ್ನ ಪ್ರಶಸ್ತಿ ಪಡೆದಿರುವ ಕನ್ನಡಿಗರು, ೧೯೫೬ ರ ನವೆಂಬರ್ ೦೧ ರಂದು ಕನ್ನಡ ನಾಡು ಒಂದಾಗಿದ್ದು, ನಂತರ ೧೯೭೩ ರ ನವೆಂಬರ್ ೦೧ ರಂದು ಕರ್ನಾಟಕ ರಾಜ್ಯದ ನಾಮಕರಣ ಮುಂತಾದ ಮಹತ್ವದ ಸಂಗತಿಗಳನ್ನು ವಿಶೇಷ ಛಾಯಾಚಿತ್ರ ಪ್ರದರ್ಶನ ಒಳಗೊಂಡಿದೆ.  ಛಾಯಾಚಿತ್ರ ಪ್ರದರ್ಶನವು ನ. ೦೩ ರಂದು ಸಂಜೆ ೫-೩೦  ರವರೆಗೆ ಕೊಪ್ಪಳದ ಬಸ್ ನಿಲ್ದಾಣದಲ್ಲಿ ಮುಂದುವರಿಯಲಿದೆ ಎಂದು ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್ ಬಿ.ವಿ. ಅವರು ತಿ
ಳಿಸಿದ್ದಾರೆ.

Advertisement

0 comments:

Post a Comment

 
Top