ಕೊಪ್ಪಳ,ಸೆ,೦೨ ಹೈದ್ರಾಬಾದ್ ಕರ್ನಾಟಕ ನಾಗರೀಕರ ವೇದಿಕೆ, ತಿರುಳ್ಗನ್ನಡ ಸಾಹಿತ್ಯ
ಪ್ರತಿಷ್ಠಾನದ ವತಿಯಿಂದ ಹೈಕ ಯುವ ಸಾಹಿತ್ಯ ಸಮ್ಮೇಳನ ಇದೇ ನವಂಬರ್ ದಿ.೨೨ರ
ರವಿವಾರದಂದು ಇಲ್ಲಿನ ಸಾಹಿತ್ಯ ಭವನದಲ್ಲಿ ಸಮ್ಮೇಳನದ ಸರ್ವಾಧ್ಯಕ್ಷರಾದ ಸಾಹಿತಿ
ಜಿ.ಎಸ್.ಗೋನಾಳರವರ ಅಧ್ಯಕ್ಷತೆ ಯಲ್ಲಿ ಜರುಗಲಿದೆ. ಈ ಹಿಂದೆ ಹುಲಗಿ ಗ್ರಾಮದ ಶ್ರೀ
ಹುಲಿಗೆಮ್ಮ ದೇವಸ್ಥಾನದ ಆವರಣದಲ್ಲಿ ಜರುಗಬೇಕಾಗಿದ್ದ ಹೈಕ ಯುವ ಸಾಹಿತ್ಯ ಸಮ್ಮೇಳನ
ಕಾರಣಾಂತರ ಮುಂದೂಡಲಾಗಿತ್ತು. ಈಗ ಇದೇ ಸಮ್ಮೇಳನ ಕೊಪ್ಪಳದ ಸಾಹಿತ್ಯ ಭವನದಲ್ಲಿ ಇದೇ
ತಿಂಗಳ ೨೨ರಂದು ಜರುಗಲಿದೆ. ಸಮ್ಮೇಳನದಲ್ಲಿ ಯುವ ಸಾಹಿತ್ಯ, ವಿಚಾರಗೋಷ್ಠಿ, ಹೈಕ ವಿಭಾಗದ
ಅಭಿವೃದ್ಧಿ ವಿಷಯ ಕುರಿತು ಚರ್ಚಾ ಗೋಷ್ಠಿ ಸೇರಿದಂತೆ ವಿವಿಧ ಸಾಂಸ್ಕೃತಿಕ
ಕಾರ್ಯಕ್ರಮಗಳು ಜರುಗಲಿವೆ. ಜಿಲ್ಲೆಯ ಸಾಹಿತಿಗಳು, ಯುವ ಕವಿಗಳು, ಬರಹಗಾರರು, ಪ್ರಗತಿಪರ
ಚಿಂತಕರು ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಹೈಕ
ಯುವ ಸಾಹಿತ್ಯ ಸಮ್ಮೇಳನ ಯಶಸ್ವಿಗೊಳಿಸಬೇಕೆಂದು ಹೈಕ ನಾಗರೀಕರ ವೇದಿಕೆ ಅಧ್ಯಕ್ಷ ಎಂಡಿ.
ಜೀಲಾನ್ ಹಾಗೂ ಕಾರ್ಯಕ್ರಮ ಸಂಘಟಕ ಮಹೇಶ ಬಾಬು ಸುರ್ವೆ ಜಂಟಿ ತಿಳಸಿದ್ದಾರೆ.
Subscribe to:
Post Comments (Atom)
0 comments:
Post a Comment