PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ ನ. ೦೧ (ಕ ವಾ) ಕನ್ನಡ ರಾಜ್ಯೋತ್ಸವದ ಅಂಗವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಜಿಲ್ಲಾ ಕ್ರೀಡಾಂಗಣ ಭವನದ ಆವರಣದಲ್ಲಿ ಆಯೋಜಿಸಿದ್ದ, ಕನ್ನಡ ನಾಡು, ನುಡಿ ಹಾಗೂ ಕರ್ನಾಟಕ ವೈಭವ ಕುರಿತ ಅಪರೂಪದ ಛಾಯಾಚಿತ್ರ ಪ್ರದರ್ಶನ ನೊಡುಗರ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು.
     ಜಿಲ್ಲಾ ಉಸ್ತುವಾರಿ ಮತ್ತು ಸಣ್ಣ ನೀರಾವರಿ ಸಚಿವ ಶಿವರಾಜ ಎಸ್ ತಂಗಡಗಿ ಅವರು ಛಾಯಾಚಿತ್ರ ಪ್ರದರ್ಶನಕ್ಕೆ ಚಾಲನೆ ನೀಡಿ, ವೀಕ್ಷಿಸಿದ ಅವರು, ಕನ್ನಡ ನಾಡು, ನುಡಿ, ಕನ್ನಡ ನಾಡಿನ ಮೊದಲ ದೊರೆಗಳು, ಕನ್ನಡದ ಪ್ರಮುಖ ಶಾಸನಗಳು, ಭಾರತ ರತ್ನ ಮತ್ತು ಕರ್ನಾಟಕ ರತ್ನ ಪ್ರಶಸ್ತಿ ಪಡೆದಿರುವ ಕನ್ನಡಿಗರು, ೧೯೫೬ ರ ನವೆಂಬರ್ ೦೧ ರಂದು ಕನ್ನಡ ನಾಡು ಒಂದಾಗಿದ್ದು, ನಂತರ ೧೯೭೩ ರ ನವೆಂಬರ್ ೦೧ ರಂದು ಕರ್ನಾಟಕ ರಾಜ್ಯದ ನಾಮಕರಣ,  ಹಂತ ಹಂತವಾಗಿ ಕರ್ನಾಟಕ ರಾಜ್ಯದ ಅಭಿವೃದ್ಧಿಗೊಂಡಿದ್ದು, ಸೇರಿದಂತೆ ಹಲವು
ಮಹತ್ವದ ಅಂಶಗಳನ್ನು ಒಳಗೊಂಡ ಕರ್ನಾಟಕ ರಾಜ್ಯದ ವಿಶೇಷತೆಗಳನ್ನೊಳಗೊಂಡ ವಿಶೇಷ ಛಾಯಾಚಿತ್ರ ಪ್ರದರ್ಶನವನ್ನು ರಾಜ್ಯೋತ್ಸವದ ಸಂದರ್ಭದಲ್ಲಿ ಏರ್ಪಡಿಸಿದ ವಾರ್ತಾ ಇಲಾಖೆಯ ಕ್ರಮ ಅರ್ಥಪೂರ್ಣವಾಗಿದೆ ಎಂದು ಪ್ರಶಂಸಿದರು.  ಸಂಸದ ಸಂಗಣ್ಣ ಕರಡಿ ಅವರು ಛಾಯಾಚಿತ್ರ ಪ್ರದರ್ಶನ ವೀಕ್ಷಿಸಿ, ಈ ಬಾರಿ ಕೊಪ್ಪಳದಲ್ಲಿ ಆಚರಿಸಲಾಗುತ್ತಿರುವ ಕನ್ನಡ ರಾಜ್ಯೋತ್ಸವ ಸಮಾರಂಭ ನಿಜಕ್ಕೂ ವೈಶಿಷ್ಟ್ಯಪೂರ್ಣವಾಗಿದೆ ಹಾಗೂ ವಿಶೇಷವಾಗಿದೆ ಎಂದರು.  ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್, ಜಿಲ್ಲಾ ಪಂಚಾಯತಿ ಅಧ್ಯಕ್ಷ ಅಮರೇಶ್ ಕುಳಗಿ, ಜಿಲ್ಲಾಧಿಕಾರಿ ಡಾ. ಪ್ರವೀಣಕುಮಾರ್ ಜಿ.ಎಲ್., ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ, ನಗರಸಭೆ ಅಧ್ಯಕ್ಷೆ ಬಸಮ್ಮ ಹಳ್ಳಿಗುಡಿ ಸೇರಿದಂತೆ ಹಲವು ಗಣ್ಯರು, ಅಧಿಕಾರಿಗಳು ವಿಶೇಷ ಛಾಯಾಚಿತ್ರ ಪ್ರದರ್ಶನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.  ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್ ಬಿ.ವಿ. ಅವರು ಛಾಯಾಚಿತ್ರ ಪ್ರದರ್ಶನದ ಕುರಿತು ಗಣ್ಯರಿಗೆ ಮಾಹಿತಿ ನೀಡಿದರು.

Advertisement

0 comments:

Post a Comment

 
Top