PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ ಅ. ೨೯ (ಕ ವಾ) ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬಾಗಲಕೋಟದ ವಿಸ್ತರಣಾ ನಿರ್ದೇಶನಾಲಯ ಹಾಗೂ ಕೃಷಿ ತಂತ್ರಜ್ಞರ ಸಂಸ್ಥೆ, ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಚೆಂಡು ಹೂ ಬೆಳೆಯ ಉತ್ಪಾದನೆ ಮಾರುಕಟ್ಟೆ ಹಾಗೂ ಮೌಲ್ಯವರ್ಧನೆ ಕುರಿತು ಒಂದು ದಿನದ ಕಾರ್ಯಗಾರ ಹಾಗೂ ಚೆಂಡು ಹೂವಿನ ಪ್ರದರ್ಶನ ಅ. ೩೦ ರಂದು ಬಾಗಲಕೋಟದ ವಿಸ್ತರಣಾ ನಿರ್ದೇಶನಾಲಯದ ತರಬೇತಿ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ. 
     ಇತ್ತೀಚಿನ ದಿನಗಳಲ್ಲಿ ಚೆಂಡು ಹೂವಿನ ಬೆಳೆಯು ವಾಣಿಜ್ಯ ಬೆಳೆ, ಪೂರ್ಣ ಹಾಗೂ ಅಂತರ ಬೆಳೆ ಹಾಗೂ ವೈದ್ಯಕೀಯ ಬೆಳೆಯಾಗಿ ಮತ್ತು ಚೆಂಡು ಹೂವು ಮಣ್ಣಿನ ಆರೋಗ್ಯ ರಕ್ಷಿಸುವಲ್ಲಿ ಪ್ರಮುಖ ಬೆಳೆಯಾಗಿ ರೂಪುಗೊಳ್ಳುತ್ತಿದೆ. ಪ್ರಗತಿಪರ ರೈತರು ಕಬ್ಬು, ಪಪಾಯ, ದಾಳಿಂಬೆ, ಬಾಳೆ, ಅಡಿಕೆ ಹಾಗೂ ತರಕಾರಿ ಬೆಳೆಯಲ್ಲಿ ಅಂತರ ಬೆಳೆಯಾಗಿ ಹೆಚ್ಚಿನ ಕ್ಷೇತ್ರದಲ್ಲಿ ಬೆಳೆಯುತ್ತಿದ್ದಾರೆ. ಕರ್ನಾಟಕದಲ್ಲಿ ಬಾಗಲಕೋಟ, ಬೀದರ, ದಾವಣಗೆರೆ ಹಾಗೂ ಕೋಲಾರ ಜಿಲ್ಲೆಗಳಲ್ಲಿ ಇದು ವಾಣಿಜ್ಯ ಬೆಳೆಯಾಗಿ ಪರಿಣಮಿಸಿದೆ. ಈ ಚೆಂಡು ಹೂವಿನ ಬೆಳೆಯು ೬೦ನೇ ದಿನಕ್ಕೆ ಹೂ ಬಿಡಲು ಪ್ರಾರಂಭಿಸಿ ೧೫೦-೧೬೫ ದಿನದ ವರೆಗೆ ಪೂರ್ಣ ಬೆಳೆಯಾಗಿ ಬೆಳೆದಲ್ಲಿ ಎಕರೆಗೆ ೮-೧೦ ಟನ್‌ಗಳಷ್ಟು ಹಾಗೂ ಕಬ್ಬಿನ ಬೆಳೆಯಲ್ಲಿ ಅಂತರ ಬೆಳೆಯಾಗಿ ಬೆಳೆದಲ್ಲಿ ೩-೩.೫ ಟನ್‌ಗಳಷ್ಟು ಇಳುವರಿ ನೀಡಿ ಕಡಿಮೆ ಅವಧಿಯಲ್ಲಿ ಅಧಿಕ ಲಾಭ ನೀಡುವ ಹೂವಿನ ಬೆಳೆಯಾಗಿದೆ.
    ಈ ಹಿನ್ನೆಲೆಯಲ್ಲಿ ಈ ವಿಶೇಷ ಕಾರ್ಯಗಾರ ಹಮ್ಮಿಕೊಳ್ಳಲಾಗಿದ್ದು, ಈ ಕಾರ್ಯಗಾರಕ್ಕೆ ರಾಜ್ಯದ ವಿವಿಧ ಜಿಲ್ಲೆಗಳಿಂದ ವಿವಿಧ ಚೆಂಡು ಹೂವಿನ ತಳಿಗಳ ಸಸಿಗಳ ಸರಬರಾಜುದಾರರು, ಹೂ ಖರೀದಿಸುವ ಖರೀದಿದಾರರು, ಚೆಂಡು ಹೂವಿನ ಪ್ರಗತಿಪರ ರೈತರು ಹಾಗೂ ವಿವಿಧ ಪುಷ್ಪ ಕೃಷಿ ತಂತ್ರಜ್ಞರು ಭಾಗವಹಿಸುವವರು.   
    ಕಾರ್ಯಗಾರದ ಉದ್ಘಾಟನೆ ನಂತರ ರೈತರಿಂದ-ರೈತರ ಸಂವಾದ ಕಾರ್ಯಕ್ರಮದಲ್ಲಿ ಚೆಂಡು ಹೂವಿನ ಪ್ರಗತಿಪರ ರೈತರಾದ ಬೀದರ್‌ನ ಬಾಬುರಾವ ಎನ್. ಪಾಟೀಲ, ದಾವಣಗೆರೆಯ ಗೋಪಾಲ ನಾಯ್ಕ್, ಜಮಖಂಡಿಯ ಚನ್ನಪ್ಪ ಬಿರಾದಾರ ಮತ್ತು ಶಂಕರ ಜಂಗಣ್ಣನವರ, ಮುಧೋಳದ ಯಲ್ಲಪ್ಪ ಲೋಗಾಂವಿ ಹಾಗೂ ಬಸವನಗೌಡ ಪೋಲಿಸ ಪಾಟೀಲ ಇವರು ತಮ್ಮ ಅನುಭವವನ್ನು ಹಂಚಿಕೊಳ್ಳಲಿದ್ದಾರೆ. ತದನಂತರ ಎ. ವ್ಹಿ. ಥಾಮಸ್ ನ್ಯಾಚುರಲ್ ಪ್ರೋಡಕ್ಟ್ಸ ಲಿಮಿಟೆಡ್ ಕಂಪನಿಯ ಡೆಪ್ಯುಟಿ ಮ್ಯಾನೆಜರ್ ಸುರೇಂದ್ರ ರೆಡ್ಡಿ ಅವರು ಹಾಗೂ ಮುಂಬೈನ ಚೆಂಡು ಹೂ
     ಮಧ್ಯಾಹ್ನದ ತಾಂತ್ರಿಕ ಅಧಿವೇಶನದಲ್ಲಿ ತೋವಿವಿ, ಬಾಗಲಕೋಟದ ವಿಜ್ಞಾನಿಗಳಾದ ಡಾ. ಸತೀಶ ಪಾಟೀಲ, ಸಹ ಪ್ರಾಧ್ಯಾಪಕರು, ಪುಷ್ಪ ವಿಜ್ಞಾನ : ಚೆಂಡು ಹೂವಿನ ಬೇಸಾಯ ಕ್ರಮಗಳು, ಡಾ. ಬಾಲಾಜಿ ಕುಲಕರ್ಣಿ, ಪ್ರಾಧ್ಯಾಪಕರು, ಪುಷ್ಪ ವಿಜ್ಞಾನ : ಚೆಂಡು ಹೂವಿನ ಮಾರುಕಟ್ಟೆ  ಹಾಗೂ ಮೌಲ್ಯವರ್ಧನೆ,  ಡಾ. ಆರ್. ಕೆ. ಮೆಸ್ತಾ, ಪ್ರಾಧ್ಯಾಪಕರು, ಸಸ್ಯರೋಗ ಶಾಸ್ತ್ರ : ಚೆಂಡು ಹೂವಿನ ರೋಗಗಳ ನಿರ್ವಹಣೆ, ಡಾ. ವೆಂಕಟೇಶಲು, ಪ್ರಾಧ್ಯಾಪಕರು, ಕೀಟಶಾಸ್ತ್ರ : ಚೆಂಡು ಹೂವಿನ ಕೀಟ ನಿರ್ವಹಣೆ ಕುರಿತು ಉಪನ್ಯಾಸ ನೀಡುವರು.  ಚೆಂಡು ಹೂವಿನ ಬೆಳೆಗಾರರು ಹಾಗೂ ಬೆಳೆಯಲು ಆಸಕ್ತಿವುಳ್ಳವರು ಈ ಕಾರ್ಯಗಾರದಲ್ಲಿ ಭಾಗವಹಿಸಿ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ವಿಸ್ತರಣಾ ನಿರ್ದೇಶಕ ಡಾ. ಎ.ಬಿ. ಪಾಟೀಲ್ ಅವರು ಮನವಿ ಮಾಡಿದ್ದಾರೆ.
ಖರೀದಿದಾರರಾದ ನಾಗರಾಜ ಕುಲಕರ್ಣಿ, ಬಾಲಾಜಿ ಪ್ಲಾವರ್‍ಸ್ ಮರ್ಚಂಟ್ಸ್ ಅವರು ಈ ಬೆಳೆಯ ಮಾರಾಟದ ಅವಕಾಶಗಳನ್ನು ತಿಳಿಸಿಕೊಡುವರು.  ರೈತರಿಂದ ರೈತರ ಸಂವಾದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಸ್ತರಣಾ ನಿರ್ದೇಶಕ ಮತ್ತು ತರಬೇತಿ ನಿರ್ದೇಶಕ ಡಾ. ಎ. ಬಿ. ಪಾಟೀಲ ಇವರು ವಹಿಸುವರು.

Advertisement

0 comments:

Post a Comment

 
Top