PLEASE LOGIN TO KANNADANET.COM FOR REGULAR NEWS-UPDATES

ಗವಿಸಿದ್ಧೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ  ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಸ್ಥಾನ ವಹಿಸಿ ಉಪನ್ಯಾಸ ನೀಡಿದ ಸಂಸ್ಥೆಯ ಉಪನ್ಯಾಸಕರಾದ ಶ್ರೀಮತಿ ಶೈಲಜಾ ಅರಳಲೇಮಠ ಮಾತನಾಡಿ  ಪ್ರತಿಯೊಬ್ಬ ವ್ಯಕ್ತಿಯ ಜೀವನದ ಸಾರ್ಥಕತೆಗೆ ವಾಲ್ಮೀಕಿ ಕವಿ ರಚಿಸಿದ ರಾಮಾಯಣ ದಾರಿದೀಪವಾಗಿದೆ ಪ್ರಸ್ತುತ ಯುಜನಾಂಗ ಅಥಹ ಕೃ
ತಿಯನ್ನು ಅಧ್ಯಯನದಲ್ಲಿ ತೊಡಗುವದರ ಮೂಲಕ ಸನ್ಮಾರ್ಗದಲ್ಲಿ ನಡೆಯುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು ಮುಂದುವರೆದು ಮಾತನಾಡಿ ಮಹರ್ಷಿ ವಾಲ್ಮೀಕಿ ಒಂದು ಜನಾಂಗ.ಪ್ರದೇಶಕ್ಕೆ ಸೀಮಿತವಾದ ವ್ಯಕ್ತಿಯಲ್ಲ ಅವರೊಬ್ಬ ಸಂತ.ದಾರ್ಶನಿಕ.ಯೋಗಿ ಆಗಿದ್ದಾರೆಂದು ಹೇಳಿದರು. ಸಂಸ್ಥೆಯ ಉಪನ್ಯಾಸಕರಾದ ಎಸ್.ಎಸ್.ವೀರನಗೌಡ್ರ. ಮಾತನಾಡಿ ರಾಮಾಯಣದಲ್ಲಿ ಸಹೋದರತ್ವ.ಪ್ರೇಮ ಸಹಬಾಳ್ವೆ.ವಾತ್ಸಲ್ಯ.ಅಂತರಗತ ಗೊಂಡಿದ್ದು ಪ್ರತಿಯೊಬ್ಬರಿಗೆ ಇಂದಿನ ದಿನಮಾನಗಳಲ್ಲಿ ಅಗತ್ಯತೆ ಇದೆ ಎಂದು ಹೇಳಿದರು ಕಾರ್ಯಕ್ರಮದ ಅಧ್ಯಕ್ಷತೆ ಸ್ಥಾನವಹಿಸಿದ ಸಂಸ್ಥೆಯ ಪ್ರಾಚಾರ್ಯರಾದ ಶ್ರಿ ಪ್ರಕಾಶ ಕೆ ಬಡಿಗೇರ ಮಾತನಾಡಿ  ಭಾರತದ ಮಹಾಕಾವ್ಯಗಳಲ್ಲಿ ಒಂದಾದ ರಾಮಾಯಣವನ್ನು ರಚಿಸಿದ ಮಹರ್ಷಿ ವಾಲ್ಮೀಕಿಗೆ ನಾವೆಲ್ಲರೂ ಚಿರಋಣಿ ಎಂದರು ಸಮಾರಂಭದಲ್ಲಿ ಸಂಸ್ಥೆಯ ಉಪನ್ಯಾಸಕರಾದ ಶ್ರೀಮತಿ ಎ.ಎನ್.ತಳಕಲ್. ಜಿ.ಎಸ್.ಸೊಪ್ಪಿಮಠ.ಎಲ್.ಎಸ್.ಹೊಸಮನಿ.ವಿ.ಆರ್.ಪಾಟೀಲ್.ಶ್ರೀಆನಂದರಾವ್‌ದೇಸಾ.ಜೆ.ಎಸ್.ಹಿರೇಮಠ.ಡಿ.ಎಂ.ಬಡಿಗೇರ. ಎಸ್.ಜಿ.ಬೆಣ್ಣಿ ಎಮ್.ವಿ.ಕಾತರಕಿ ಡಿ.ಹೊಸಮನಿ. ಉಪಸ್ಥಿತರಿದ್ದರು. ಈರಮ್ಮ ಹಾಗೂ ಸಂಗಡಿಗರು ಪ್ರಾರ್ಥಿಸಿದರು.ಮಮ್ಮತಾಜ ಬಿ ಸ್ವಾಗತಿಸಿದರು.ಶೃತಿಬಾಯಿ ವಂದಿಸಿದರು. ಮೇಘಾ ದಿವಟರ ನಿರೂಪಿಸಿದರು.

Advertisement

0 comments:

Post a Comment

 
Top