PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ, ಸ.೨೫ ನಮ್ಮ ಸುತ್ತಮುತ್ತಲಿನ ಸ್ವಚ್ಛ ಪರಿಸರದಿಂದ ಮಾತ್ರ ನಮ್ಮ ಆರೋಗ್ಯ ಪೂರ್ಣ ಸಮಾಜ ನಿರ್ಮಾಣವಾಗಲು ಸಾಧ್ಯವೆಂದು ವನಬಳ್ಳಾರಿ ಗ್ರಾ.ಪಂ. ಅಧ್ಯಕ್ಷೆ ದೇವಮ್ಮ ಬಿ. ಕಾರಬಾರಿ ಹೇಳಿದರು.
ಅವರು ಶುಕ್ರವಾರ ವನಬಳ್ಳಾರಿ ಗ್ರಾಮ ಪಂಚಾಯತ ವತಿಯಿಂದ ಸ್ವಚ್ಛ ಭಾರ
ಈ ಕಾರ್ಯಕ್ರಮದಲ್ಲಿ ಗ್ರಾ.ಪಂ. ಉಪಾಧ್ಯಕ್ಷರಾದ ಚಂದನಗೌಡ ಪಿ.ಪಾಟೀಲ್, ಮಾಜಿ ತಾ.ಪಂ. ಸದಸ್ಯ ಹನುಮಂತಪ್ಪ ಅರಿಶೀನಕೇರಿ, ಗ್ರಾ.ಪಂ. ಸದಸ್ಯರಾದ ಹನುಮಂತಪ್ಪ ಕುಂಟರ್, ಶಂಕ್ರಪ್ಪ ಪವಾರ್, ಯಮನಪ್ಪ ಲಮಾಣಿ, ಬಸಪ್ಪ, ಕಳಕಯ್ಯ ಮೆತಗಲ್ ಗ್ರಾಮದ ಹಿರಿಯರಾದ ಬಸಣ್ಣ ಪಟ್ಟೇದ್, ಯಂಕಪ್ಪ ನವಲಿ, ಯಮನೂರಪ್ಪ ಹೊಸಳ್ಳಿ, ಶಿವಣ್ಣ ಆಡಿನ್, ಕೊಟ್ರೇಶ ಮೆತಗಲ್, ನಾಗಪ್ಪ ಕುರಿ, ಹನುಮಂತಪ್ಪ ಮ್ಯಾದನೇರಿ, ತಿಮ್ಮಣ್ಣ, ವೀರಭದ್ರಯ್ಯ ಹರಿಶಿನಕೇರಿ, ಪಂಚಾಯತ ಅಭಿವೃದ್ಧಿ ಅಧಿಕಾರಿ ಹನುಮಂತಪ್ಪ ನಾಯಕ ಹಾಗೂ ಗ್ರಾ.ಪಂ. ಸಿಬ್ಬಂದಿ ವರ್ಗ ಮತ್ತು ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದರು.
ತ ಮಿಷನ್ ಯೋಜನೆ ಅಡಿಯಲ್ಲಿ ಸ್ವಚ್ಛ ಭಾರತ ಆಂದೋಲನ ಕಾರ್ಯಕ್ರಮದ ಜ್ಯೋತಿ ಬೆಳಗಿಸಿ ಮಾತನಾಡಿದರು. ಮುಂದುವರೆದು ಮಾತನಾಡಿದ ಅವರು, ಪ್ರತಿಯೊಂದು ಮನೆ ಕುಟುಂಬದ ಸದಸ್ಯರು ತಮ್ಮ ಮನೆಯ ಸುತ್ತಲಿನ ಪರಿಸರವನ್ನು ಅತ್ಯಂತ ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ನಿರ್ಮಲ ಭಾರತ ಅಭಿಯಾನದಡಿಯಲ್ಲಿ ವೈಯಕ್ತಿಕ ಶೌಚಾಲಯಗಳನ್ನು ನಿರ್ಮಿಸಿಕೊಂಡು ಅವುಗಳ ನಿರ್ವಹಣೆ ಮೂಲಕ ಸ್ವಚ್ಛ ಗ್ರಾಮ, ಸ್ವಚ್ಛ ಭಾರತ ಯೋಜನೆಗೆ ಸಹಕರಿಸಬೇಕೆಂದರು. ಕುಡಿಯುವ ನೀರಿನ ಸ್ಥಾವರಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಅದೇ ರೀತಿ ನೀರು ವ್ಯರ್ಥವಾಗದಂತೆ ಮಿತವಾಗಿ ಬಳಸಬೇಕು. ತಿಪ್ಪೆಗುಂಡಿಗಳನ್ನು ಆದಷ್ಟು ಗಾಮದಿಂದ ದೂರದಲ್ಲಿ ಸಂಗ್ರಹಿಸಬೇಕು ಎಂದು ಕರೆನೀಡಿದರು. ಗ್ರಾಮದ ಅಂಬಾದೇವಿ ದೇವಸ್ಥಾನ ಮತ್ತು ಸರಕಾರಿ ಹಿರಿಯ ಪ್ರಾಥಮಿಕ ಹಳೆ ಶಾಲೆಯ ಆವರಣದಲ್ಲಿ ಸ್ವಚ್ಛತಾ ಕಾರ್ಯವನ್ನು ನೇರವೇರಿಸಲಾಯಿತು.

Advertisement

0 comments:

Post a Comment

 
Top