PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ ಆ. ೧೩ (ಕ ವಾ): ಪ್ರಸಕ್ತ ಸಾಲಿನ ಸಾಲಿನ ಪ್ರೌಢ ಶಾಲಾ ಮುಖ್ಯ ಶಿಕ್ಷಕರು ಹಾಗೂ ತತ್ಸಮಾನ ಗ್ರೂಪ್ ಬಿ ವೃಂದದ ಅಧಿಕಾರಿಗಳ ಘಟಕದ ಹೊರಗಿನ ಕೋರಿಕೆ ವರ್ಗಾವಣೆ ದಿನಾಂಕವನ್ನು ಆ. ೧೪ ರಂದು ನಿಗದಿಪಡಿಸಿ ಪ್ರಕಟಣೆ ನೀಡಲಾಗಿತ್ತು.
     ಆದರೆ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರ ಸೂಚನೆಯಂತೆ ಘಟಕದ ಹೊರಗಿನ ಕೋರಿಕೆ ವರ್ಗಾವಣೆಯನ್ನು ಆ. ೨೬ ಕ್ಕೆ ರಂದು ಮುಂದೂಡಲಾಗಿದೆ.  ದಿನಾಂಕ ಮುಂದೂಡಿರುವ ಬಗ್ಗೆ ಇಲಾಖೆಯ ಅಂತರ್ಜಾಲ
www.schooleducation.kar.nic.in ದಲ್ಲಿ ಲಭ್ಯವಿದ್ದು, ನಿಗಧಿಪಡಿಸಿದ ದಿನಾಂಕ, ಸಮಯಕ್ಕೆ ಘಟಕದ ಹೊರಗಿನ ಅಂತಿಮ ತಾತ್ಕಾಲಿಕ ಪಟ್ಟಿಯಲ್ಲಿರುವ ಪ್ರೌಢ ಶಾಲಾ ಮುಖ್ಯ ಶಿಕ್ಷಕರು ಹಾಗೂ ತತ್ಸಮಾನ ಗ್ರೂಪ್ ಬಿ ವೃಂದದ ಅಧಿಕಾರಿಗಳು ನಿಗದಿತ ದಿನಾಂಕದಂದು ತಪ್ಪದೆ ಕೌನ್ಸಲಿಂಗ್‌ಗೆ ಹಾಜರಾಗುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಕಲಬುರಗಿಯ ಅಪರ ಆಯುಕ್ತರ ಕಚೇರಿ ತಿಳಿಸಿದೆ.
ಉಸ್ತುವಾರಿ ಸಚಿವರ ಕೊಪ್ಪಳ ಜಿಲ್ಲಾ ಪ್ರವಾಸ ಕಾರ್ಯಕ್ರಮ
ಕೊಪ್ಪಳ, ಆ.೧೩ (ಕ ವಾ): ಸಣ್ಣ ನೀರಾವರಿ ಮತ್ತು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ಎಸ್.ತಂಗಡಗಿ ಆ.೧೪ ಮತ್ತು ಆ.೧೫ ರಂದು ಎರಡು ದಿನಗಳ ಕೊಪ್ಪಳ ಜಿಲ್ಲಾ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
     ಸಚಿವರು ಆ.೧೪ ರಂದು ರಾ.೭.೦೦ ಗಂಟೆಗೆ ಮುನಿರಾಬಾದಿಗೆ ಆಗಮಿಸಿ, ಇಂದ್ರಭವನದಲ್ಲಿ ವಾಸ್ತವ್ಯ ಹೂಡುವರು. ಆ.೧೫ ರಂದು ಕೊಪ್ಪಳಕ್ಕೆ ಆಗಮಿಸಿ, ಬೆಳಿಗ್ಗೆ ೯.೦೦ ಗಂಟೆಗೆ ಜಿಲ್ಲಾ ಕ್ರೀಡಾಂಗಣದಲ್ಲಿ ೬೯ನೇಯ ಸ್ವಾತಂತ್ರ್ಯೋತ್ಸವದ ನಿಮಿತ್ಯ ಏರ್ಪಡಿಸಲಾಗಿರುವ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸುವರು. ನಂತರ ಕೊಪ್ಪಳ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಮಧ್ಯಾಹ್ನ ೧೨.೩೦ ಗಂಟೆಗೆ ತಾಲೂಕಿನ ಯತ್ನಟ್ಟಿ-ಭಾಗ್ಯನಗರ ಹಿರೇಹಳ್ಳ ಸೇತುವೆ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುವರು. ಮಧ್ಯಾಹ್ನ ೧.೩೦ ಗಂಟೆಗೆ ತಾಲೂಕಿನ ಕೋಳೂರು ಗ್ರಾಮದಲ್ಲಿ ಬ್ರಿಡ್ಜ್ ಕಂ ಬ್ಯಾರೇಜ್ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುವರು. ಸಚಿವರು ಅದೇ ದಿನ ಮಧ್ಯಾಹ್ನ ೨.೩೦ ಗಂಟೆಗೆ ಬೆಂಗಳೂರಿಗೆ ಪ್ರಯಾಣ ಬೆಳೆಸುವರು ಎಂದು ಸಚಿವರ ಆಪ್ತ ಕಾರ್ಯದರ್ಶಿ ತಿಳಿಸಿದ್ದಾರೆ.  

Advertisement

0 comments:

Post a Comment

 
Top