PLEASE LOGIN TO KANNADANET.COM FOR REGULAR NEWS-UPDATES

ಗಂಗಾವತಿ-14 ಇಂದು ನಗರದ ಮಡಿವಾಳ ಮಾಚಿದೇವರ ದೇವಸ್ಥಾನದಲ್ಲಿ ಆರುವಾರಗಳಿಂದ ನಡೆಯುತ್ತಿರುವ ವಿಶ್ವಧರ್ಮ ಪ್ರವಚನ ಕಾರ್ಯಕ್ರಮದಲ್ಲಿ  ದಿ,೧೫-೮-೨೦೧೫, ಶನಿವಾರ ಸಂಜೆ ೬ ಗಂಟೆಗೆ ಜರುಗಲಿದೆ ಈಕಾರ್ಯಕ್ರಮದಲ್ಲಿ ಕೂಡಲ ಸಂಗಮದ ಬಸವ ಧರ್ಮ ಪೀಠದ ದ್ವಿತಿಯ ಪೀಠಾದ್ಯಕ್ಷರಾದ ಪ್ರಥಮ ಮಹಿಳಾ ಜಗದ್ಗುರು ಪೂಜ್ಯ ಶ್ರೀ ಮಹಾಜಗದ್ಗುರು ಡಾ|| ಮಾತೆ ಮಹಾದೇವಿ ಮಾತಾಜಿಯವರ  ಗರು ವಂದನಾ ಕಾರ್ಯಕ್ರಮ ಹಮ್ಮಿ ಕೊಳ್ಳಲಾಗಿದೆ. ದಿವ್ಯ ನೇತೃತ್ವ ಧಾರವಾಡ ಜಗನ್ಮಾತಾ ಅಕ್ಕಮಹಾದೇವಿ ಅನುಭಾವ ಪೀಠದ ಪೀಠಾಧ್ಯಕ್ಷರಾದ  ಪೂಜ್ಯ ಶ್ರೀ ಜಗದ್ಗುರು ಮಾತೆ ಗಂಗಾದೇವಿ ಮಾತಾಜಿ ವಹಿಸಿ ಕೊಳ್ಳಲಿದ್ದಾರೆ.ಉಪಸ್ಥಿತಿ    ಬೆಂಗಳೂರು ಬಸವಮಂಟಪದ ಪೂಜ್ಯ ಶ್ರೀ ಸದ್ಗುರು ಮಾತೆ ಬಸವರತ್ನಾದೇವಿಯವರು,ಉದ್ಘಾಟನೆ ಸಣ್ಣ ನೀರಾವರಿ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ,ಬಸವ ಧ್ವಜಾರೋಹಣ: ಮಾಜಿ ಎಂ.ಎಲ್.ಸಿ. ಹೆಚ್.ಆರ್.ಶ್ರೀನಾಥ್,ಅಧ್ಯಕ್ಷತೆ ಮಾಜಿ ಶಾಸಕ ಶರಣ ಪರಣ್ಣ ಮುನವಳ್ಳಿ ಅತಿಥಿಗಳಾಗಿ ಮಾಜಿ ಸಂಸದ ಶಿವರಾಮಗೌಡ ಕೈಮಗ್ಗ ನಿಗಮ ಅಧ್ಯಕ್ಷ ಎಂ.ಮಲ್ಲಿಕಾರ್ಜುನ ನಾಗಪ್ಪ, , ಕೇತಯ್ಯ ಸಮಾಜ ಮುಖಂಡ ಗೋವಿಂದಪ್ಪ ಮೇದಾರ, ಪಂಚಮಸಾಲಿ ಸಮಾಜದಜಿಲ್ಲಾಧ್ಯಕ್ಷ ಕಳಕನಗೌಡ ಭಾಗವಹಿಸಲಿದ್ದಾರೆ. ಪ್ರಸಾದ ಸೇವೆಯನ್ನು ಮಡಿವಾಳ ಮಾಚಿದೇವರ ಸಮಾಜ ವಹಿಸಿಕೊಂಡಿದೆ.

Advertisement

0 comments:

Post a Comment

 
Top