ಕಿಷ್ಕಿಂದಾ ಟ್ರಸ್ಟನ ಅಕ್ರಮ ಗೆಸ್ಟ್‌ಹೌಸ್ ನೆಲಸಮ ಮಾಡಿದ ತಹಸೀಲ್ದಾರ್ ವೆಂಕನಗೌಡ ಪಾಟೀಲ್‌ರಿಗೆ ಅಭಿನಂದನೆಗಳು. ಕರ್ನಾಟಕ ಸರಕಾರ ಕಿಷ್ಕಿಂದಾ ಟ್ರಸ್ಟ್‌ನ ಅಧ್ಯಕ್ಷರಾದ ಶಮಾ ಪವಾರ್‌ರವರ ಚಟುವಟಿಕೆಗಳ ಬಗ್ಗೆ ಗಮನ ಹರಿಸಿ ಅವರ ಅಕ್ರಮಗಳನ್ನು ನಿಯಂತ್ರಿಸಿ ಸರಕಾರದ ಯಾವುದೇ ಅನುದಾನಗಳು, ಯೋಜನೆಗಳು ಕಿಷ್ಕಿಂದಾ ಟ್ರಸ್ಟ್‌ಗೆ ಕೊಡದೇ ಟ್ರಸ್ಟ್‌ನ್ನು ಕಪ್ಪುಪಟ್ಟಿಗೆಗೆ ಸೇರಿಸಬೇಕೆಂದು ಭಾರಧ್ವಾಜ್ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ. ಹಂಪಿ ವಿಶ್ವಪರಂಪರೆ ಪಟ್ಟಿಯಲ್ಲಿ ಸೇರಿದಾಗಿನಿಂದಲೂ ವಿರುಪಾಪುರ ಗಡ್ಡೆಯನ್ನು ಕೇಂದ್ರವಾಗಿಸಿಕೊಂಡು ಭೂಗತ ಶಕ್ತಿಗಳು ಅಲ್ಲಿ ರಾಜ್ಯವಾಳುತ್ತಿವೆ. ಇಲ್ಲಿ ಯತೇಚ್ಛವಾಗಿ ಗಾಂಜಾ, ಅಫೀಮು, ಅಕ್ರಮ ಮದ್ಯದ ವ್ಯವಹಾರ ನಡೆಯುತ್ತಾ ಇದೆ. ಅರಣ್ಯ ಭೂಮಿಯಲ್ಲಿ ಅನೇಕ ಅಕ್ರಮ ರೆಸಾರ್ಟ್‌ಗಳು ತಲೆಎತ್ತಿವೆ. ಕೊಪ್ಪಳ ಜಿಲ್ಲಾಡಳಿತ ಈ ಎಲ್ಲಾ ಕಾನೂನುಬಾಹಿರ ಚಟುವಟಿಕೆಗಳನ್ನು ನಿಯಂತ್ರಿಸಲು ವಿಫಲವಾಗಿದೆ. ಕೊಪ್ಪಳ ಜಿಲ್ಲೆಯಲ್ಲಿ ಸರಕಾರಿ ಭೂಮಿಗಳಲ್ಲಿ ಮತ್ತು ರಸ್ತೆಗಳಲ್ಲಿರುವ ಪ್ರಾರ್ಥನಾ ಮಂದಿರಗಳನ್ನು ಮಾನ್ಯ ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ತೆರುವುಗೊಳಿಸಬೇಕು. ಧಾರ್ಮಿಕ ಚಟುವಟಿಕೆಗಳಿಗಾಗಿ ಆಕ್ರಮಿಸಿಕೊಂಡಿರುವಂತಹ ಸರಕಾರಿ ಭೂಮಿಯನ್ನು ಸರ್ವೆ ಮಾಡಿ ಸರಕಾರ ಸ್ವಾಧೀನ ಮಾಡಿಕೊಳ್ಳಬೇಕು. ಸರಕಾರಿ ಭೂಮಿಗಳನ್ನು ಅತಿಕ್ರಮಣ ಮಾಡಿದವರ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸಬೇಕೆಂದು ಸಿಪಿಐಎಂಎಲ್ ಪಕ್ಷ ಒತ್ತಾಯಿಸುತ್ತದೆ.
Subscribe to:
Post Comments (Atom)
0 comments:
Post a Comment