PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ, ಆ.೧೩ (ಕ, ವಾ): ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸ್ಥಾಪಿಸಲಾಗಿರುವ ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜ ಅವರ ತಂದೆ ಅಮರಪ್ಪ ಅಮರಗುಂಡಪ್ಪ ಅರಳಿ ಸ್ಮಾರಕ ದತ್ತಿ ಪ್ರಶಸ್ತಿಗೆ ಕೊಪ್ಪಳದ ಸಾಹಿತಿ ಈಶ್ವರ ಹತ್ತಿ ರಚಿಸಿದ ಗುನ್ನಾಳೇಶನ ವಚನಗಳು ಎಂಬ ಕೃತಿ ಆಯ್ಕೆಗೊಂಡಿದೆ. ಕೊಪ್ಪಳ ಜಿಲ್ಲೆಯ ಬರಹಗಾರರು ರಚಿಸಿರುವ ಕಾವ್ಯ ಕೃತಿಗಳಿಗೆ ಕೊಡಲ್ಪಡುವ ಈ ಪ್ರಶಸ್ತಿಗೆ ೨೦೧೪ರಲ್ಲಿ ಪ್ರಕಟಗೊಂಡ ಕಾವ್ಯ ಕೃತಿಗಳನ್ನು ಆಹ್ವಾನಿಸಲಾಗಿತ್ತು. ಪ್ರಶಸ್ತಿಗಾಗಿ ಜಿಲ್ಲೆಯ ವಿವಿದೆಡೆಗಳಿಂದ ಒಟ್ಟು ೦೮ ಕೃತಿಗಳು ಬಂದಿದ್ದವು. ಗಂಗಾವತಿಯ ಗಜಲ್ ಕವಿ ಅಲ್ಲಾಗಿರಿರಾಜ ಕನಕಗಿರಿ, ಕೊಪ್ಪಳದ ಪ್ರೊ.ಡಿ.ಎಂ.ಬಡಿಗೇರ, ಯಲಬುರ್ಗಾದ ಸಾಹಿತಿ ಶಾಂತಾ ಕುಡಗುಂಟಿ ಆಯ್ಕೆ ಸಮಿತಿಯಲ್ಲಿ ನಿರ್ಣಾಯಕರಾಗಿ ಕಾರ್ಯನಿರ್ವಹಿಸಿದ್ದರು. ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಶೀಘ್ರದಲ್ಲಿಯೇ ಏರ್ಪಡಿಸಲಾಗುವುದು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ವೀರಪ್ಪ ನಿಂಗೋಜಿ ತಿಳಿಸಿದ್ದಾರೆ.

Advertisement

0 comments:

Post a Comment

 
Top