PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ- ಸನ್ಮಾನ ಎಂಬುವುದು ವೃತ್ತಿಯಲ್ಲಿ ಜವಾಬ್ದಾರಿಯನ್ನು ಹೆಚ್ಚಿಸುತ್ತದೆ ಎಂದು ವೈಧ್ಯರಾದ ಡಾ.ಮಂಜುಳಾ ಶೆಟ್ಟರ್ ಹೇಳಿದರು.ನಗರದ ಸಿ.ಪಿ.ಎಸ್.ಶಾಲೆಯಲ್ಲಿ ಸರ್ಕಾರಿ ಅಂಗವಿಕಲ ನೌಕರರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ವೈದೈರ ದಿನಾಚರಣೆಯ ಕಾರ್ಯಕ್ರಮದಲ್ಲಿ ಸನ್ಮಾನವನ್ನು ಸ್ವೀಕರಿಸಿ ಮಾತನಾಡುತ್ತ,ಯಾವುದೇ ಒಂದು ವೃತ್ತಿಯಲ್ಲಿ ಕಾರ್ಯನಿರ್ವಹಿಸುವ ವ್ಯಕ್ತಿಗೆ ಸನ್ಮಾನದಂತಹ ಪ್ರೋತ್ಸಾಹ ದೊರೆತರೆ ಅವನಿಗೆ ತನ್ನ ವೃತ್ತಿಯ ಜವಾಬ್ದಾರಿಯು ಇನ್ನಷ್ಟು ಹೆಚ್ಚಿತ್ತದೆ.ಸರ್ಕಾರಿ ಅಂಗವಿಕಲ ನೌಕರರ ಸಂಘದವರು ಆಯಾ ದಿನಾಚರಣೆಯ ವಿಶೇಷ ವ್ಯಕ್ತಿಗಳನ್ನು ಕೆರಸಿ ಅವರನ್ನು ಸನ್ಮಾನಿಸಿ ಗೌರವಿಸುವ ಕಾರ್ಯವು ಶ್ಲಾಘನೀಯವಾಗಿದೆ.ಇತ್ತೀಚಿನ ದಿನಗಳಲ್ಲಿ ವೈದ್ಯರ ಮೇಲೆ ಅನೇಕ ರೀತಿಯ ಹಲ್ಲೆಯಂತಹ ಪ್ರಕರಣಗಳು ಜರುಗುತ್ತಿದ್ದು,ಇಂತಹ ಪ್ರಕರಣದಲ್ಲಿ ಭಾಗಿಯಾದವರ ವಿರುದ್ದ ಸರ್ಕಾರವು ಕ್ರಮವನ್ನು ಕೈಗೊಂಡು ವೈದ್ಯರಿಗೆ ಸೂಕ್ತವಾದ ಭದ್ರತೆಯನ್ನು ನೀಡಿದರೆ ಇನ್ನೂ ಹೆಚ್ಚಿನ ಸೇವೆಯನ್ನು ಸಮಾಜಕ್ಕೆ ನೀಡಲು ಸಾಧ್ಯವಾಗುತ್ತದೆ ಎಂದು ಹೇಳಿದರು. ಪ್ರಾಸ್ತಾವಿಕವಾಗಿ ಸರ್ಕಾರಿ ಅಂಗವಿಕಲ ನೌಕರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಬೀರಪ್ಪ ಅಂಡಗಿ ಚಿಲವಾಡಗಿ ಮಾತನಾಡಿ,ಸಮಾಜಕ್ಕೆ  ಶಿಕ್ಷಕರ,ವೈದ್ಯರ ಹಾಗೂ ಅಭಿಯಂತರರ ಕಾರ್ಯ ಬಹಳ ಮುಖ್ಯವಾದದ್ದಾಗಿದೆ.ಪ್ರತಿಯೊಬ್ಬ ವ್ಯಕ್ತಿಯು ತನ್ನ ಜವಾಬ್ದಾರಿಯನ್ನು ಅರಿತು ಕಾರ್ಯನಿರ್ವಹಿಸಿ,ಸಮಾಜಕ್ಕೆ ತನ್ನದೆಯಾದ ಕೊಡುಗೆಯನ್ನು ನೀಡಬೇಕು ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಲೆಯ ಮುಖ್ಯೋಪಾದ್ಯಾಯರಾದ ಭರಮಪ್ಪ ಕಟ್ಟಿಮನಿ ಮಾತನಾಡುತ್ತ,ಪಶ್ಚಿಮ ಬಂಗಾಳದ ಮುಖ್ಯಮಂತ್ರಿಗಳಾಗಿದ್ದ ವಿ.ಸಿ.ರಾಯ್‌ರವರ ನೆನಪಿಗಾಗಿ ಇಂದು ವೈದ್ಯರ ದಿನಾಚರಣೆಯನ್ನು ಆಚರಿಸಲಾಗುತ್ತಿದೆ.ಅವರವರ ದಿನಾಚರಣೆಯನ್ನು ಅವರು ಆಚರಿಸಿಕೊಳ್ಳುವುದರಲ್ಲಿ ವಿಶೇಷವಿಲ್ಲ.ಆದರೆ ಅದನ್ನು ಬೇರೆಯವರು ಆಯೋಜಿಸಿ ಆಚರಿಸುವುದೆ ವಿಶೇಷವಾಗಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ವೈದ್ಯರಾದ ಡಾ.ರಿಯಾಜುದ್ದಿನ್,ಡಾ.ಹಾಜಿರಾಬೇಗಂ,ಡಾ.ವಿನೋದ,ಹೇಮಾವತಿ ಹಾಗೂ ಶಿಕ್ಷಕರಾದ ವಿರುಪಾಕ್ಷಪ್ಪ ಬಾಗೋಡಿ,ಅಂಬಕ್ಕ,ಶಂಕ್ರಮ್ಮ ಬಂಗಾರಶೆಟ್ಟರ್,ಸುನಂದಾ,ಮೋಹಿನಪಾಷಾಭಿ, ಭಾರತಿ,ವಿಜಯಲಕ್ಷ್ಮಿ,ಗಂಗಮ್ಮ,ರತ್ನಾ,ವಿಜಯಾ,ಗೌಸೀಯಾ,ರಾಜೇಶ್ವರಿ ಮುಂತಾದವರು ಹಾಜರಿದ್ದರು.
ಕಾರ್ಯಕ್ರಮವನ್ನು ಶಿಕ್ಷಕರಾದ ಗುರುರಾಜ ಕಟ್ಟಿ ನಿರೂಪಿಸಿದರು.

Advertisement

0 comments:

Post a Comment

 
Top