PLEASE LOGIN TO KANNADANET.COM FOR REGULAR NEWS-UPDATES

ಶಿಕ್ಷಣದ ವಾಣಿಜ್ಯೀಕರಣ ಮತ್ತು ಕೇಂದ್ರೀಕರಣದ ಹೊಸ ನೀತಿಗಳನ್ನು ತಡೆಗಟ್ಟಿ.  ಎಲ್ಲರಿಗೂ ಸಮಾನ, ವೈಚಾರಿಕ, ಉತ್ತಮ ಗುಣಮಟ್ಟದ ಶಿಕ್ಷಣ ನೀಡಲು ಒತ್ತಾಯಿಸಿ ಗಂಗಾವತಿಯಲ್ಲಿ ಸುಮಾರು ಎರಡು ಸಾವಿರ ವಿದ್ಯಾರ್ಥಿಗಳ ಸಹಿ ಸಂಗ್ರಹ  ಮಾಡಲಾಗಿದೆ.  ಈ ಚಳುವಳಿ ದಾವಣಗೆರೆಯಿಂದ ಐಸಾ ವಿದ್ಯಾರ್ಥಿಗಳು ಬಂದು ಭಾಗವಹಿಸಿದ್ದರೆಂದು ಐಸಾ ರಾಜ್ಯ ಸಂಚಾಲಕ ದೊಡ್ಡಮನಿ ಪ್ರಸಾದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ದೇಶದ ಶೈಕ್ಷಣಿಕ ಸಂಸ್ಥೆಗಳ ಸ್ವಾಯತ್ತತೆ ಮತ್ತು ಪಠ್ಯಕ್ರಮದ ಸ್ವಾತಂತ್ರ್ಯವನ್ನು ದಮನ ಮಾಡುವ ಕೇಂದ್ರ ಸರ್ಕಾರದ ನೂತನ ನೀತಿಗಳ ಹೇರಿಕೆಯನ್ನು ಕೂಡಲೇ ನಿಲ್ಲಿಸುವಂತೆ ಮತ್ತು ಶಿಕ್ಷಣ ಕೇಂದ್ರವನ್ನು ಕೇಂದ್ರೀಕರಿಸಿ, ವಾಣಿಜ್ಯೀಕರಣಕ್ಕೊಳಪಡಿಸಿ, ವಿಭಜಕ, ಅಂಧಶ್ರದ್ಧೆಯ ನೀತಿಗಳನ್ನು ಜಾರಿಗೊಳಿಸುವ ಬದಲು ಕೇಂದ್ರ ಸರ್ಕಾರವು ಸಾರ್ವತ್ರಿಕ, ಉಚಿತ, ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡಲು ಒತ್ತಾಯಿಸಿ.  ಎಲ್‌ಕೆಜಿಯಿಂದ ಸ್ನಾತಕೋತ್ತರ ಪದವಿಯವರೆಗೆ ಈಗಿರನ ತಾರತಮ್ಯದಿಂದ ಕೂಡಿದ ಶಿಕ್ಷಣ ವ್ಯವಸ್ಥೆಯನ್ನು ಬದಲಾಯಿಸಲು ಕೇಂದ್ರ ಸರ್ಕಾರವನ್ನು ಐಸಾ ಅಖಿಲ ಭಾರತ ವಿದ್ಯಾರ್ಥಿ ಸಂಘ ಆಗ್ರಹಿಸುತ್ತದೆ. ಈ ಕೆಲವು ಬದಲಾವಣೆಗಳನ್ನು ಅಗ್ರಹಿಸಲಾಗುತ್ತದೆ. ಈ ಸಹಿ ಸಂಗ್ರಹ ಚಳುವಳಿಯಲ್ಲಿ ಐಸಾ ವಿದ್ಯಾರ್ಥಿ ಮುಖಂಡರಾದ ಡಿ.ಶಶಿಕುಮಾರ್, ಎನ್. ಚಂದ್ರಪ್ಪ., ಸಿ.ಹನುಮಂತಪ್ಪ., ವೆಂಕಟೇಶ ಬಾಬು., ಮತ್ತೀತರು ಭಾಗವಹಿಸಿದ್ದರು.

Advertisement

0 comments:

Post a Comment

 
Top