PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ, ಏ.  : ಹುಬ್ಬಳ್ಳಿ-ಚೆನ್ನೈ (ಗಾಡಿ ಸಂಖ್ಯೆ-೦೭೩೨೩/೦೭೩೨೪) ನಡುವೆ ಹೊಸ ರೈಲು ಸಂಚಾರ ಏ.೦೬ ರಿಂದ ಪ್ರಾರಂಭವಾಗಲಿದೆ. ಈ ರೈಲು ಮೇ. ತಿಂಗಳವರೆಗೆ ವಾರಕ್ಕೆ ಎರಡು ಬಾರಿ ಸಂಚರಿಸಲಿದೆ. 
  ನೂತನ ರೈಲು ಸೋಮವಾರ ಹಾಗೂ ಬುಧವಾರ ಹುಬ್ಬಳ್ಳಿಯಿಂದ ರಾತ್ರಿ ೮.೨೦ ಗಂಟೆಗೆ ಹೊರಟು, ರಾತ್ರಿ ೧೦.೪೮ ಗಂಟೆಗೆ ಕೊಪ್ಪಳಕ್ಕೆ ಆಗಮಿಸುವರು,  ನಂತರ ಹೊಸಪೇಟೆ, ಬಳ್ಳಾರಿ, ಗುಂತಕಲ್, ರೇಣಿಗುಂಟ ಮೂಲಕ ಮರುದಿನ ಬೆಳಿಗ್ಗೆ ೧೧ ಗಂಟೆಗೆ ಚೆನ್ನೈ ತಲುಪಲಿದೆ .  ಚೆನ್ನೈನಿಂದ ಮಂಗಳವಾರ ಮತ್ತು ಗುರುವಾರ ಮದ್ಯಾಹ್ನ ೧.೧೫ ಗಂಟೆಗೆ ನಿರ್ಗಮಿಸಲಿರುವ ಈ ರೈಲು, ಬುಧವಾರ ಮತ್ತು ಶುಕ್ರವಾರ ರಾತ್ರಿ ೨.೫೦ ಗಂಟೆಗೆ ಕೊಪ್ಪಳ ತಲುಪಲಿದ್ದು, ನಂತರ ಗದಗ ಮೂಲಕ ಬೆಳಿಗ್ಗೆ ೫ ಗಂಟೆಗೆ ಹುಬ್ಬಳ್ಳಿಯನ್ನು ತಲುಪಲಿದೆ. 
  ತಿರುಪತಿ ಹಾಗೂ ಚೆನ್ನೈಗೆ ತೆರಳುವ ಪ್ರಯಾಣಿಕರು ಈ ರೈಲಿನ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.  ಮೇ ತಿಂಗಳಿನವರೆಗೆ ಮಾತ್ರ ಸಂಚರಿಸಲಿರುವ ಈ ರೈಲನ್ನು ಖಾಯಂಗೊಳಿಸಲು ರೈಲ್ವೆ ಸಚಿವರಿಗೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿರುವ ಕೊಪ್ಪಳ ಸಂಸದ ಸಂಗಣ್ಣ ಕರಡಿ, ನೂತನ ರೈಲನ್ನು ಘೋಷಣೆ ಮಾಡಿರುವ ರೈಲ್ವೆ ಸಚಿವರಿಗೆ ಹಾಗೂ ರೈಲ್ವೆ ಹಿರಿಯ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ .

Advertisement

0 comments:

Post a Comment

 
Top