PLEASE LOGIN TO KANNADANET.COM FOR REGULAR NEWS-UPDATES

ಗಂಗಾವತಿ ಎಸ್.ಇ.ಟಿ. ಮತ್ತು ಸಿ.ಎಸ್.ಟಿ. ಈ ಯೋಜನೆಯಡಿಯಲ್ಲಿ ಸರಿಯಾದ  ಫಲಾನುಭವಿಗಳನ್ನು ಗುರುತಿಸದೇ ಯೋಜನೆ ಅನುಷ್ಠಾನಗೊಳಿಸಿರುವುದು : ಮೂಲದಿಂದ ಭ್ರಷ್ಠಾಚಾರ ತನಿಖೆ ಮಾಡಲು ಆಗ್ರಹ

ಗಂಗಾವತಿ ತಾಲೂಕಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಠ ಪಂಗಡ ವಿಶೇಷ ಘಟಕ ಯೋಜನೆಯಡಿಯಲ್ಲಿ  ಗಂಗಾವತಿ ತಾಲೂಕ ಪಶುಪಾಲನಾ ಮತ್ತು ಪಶುವೈದ್ಯಕೀಯ ಇಲಾಖೆಯಿಂದ  ಸದ್ರಿ ಜನರ ಆರ್ಥಿಕ ಅಭಿವೃದ್ಧಿಗಾಗಿ ತಮ್ಮ ಇಲಾಖೆಯಿಂದ ಆಕಳು ಖರೀದಿಸಲು ಶೇ. ೮೦% ಸಹಾಯಧನ, ೨೦% ಬ್ಯಾಂಕ್ ಸಾಲ ಈ ಯೋಜನೆಯು ತಮ್ಮ ಇಲಾಖೆಯಿಂದ ಅನುಷ್ಠಾನಗೊಳಿಸಿದ್ದು ಇರುತ್ತದೆ. 

ಸದ್ರಿ ಫಲಾನುಭವಿಗಳನ್ನು ಸರಿಯಾದ ರೀತಿ ಆಯ್ಕೆ ಮಾಡದೆ, ಪ್ರಚಾರ ಮಾಡದೇ, ಯೋಜನೆ ಬಗ್ಗೆ ಅರಿವು ಮೂಡಿಸದೇ ತಮಗೆ ಬೇಕಾದ ವ್ಯಕ್ತಿಗಳಿಂದ ಅರ್ಜಿ ಹಾಕಿಸಿ ಸಂಬಂಧಪಟ್ಟ ಗ್ರಾಮ ಪಂಚಾಯತ್‌ಗಳಲ್ಲಿ ಹೆಸರಿಗೆ ಮಾತ್ರ ಗ್ರಾಮ ಸಭೆ ಮಾಡಿದ ರೀತೀಯಲ್ಲಿ ಶಿಫಾರಸ್ಸು ಮಾಡಿಕೊಂಡು ಈ ಯೋಜನೆಯನ್ನು ಸರಿಯಾದ ರೀತಿ ಅನುಷ್ಠಾನಗೊಳಿಸದೇ ಈ ಜನಾಂಗಕ್ಕೆ ಅನ್ಯಾಯವಾಗಿರುತ್ತದೆ. 

ಈ ಕೂಡಲೇ ಈಗಾಗಲೇ ಆಯ್ಕೆಯಾಗಿರುವವರನ್ನು ರದ್ದುಪಡಿಸಿ ಹೊಸದಾಗಿ ಪಾರದರ್ಶಕವಾಗಿ ಅರ್ಜಿ ತುಂಬಿಸಿಕೊಂಡು ಪರಿಶಿಷ್ಠ ಜಾತಿ ಜನರ ಅಭಿವೃದ್ಧಿಗಾಗಿ ಶ್ರಮಿಸಲು ಮಾನ್ಯ ತಾಲೂಕ ಅಧಿಕಾರಿಗಳು, ಪಶುಪಾಲನಾ ಮತ್ತು ಪಶು ವೈದ್ಯಕೀಯ ಇಲಾಖೆ, ಗಂಗಾವತಿ ಇವರಿಗೆ ಪಾರದರ್ಶಕ ನಿರ್ವಹಣೆ ಮಾಡಲು ಮನವಿ ಸಲ್ಲಿಸಲಾಯಿತು ಎಂದು ರಾಜ್ಯಾಧ್ಯಕ್ಷರಾದ ಕೆ. ಗಣೇಶ   ತಿಳಿಸಿದ್ದಾರೆ.


Advertisement

0 comments:

Post a Comment

 
Top