PLEASE LOGIN TO KANNADANET.COM FOR REGULAR NEWS-UPDATES



ಕೊಪ್ಪಳ,ಮಾ.೦೩: ಇಂದಿನ ಮಕ್ಕಳೆ ನಾಳೆಯ ನಾಡಿನ ಭಾವಿ ಪ್ರಜೆಗಳಾಗಿದ್ದು ಮಕ್ಕಳ ಉಜ್ವಲ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ ಮಕ್ಕಳು ಕೂಡಾ ಒಂದು ಉತ್ತಮವಾದ ಗುರಿಯನ್ನು ಇಟ್ಟುಕೊಂಡು ವಿದ್ಯಾಭ್ಯಾಸ ಮಾಡಬೇಕು ಸತತ ಪರಿಶ್ರಮದಿಂದ ಯಶಸ್ಸು ಕಾಣಲು ಸಾಧ್ಯ ಎಂದು ವಾಣಿಜ್ಯೋದ್ಯಮಿ ಹಾಗೂ ಕೊಪ್ಪಳ ಲಾಯನ್ಸ್ ಕ್ಲಬ್ ಅಧ್ಯಕ್ಷ ಕೆ.ಶ್ರೀನಿವಾಸ್ ಗುಪ್ತಾ ಅಭಿಪ್ರಾಯಪಟ್ಟರು.
   ಅವರು ಮಂಗಳವಾರ ಇಲ್ಲಿನ ಬನ್ನಿಕಟ್ಟಿ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಏರ್ಪಡಿಸಿದ್ದ ವಾರ್ಷಿಕ ಚಿತ್ರಕಲಾ ಪ್ರದರ್ಶನದ ಉದ್ಘಾಟನೆ ನೆರೆವೇರಿಸಿ ಮಾತನಾಡುತ್ತಾ ವಿದ್ಯಾರ್ಥಿ ಯುವಕ, ಯುವತಿಯರು ಸತತ ಪರಿಶ್ರಮಪಟ್ಟರೆ ಗುರಿತಲುಪಲು ಸಾಧ್ಯ ಎಂದರು.
      ಮುಂದುವರೆದು ಮಾತನಾಡಿದ ಅವರು ವಿದ್ಯಾರ್ಥಿಗಳಲ್ಲಿ ಚೈತನ್ಯ ತುಂಬಲು ಮತ್ತು ಅವರಲ್ಲಿ ಅಡಗಿರುವ ಪ್ರತಿಭೆಗಳನ್ನು ಹೊರತರಲು ಇಂಥಹ ಪ್ರದರ್ಶನಗಳ ವೇದಿಕೆ ಅತ್ಯಂತ ಸಹಕಾರಿಯಾಗಿದೆ ಎಂದ ಅವರು ಕೇವಲ ಸರ್ಕಾರಿ ನೌಕರಿಮಾಡುವ ಉದೇಶದಿಂದ ಶಿಕ್ಷಣ ಪಡೆಯದೆ ನೂರಾರು ಜನಕ್ಕೆ ಸ್ವಂತ ಉದ್ಯೋಗ ಸೃಷ್ಠಿಸುವ ಯೋಜನೆ ಆರಂಭಿಸುವ ಛಲ ವಿದ್ಯಾರ್ಥಿಗಳಲ್ಲಿ ಮೂಡಬೇಕು. ಎಂದು ವಾಣಿಜ್ಯೋದ್ಯಮಿ ಹಾಗೂ ಕೊಪ್ಪಳ ಲಾಯನ್ಸ್ ಕ್ಲಬ್ ಅಧ್ಯಕ್ಷ ಕೆ.ಶ್ರೀನಿವಾಸ್ ಗುಪ್ತಾ ಅಭಿಪ್ರಾಯಪಟ್ಟರು.
     ಮಕ್ಕಳು ಏರ್ಪಡಿಸಿದ ಚಿತ್ರಕಲಾ ಪ್ರದರ್ಶನದ ಉದ್ಘಾಟನೆಯನ್ನು ನಗರಸಭೆಯ ಉಪಾಧ್ಯಕ್ಷ ಬಾಳಪ್ಪ ಬಾರಕೇರ ಮಾತನಾಡಿ ಮಕ್ಕಳಲ್ಲಿ ಬುದ್ದಿಶಕ್ತಿ ತುಂಬಬೇಕು ಚಿತ್ರಕಲೆಯಿಂದ ಈ ಜ್ಞಾನ, ಆಸಕ್ತಿ ಬೆಳೆಯುತ್ತದೆ ಮಕ್ಕಳಲ್ಲಿರುಯವ ಪ್ರತಿಭೆ ಗುರುತಿಸುವ ಕೆಲಸ ಶಿಕ್ಷಕರು ಮಾಡಬೇಕು ಎಂದ ಅವರು  ಈ ಹಿಂದೆ ಸರ್ಕಾರಿ ಶಾಲೆಗಳಲ್ಲಿ ಸರ್ಕಾರದ ಯಾವುದೇ ಸೌಲಭ್ಯ ವಿರಲಿಲ್ಲ ಆದರೆ ಈಗಿನ ಸಂದರ್ಭದಲ್ಲಿ ಸರ್ಕಾರ ಸಾಕಷ್ಟು ಸೌಲಭ್ಯವನ್ನು ಒದಗಿಸಿದೆ ಇದರ ಸದುಪಯೋಗ ಪಡೆದುಕೊಂಡು ವಿದ್ಯಾರ್ಥಿಗಳು ಉತ್ತಮಗುಣ ಮಟ್ಟದ ಶಿಕ್ಷಣ ಪಡೆದು ಭವ್ಯ ಭಾರತದ ಪ್ರಜೆಗಳಾಗಿ ಹೊರಹೊಮ್ಮಬೇಕು ಎಂದ  ಅವರು ನಗರಸಭೆಯ ವತಿಯಿಂದ ಶಾಲೆಗೆ ಸಿಗಬಹುದಾದ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡುವ ಭರವಸೆ ನೀಡಿದರು.
   ಸಮಾರಂಭದ ಉದ್ಘಾಟನೆಯನ್ನು ನಗರಸಭಾ ಅಧ್ಯಕ್ಷೆ ಬಸಮ್ಮ ರಾಮಣ್ಣ ಹಳ್ಳಿಗುಡಿ ನೆರವೇರಿಸಿ ಚಿತ್ರಕಲಾ, ವ್ಯಂಗ್ಯಚಿತ್ರ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಿದರು.  ಸಮಾರಂಭದ ಅಧ್ಯಕ್ಷತೆಯನ್ನು ಮುಖ್ಯ ಶಿಕ್ಷಕರಾದ ಕರಿಬಸಪ್ಪ ಪಲ್ಲೇದ್ ವಹಿಸಿದ್ದರು. ಮುಖ್ಯಅತಿಥಿಗಳಾಗಿ ಶಾಲೆಯ ಎಸ್.ಡಿ.ಎಂ.ಸಿ ಕಮೀಟಿ ಅಧ್ಯಕ್ಷ ಪರಮಾನಂದ ಯಾಳಗಿ, ಹಿರಿಯ ಪತ್ರಕರ್ತ ಎಂ.ಸಾದಿಕ್ ಅಲಿ, ವೀರ ಕನ್ನಡಿಗ ಸಂಘದ ಅಧ್ಯಕ್ಷ ಶಿವಾನಂದ ಹೊದ್ಲೂರ್, ಛಾಯಾಗ್ರಾಹಕ ಕೃಷ್ಣ ಸೊರಟೂರ, ವ್ಯಂಗ್ಯಚಿತ್ರಕಾರ ಬದರಿ ಪುರೋಹಿತ್ ಸಹ ಶಿಕ್ಷಕರಾದ ತಾಹೇರಾ ಬೇಗಂ, ಶೈಲಜಾ ಹಲಗಲಿ, ಶೋಭಾ ಗಡಾದ್ ಇನ್ನಿತರರು ಪಾಲ್ಗೊಂಡಿದ್ದರು.
  ಇದೇ ಸಂದರ್ಭದಲ್ಲಿ ನಗರಸಭೆಯ ನೂತನ  ಅಧ್ಯಕ್ಷೆ, ಉಪಾಧ್ಯಕ್ಷರು ಸೇರಿದಂತೆ  ರಾಷ್ರ್ಟೀಯ ಪ್ರಶಸ್ತಿ ಪುರಸ್ಕೃತ ಶ್ರೀನಿವಾಸ ಗುಪ್ತಾ ಮತ್ತು ಛಾಯಾಚಿತ್ರ, ವ್ಯಂಗ್ಯಚಿತ್ರಗಾರರಿಗೆ ಮತ್ತು ಓಂ ಸೀಡ್ಸ್ ಸಂಸ್ಥೆಯ ಮುಖ್ಯಸ್ಥರಿಗೆ ಸನ್ಮಾನಿಸಲಾಯುತು. ಆರಂಭದಲ್ಲಿ ಶಾಲಾ ವಿದ್ಯಾರ್ಥಿನಿ ಮಹಾದೇವಿ ಪ್ರಾರ್ಥಿಸಿದರೆ ಸಹಶಿಕ್ಷಕಿ ಶ್ರೀಮತಿ ವಿ.ಮಂಜುಳಾರವರು ಸರ್ವರನ್ನು ಸ್ವಾಗತಿಸಿದರು. ಚಿತ್ರಕಲಾ ಶಿಕ್ಷಕ ವೀರಯ್ಯ ಒಂಟಿಗೋಡಿಮಠ ಪ್ರಾಸ್ತಾವಿಕವಾಗಿ ಮಾತನಾಡಿದರು ಹಿರಿಯ ಸಹ ಶಿಕ್ಷಕ ಜಯರಾಜ್ ಬೂಸದ್ ಕಾರ್ಯಕ್ರಮ ನಿರೂಪಿಸಿದರು ಮತ್ತು ಇನ್ನೋರ್ವ ಸಹ ಶಿಕ್ಷಕ ಗೋಪಾಲ್‌ರಾವ್ ಗುಡಿ ಕೊನೆಯಲ್ಲಿ ವಂದಿಸಿದರು.

Advertisement

0 comments:

Post a Comment

 
Top