PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ: ಮಾ: ೨೮: ಸುಮಾರು ೧೬ ವರ್ಷಗಳಿಂದ ಕೇವಲ ದಿನಕ್ಕೆ ೫೦ ರೂಪಾಯಿ ಕೂಲಿಗೆ ದಿನವಿಡಿ ಕೆಲಸ ನಿರ್ವಹಿಸುತ್ತಿರುವ ಅಕ್ಷರ ದಾಸೋಹ ಯೋಜನೆಯಡಿ ಕೆಲಸ ನಿರ್ವಹಿಸುವ, ಲಕ್ಷಾಂತರ ಮಹಿಳಾ ಉದ್ಯೋಗಿಗಳು, ತಮ್ಮ ಕೂಲಿಯನ್ನು ಹೆಚ್ಚಿಸುವಂತೆ, ತಮ್ಮನ್ನು ಖಾಯಂಗೊಳಿಸುವಂತೆ ಒತ್ತಾಯಿಸಿ. ಸುಮಾರು ವರ್ಷಗಳಿಂದ ಪ್ರತಿಭಟಿಸುತ್ತಾ ಬಂದರೂ, ಈ ಬಡ ಮಹಿಳೆಯರ ಹೋರಾಟದ ಬಗ್ಗೆ ಕಿಂಚಿತ್ತು ಕಾಳಜಿ ವಹಿಸದ ಮಹಿಳಾ ವಿರೋಧಿ ಸರಕಾರದ ವಿರೋಧ ಬಿಸಿಯೂಟ ತಯಾರಕರು ಕೊಪ್ಪಳ ನಗರದ ಅಶೋಕ ವೃತ್ತದಲ್ಲಿ ಪ್ರತಿಭಟನೆ ನಡೆಸಿ ೨-ಗ್ರೇಡ್ ತಹಶೀಲ್ದಾರ ಯು. ನಾಗರಾಜ ಅವರ ಮೂಲಕ ಶಿಕ್ಷಣ ಸಚಿವ ರತ್ನಾಕರ ಕಿಮ್ಮನೆ ಅವರಿಗೆ ಮನವಿ ಪತ್ರ ಸಲ್ಲಿಸಿ, ಮೆರವಣಿಗೆ ಮೂಲಕ ಕೇಂದ್ರಿಯ ಬಸ್ ನಿಲ್ದಾಣದ ಎದುರಿನ ಕನಕದಾಸ ವೃತ್ತಕ್ಕೆ ತೆರಳಿ ಶಿಕ್ಷಣ ಸಚಿವ ರತ್ನಾಕರ ಕಿಮ್ಮನೆಯವರ ಪ್ರತಿಕೃತಿ ದಹಿಸಿ ಪ್ರತಿಭಟಿಸಿದರು. 

ಪಕ್ಷ ಬದಲಾದಂತೆ, ವ್ಯಕ್ತಿ ಬದಲಾದಂತೆ, ಸರಕಾರದ ಮಹಿಳಾ ವಿರೋಧಿ ಧೋರಣೆಯಲ್ಲಿ ಯಾವುದೇ ರೀತಿಯ ಬದಲಾವಣೆಗಳು ಆಗಲಿಲ್ಲ. ಸರಾಯಿ ಗುಂಗಿನಲ್ಲಿರುವ ರಾಜ್ಯದಲ್ಲಿನ ಕಾಂಗ್ರೆಸ್ ಸರಕಾರವು ತಮ್ಮ ಚೊಚ್ಚಲ ಬಜೆಟಿನಲ್ಲಿ ಬಿಸಿಯೂಟ ತಯಾರಕರ ಗೌರವಧನ ಹೆಚ್ಚಳದ ಬಗ್ಗೆ ಪ್ರಸ್ತಾಪಿಸದೆ ಇರುವದು ಖೇದಕರ ಸಂಗತಿ. ತಮ್ಮ ಗೌರವಧನವನ್ನು ಹೆಚ್ಚಿಸುವಂತೆ ಇಂದು ಪ್ರತಿಭಟನೆ ನಡೆಸುತ್ತಿರುವ ಮಹಿಳೆಯರ ಕೂಗಿಗೆ ಸರಕಾರವು ಸ್ಪಂದಿಸದಿದ್ದಲ್ಲಿ ಹೋರಾಟವನ್ನು ತೀವ್ರಗೊಳಿಸಲಾಗುವದೆಂದು ಸಂಘಟನೆಯು ಎಚ್ಚರಿಸಿದೆ. 

ಬೇಡಿಕೆಗಳು:- ಬೆಲೆ ಏರಿಕೆಗೆ ಅನುಗುಣವಾಗಿ ಬಿಸಿಯೂಟ ತಯಾರಕರ ಪ್ರೋತ್ಸಾಹ ಧನವನ್ನು ರೂ. ೧೦,೦೦೦/- ಗಳಿಗೆ ಹೆಚ್ಚಿಸಬೇಕು. ಜೊತೆಗೆ ಅಗತ್ಯತೆಗೆ ಅನುಗುಣವಾಗಿ ಮನೆ ಬಾಡಿಗೆ ಹಣವನ್ನು ಕೂಡಾ ಪಾವತಿಸಬೇಕು, ನಿವೃತ್ತಿ ವೇತನವನ್ನು ಜಾರಿಗೆ ತರಬೇಕು, ಬಿಸಿಯೂಟ ತಯಾರಕ ಮಹಿಳೆಯರನ್ನು ಬದಲಾಯಿಸಲು ಕೆಲವಡೆ ಕೆಲವರು ಅನಗತ್ಯವಾಗಿ ದೌರ್ಜನ್ಯ ಮಾಡುತ್ತಿದ್ದು, ಸರಕಾರವು ಅಂಥಹ ಕಿಡಿಗೇಡಿಗಳ ವಿರುದ್ಧ ಕ್ರಮಕೈಗೊಂಡು ಮಹಿಳೆಯರು ನೆಮ್ಮದಿಯಿಂದ ಕೆಲಸ ಮಾಡಲು ಅವಕಾಸ ಮಾಡಿಕೊಡಬೇಕು, ಬಿಸಿಯೂಟ ತಯಾರಕ ಮಹಿಳೆಯರಿಗೆ ಸೇವಾ ಭದ್ರತೆಯನ್ನು ಒದಗಿಸಬೇಕು, ಬಿಸಿಯೂಟ ತಯಾರಕ ಮಹಿಳೆಯರನ್ನು ಕೆಲಸದಿಂದ ಬಿಡಿಸಿ ರಾಜ್ಯಾದ್ಯಂತ ಅಕ್ಷರ ದಾಸೋಹ ಯೋಜನೆಯನ್ನು ಇಸ್ಕಾನ್ ಸಂಸ್ಥೆಗೆ ಹಾಗೂ ಇತರೆ ಸ್ವಯಂ ಸೇವಾ ಸಂಸ್ಥೆಗಳಿಗೆ ವಹಿಸುವುದನ್ನು ಸರ್ಕಾರ ಕೂಡಲೇ ಕೈ ಬಿಡಬೇಕು, ಸಮಾನ ಕೆಲಸಕ್ಕೆ ಸಮಾನ ವೇತನ, ಕನಿಷ್ಟ ಕೂಲಿ ಜಾರಿಗೆ ತರಬೇಕು, ಬಿಸಿಯೂಟ ಕಾರ್ಯಕರ್ತರಿಗೆ ಆರೋಗ್ಯ ವಿಮೆ ಜಾರಿಗೆ ತರಬೇಕು, ಅಡುಗೆ ತಯಾರಿಸುವವಾಗ ಸಿಲಿಂಡರ್ ಅಥವಾ ಕುಕ್ಕರ್ ಅನಾಹುತ ಸಂಭವಿಸಿದಲ್ಲಿ ಸೂಕ್ತಪರಿಹಾರ ಕೊಡಬೇಕು, ಬಿಸಿಯೂಟ ಕಾರ್ಯಕರ್ತರಿಗೆ ೧ ವರ್ಷಕ್ಕೆ ಹೆಚ್ಚುವರಿ ೧೦ ದಿನಗಳ ಸಂಬಳ ಸಹಿತ ರಜಾ ಕೊಡಬೇಕು, ಮುಖ್ಯ ಅಡುಗೆಯವರಿಗೆ ಬಿಸಿಯೂಟ ಯೋಜನೆಯಡಿ ಅಡುಗೆ/ಮನೆ ದಾಸ್ತಾನು ಕೊಠಡಿ ನಿರ್ಮಿಸಿಕೊಡಬೇಕು, ರಾಜ್ಯಾದ್ಯಂತ ಇರುವ (ಅನುದಾನ ರಹಿತ) ಖಾಸಗಿ ಶಾಲೆಗಳಿಗೂ ಅಕ್ಷರ ದಾಸೋಹ ಯೋಜನೆಯನ್ನು ವಿಸ್ತರಿಸಬೇಕು, ಇತರ ಇಲಾಖೆಗಳಿಗೆ ನೇಮಕಾತಿ ನಡೆದ ಸಂದರ್ಭದಲ್ಲಿ ಅರ್ಹತೆಗೆ ಅನುಗುಣವಾಗಿ ಬಿಸಿಯೂಟ ತಯಾರಕರಿಗೆ ಅದ್ಯತೆ ನೀಡಬೇಕು, ಬಿಸಿಯೂಟ ತಯಾರಕರಿಗೆ ವೈದ್ಯಕೀಯ, ಸಮವಸ್ತ್ರ, ಅಂತ್ಯೋದಯ ಕಾರ್ಡ, ಆಶ್ರಯ ನಿವೇಶನ, ಆಶ್ರಯ ಮನೆ ಹೀಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು.

ಬಿಸಿಯೂಟ ತಯಾರಕರ ಒಕ್ಕೂಟದ ಜಿಲ್ಲಾ ಸಂಚಾಲಕ ಬಸವರಾಜ ಶೀಲವಂತರ, ಜಿಲ್ಲಾಧ್ಯಕ್ಷ ಪುಷ್ಪಾ ಮೇಸ್ತ್ರಿ, ಕಾರ್ಯದರ್ಶಿ ಕಮಲಾದೇವಿ ದೊಡ್ಡಮನಿ, ನನ್ನುಸಾಬ ನೀಲಿ, ಮಕಬೂಲ್ ರಾಯಚೂರ, ಶಿವಪ್ಪ ಹಡಪದ, ಗಾಳೆಪ್ಪ ಮುಂಗೋಲಿ, ಎಸ್.ಎ.ಗಫಾರ್, ದೇವಕ್ಕ ಎಲಿಗಾರ, ರಾಜೇಶ್ವರಿ, ಪಿ.ಯು.ಸಿ.ಎಲ್. ಜಿಲ್ಲಾಧ್ಯಕ್ಷ, ವಿಠ್ಠಪ್ಪ ಗೋರಂಟ್ಲಿ, ಎ.ಐ.ಎಸ್.ಎಫ್., ತಾಲೂಕಾ ಸಂಚಾಲಕ ಎಮ್.ಡಿ.ಗೌಸ್ ನೀಲಿ ಮುಂತಾದವರು ಪಾಲ್ಗೊಂಡಿದ್ದರು, 


Advertisement

0 comments:

Post a Comment

 
Top