ಬೆಂಗಳೂರು, : ವಚನ ಸಾಹಿತ್ಯ ಕರ್ನಾಟಕದ ಬಹುದೊಡ್ಡ ಸಾಂಸ್ಕøತಿಕ ಸಂಪತ್ತು. 12ನೆಯ ಶತಮಾನದಲ್ಲಿ ನಡೆದ ಸಾಮಾಜಿಕ, ಧಾರ್ಮಿಕ ಚಳವಳಿಯ ಫಲವಾಗಿ ಅಭಿವ್ಯಕ್ತಿಗೊಂಡ ಈ ವಚನಸಾಹಿತ್ಯವು ಸಮಾಜದ ಎಲ್ಲ ವರ್ಗಗಳ ವಿಚಾರ, ಚಿಂತನೆಗಳ ಫಲವಾಗಿದೆ. ಕನ್ನಡ ಭಾಷಿಕಶಕ್ತಿಯ ವಿವಿಧ ಆಯಾಮಗಳನ್ನು; ಸಾಹಿತ್ಯ ಸಂಗೀತದ ಸಾಮರಸ್ಯವನ್ನು ಮೆರೆದಿರುವ ದಾಸ ಸಾಹಿತ್ಯವು ಕನ್ನಡ ಸಾಹಿತ್ಯಕ್ಕೆ ಜಾಗತಿಕ ಮಹತ್ವವನ್ನು ತಂದುಕೊಟ್ಟಿದೆ.
ಇಂತಹ ಅಪಾರ ಹಾಗೂ ವೈವಿಧ್ಯಮಯವಾದ ಸಮಗ್ರ ವಚನ ಹಾಗೂ ದಾಸ ಸಾಹಿತ್ಯದ ಯೋಜನೆಯಲ್ಲಿ ಸುಮಾರು 249 ಜನ ವಚನಕಾರರ, ಸುಮಾರು 21,674 ವಚನಗಳನ್ನು ಸಂಗ್ರಹಿಸಲಾಗಿದೆ. ಸಮಗ್ರ ದಾಸ ಸಾಹಿತ್ಯದ 142ದಾಸರ ಸುಮಾರು 16,337 ಕೀರ್ತನೆಗಳನ್ನು ಸಂಗ್ರಹಿಸಲಾಗಿದೆ. ಇವುಗಳಿಂದ ಆಯ್ದ 500 ಕೀರ್ತನೆಗಳನ್ನು ಮತ್ತು ಆಯ್ದ 1000 ವಚನಗಳನ್ನು ವಿವಿಧ ಧಾಟಿಗಳಲ್ಲಿ ರಾಗ ಸಂಯೋಜಿಸಿ, ನಾಡಿನ ಹೆಸರಾಂತ ಗಾಯಕರಿಂದ ಹಾಡಿಸಿ, ಧ್ವನಿ ಮುದ್ರಿಸಿ ಅಂತರ್ಜಾಲಕ್ಕೆ ಅಳವಡಿಸಿರುವ ಮಾಹಿತಿಯನ್ನು ಪರಿಷ್ಕರಿಸಿ ಬಿಡುಗಡೆ ಮಾಡಲಾಗುತ್ತಿದೆ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆಯು ಪ್ರಕಟಿಸುತ್ತಿರುವ ಎಲ್ಲಾ ಪುಸ್ತಕಗಳನ್ನು ಮೊಬೈಲ್‍ನಲ್ಲಿ News Hunt App ಮೂಲಕ ಇ-ಬುಕ್ ಮಾದರಿಯಲ್ಲಿ ಮೊಬೈಲ್‍ನಲ್ಲಿ ಮತ್ತು ವಿಕಿಪಿಡಿಯಾದಲ್ಲೂ ಅಳವಡಿಸಿ ಓದುಗರಿಗೆ ಉಚಿತವಾಗಿ ಕನ್ನಡ ಸಾಹಿತ್ಯವನ್ನು ಒದಗಿಸಲಾಗುತ್ತಿದ್ದು, ದಿನಾಂಕ:01.03.2015ರಂದು ಸಂಜೆ 6.00 ಗಂಟೆಗೆ ಮಾನ್ಯ ಮುಖ್ಯಮಂತ್ರಿಯವರ ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಸಮಗ್ರ ವಚನ ಮತ್ತು ದಾಸ ಸಾಹಿತ್ಯದ ಪರಿಷ್ಕøತ ವೆಬ್‍ಸೈಟ್, ಮೊಬೈಲ್‍ನಲ್ಲಿ ಪುಸ್ತಕಗಳ ಓದು (ಇ-ಬುಕ್), ವಿಕಿಪಿಡಿಯಾದಲ್ಲಿ ಇಲಾಖಾ ಪ್ರಕಟಣೆಗಳ ಅಳವಡಿಕೆ ಹಾಗೂ ಇಲಾಖೆಯ ಪುಸ್ತಕಗಳ ಲೋಕಾರ್ಪಣೆಯನ್ನು ಮಾನ್ಯ ಮುಖ್ಯಮಂತ್ರಿಗಳು ನೆರವೇರಿಸಲಿದ್ದಾರೆ. ಈ ಸಂದರ್ಭದಲ್ಲಿ ಇಲಾಖೆಯ ಮಾನ್ಯ ಸಚಿವರಾದ ಶ್ರೀಮತಿ ಉಮಾಶ್ರೀಯವರು ಉಪಸ್ಥಿತರಿರುತ್ತಾರೆ.
ಸಮಗ್ರ ವಚನ ಮತ್ತು ದಾಸ ಸಾಹಿತ್ಯದ ಮಾಹಿತಿಯನ್ನು kannadasiri.org ಮೂಲಕ, ಮೊಬೈಲ್‍ನಲ್ಲಿ News Hunt App ನ್ನು ಡೌನ್ ಲೋಡ್ ಮಾಡಿಕೊಂಡು bitlly.com/gokbooks ಮೂಲಕ ಮತ್ತು ವಿಕಿಪಿಡಿಯಾದಲ್ಲಿ Newshunt Ebooks ಮೂಲಕ ಇಲಾಖೆಯ ಪುಸ್ತಕಗಳನ್ನು ಉಚಿತವಾಗಿ ಓದಬಹುದಾಗಿರುತ್ತದೆ .
0 comments:
Post a Comment