ಕೊಪ್ಪಳ : ಕೊಪ್ಪಳ ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ವೇತನವು ಪ್ರತಿ ತಿಂಗಳು ಸಕಾಲಕ್ಕೆ ಪಾವತಿಯಾಗುತ್ತಿಲ್ಲ. ಈಗಾಗಲೆ ಪೆಭ್ರುವರಿ ತಿಂಗಳು ಮುಗಿಯುತ್ತಾ ಬಂದರು ಜನೇವರಿ ತಿಂಗಳ ವೇತನ ಪಾವತಿಯಾಗಿಲ್ಲ. ಪತ್ರ ಸಂಖ್ಯೆ ಸಿ೩(೫) ಪ್ರಾ.ಶಿ.ವಿ.ಭಾ. ೫೨ ೨೦೦೧-೦೨, ದಿನಾಂಕ ೦೭-೧೦-೨೦೦೨ ರ ಪ್ರಕಾರ ತಿಂಗಳ ಪ್ರಾರಂಭದ ದಿನವೇ ಶಿಕ್ಷಕರ ಸಂಬಳ ಕುರಿತು ಆದೇಶ ವಿದ್ದರೂ ಸಕಾಲಕ್ಕೆ ಸಂಬಳ ಸಿಗುತ್ತಿಲ್ಲ. ಆದ್ದರಿಂದ ಮಾರ್ಚ ೫ ರ ಒಳಗಾಗಿ ಜನೇವರಿ ಮತ್ತು ಪೇಬ್ರುವರಿ ತಿಂಗಳ ವೇತನವು ಪಾವತಿಯಾಗಬೇಕು. ಆಗದಿದ್ದಲ್ಲಿ ಬಿ.ಇ.ಓ ಕಛೇರಿ ಮುಂದೆ ಧರಣಿ ಕೈಗೊಳ್ಳಲು ತಾಲೂಕ ಶಿಕ್ಷಕರ ಸಂಘ ನಿರ್ಧರಿಸಿದ್ದು ಇದರ ಮನವಿಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ ಪೂಜಾರ ರವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣಬಸವನಗೌಡ ಪಾಟೀಲರು ಶಂಭುಲಿಂಗನಗೌಡ ಪಾಟೀಲ ಹಲಗೇರಿ ಇವರನ್ನು ಒಳಗೊಂಡ ಜಿಲ್ಲಾ ಪದಾಧಿಕಾರಿಗಳು ಶಿಕ್ಷಕರ ವೇತನದ ಕುರಿತು ಮುಖ್ಯಮಂತ್ರಿಗಳು ಹಾಗೂ ಶಿಕ್ಷಣ ಮಂತ್ರಿಗಳ ಹತ್ತಿರ ಚರ್ಚಿಸಿರುವುದಾಗಿ ತಿಳಿಸಿದರು.
ತಾಲೂಕ ಅಧ್ಯಕ್ಷರಾದ ಸುರೇಶ ಅರಕೇರಿ, ಜಿಲ್ಲಾ ಉಪಾಧ್ಯಕ್ಷರಾದ ಮಂಜುನಾಥ ಬಿ , ಪ್ರಧಾನ ಕಾರ್ಯದರ್ಶಿಯಾದ ಪ್ರಾಣೇಶ ಪೂಜಾರ, ಪದಾಧಿಕಾರಿಗಳಾದ ಹೊಳಿಬಸಯ್ಯ, ಪೂರ್ಣಿಮಾ ಟಿ, ಶರಣಮ್ಮ ಪಾಟೀಲ, ದೇವರಾಜ, ಪರಸಪ್ಪ ಕಂಬಳಿ, ಗವಿಸಿದ್ದಪ್ಪ.ಕೆ, ಕೋಟ್ರಪ್ಪ ಗಡಗಿ, ಉಪಸ್ಥಿತರಿದ್ದರೆಂದು ತಾಲೂಕ ಸಂಘಟನಾ ಕಾರ್ಯದರ್ಶಿ ಬಸವರಾಜ ಕಮಲಾಪೂರ, ತಿಳಿಸಿದ್ದಾರೆ.
0 comments:
Post a Comment
Click to see the code!
To insert emoticon you must added at least one space before the code.