ತಹಶೀಲ ಕಛೇರಿಯ ಮುಂಭಾಗದಲ್ಲಿ ಧರಣಿ ನಡೆಸಿ ತಹಶೀಲ್ದಾರ ಪುಟ್ಟರಾಮಯ್ಯ ಅವರ ಮೂಲಕ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಮನವಿ ಅರ್ಪಿಸಲಾಯಿತು. ನಂತರ ಪ್ರತಿಭಟನಾ ಮೆರವಣಿಗೆಯೂ ರಾಷ್ಟ್ರೀಯ ಹೆದ್ದಾರಿ ಮೂಲಕ ಅಶೋಕ ವೃತ್ತ ಬಳಸಿಕೊಂಡು ಹೊಸ ಬಸ್ ನಿಲ್ದಾಣದ ಎದುರಿನ ಕನಕದಾಸ ವೃತ್ತದಲ್ಲಿ ರಸ್ತೆ ತಡೆ ನಡೆಸಲಾಯಿತು.
ಯುಪಿಎ ಸರ್ಕಾರದಲ್ಲಿ ರಾಜ್ಯಸಭಾ ಪಿಟೇಶನ್ ಸಮಿತಿ, ಕರ್ನಾಟಕ ಅಡ್ಮಿನೆಸ್ಟ್ರೀಟೀವ್ ಟ್ರಿಬ್ಯೂನಲ್ ೧೯೯೬ರಲ್ಲಿ, ೪೪ನೇ ಭಾರತೀಯ ಕಾರ್ಮಿಕ ಸಮ್ಮೇಳನಗಳು ಶಿಫಾರಸ್ಸು ೨೦೧೩ರಲ್ಲಿ ನೀಡಿದ್ದು, ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯನ್ನು ಕೆಲಸಗಾರೆಂದು/ಕಾರ್ಮಿಕರೆಂದು ಪರಿಗಣಿಸಿ, ಅವರ ಮೂಲ ಸೌಲಭ್ಯಗಳನ್ನು ಹೆಚ್ಚು ಮಾಡುವಂತೆ ಶಿಫಾರಸ್ಸು ಮಾಡಿವೆ. ಆದರೆ ಅಧಿಕಾರಿದಲ್ಲಿರುವ ಸರ್ಕಾರಗಳು ಈ ಶಿಪಾರಸ್ಸುಗಳನ್ನು ಮೂಲೆಗೆ ತಳ್ಳಿ ಮಹಿಳಾ ವಿರೋಧಿ ಧೋರಣೆಗಳನ್ನು ಅನುಸರಿಸುತ್ತಾ ಉದ್ಯೋಗಿಗಳನ್ನು ಕಸಕ್ಕಿಂತ ಕಡೆಯಾಗಿ ಕಾಣುತ್ತಿವೆ.. ತೀರ ಕಡಿಮೆ ಕೂಲಿ ನೀಡಿ ದಿನವಿಡಿ ದುಡಿಸಿಕೊಳ್ಳುತ್ತಿದ್ದಾರೆ. ಇದನ್ನು ಖಂಡಿಸಿ ಅಂಗನವಾಡಿ ಉದ್ಯೋಗಿಗಳನ್ನು ಸರ್ಕಾರಿ ನೌಕರರೆಂದು ಪರಿಗಣಿಸುವಂತೆ ಒತ್ತಾಯಿಸಿ ಇಂದು ಚಳುವಳಿಯನ್ನು ಹಮ್ಮಿಕೊಳ್ಳಲಾಗಿದೆ.
ಬೇಡಿಕೆಗಳು
* ಮಿಷನ್ ಮೋಡ್‌ನ ಅಪಾಯಕಾರಿ ಶಿಫಾರಸ್ಸುಗಳು : ಇದು ಅಂಗನವಾಡಿ ಉದ್ಯೋಗಿಗಳಿಗೆ ಮಾರಕವಾಗಿದ್ದು, ಇದರಲ್ಲಿ ಕಾರ್ಯಕರ್ತೆಯರ, ಸಹಾಯಕಿಯರ ಖಾಯಮಾತಿ, ಸೇವಾನಿಯಮಾವಳಿ ಮತ್ತು ಶಾಸನಬದ್ಧ ವೇತನ ಕುರಿತಂತೆ ಎಲ್ಲೂ ಪ್ರಸ್ತಾಪಿಸಿರುವದಿಲ್ಲ. ಇದರಲ್ಲಿ ಸಹಾಯಕಿಯರ ಮುಂಬಡ್ತಿ ಕುರಿತಂತೆ ೩೫ ವಯಸ್ಸಯನ್ನು ನಿಗದಿಪಡಿಸಿರುವದನ್ನು ಕೈ ಬಿಡಬೇಕು. ಇದು ಒಟ್ಟಾರೆ ಅಂಗನವಾಡಿ ಕೇಂದ್ರಗಳನ್ನು ಖಾಸಗಿಕರಣಗೊಳಿಸುವ ಸಂಚು ಇದಾಗಿದ್ದು, ಇದನ್ನು ಸಂಘಟನೆಯು ಬಲವಾಗಿ ವಿರೋಧಿಸುತ್ತದೆ.
* ಕನಿಷ್ಟ ವೇತನ ಜಾರಿ ಬರಲಿ :
* ವಿಶೇಷ ಪಿಂಚಣಿ ಯೋಜನೆ ರೂಪಿಸಿ
ಪಿಂಚಣಿ ಯೋಜನೆಗೆ ಒಳಪಡದೇ ಈಗಾಗಲೇ ನಿವೃತ್ತಿಯಾಗಿರುವ ಕಾರ್ಯಕರ್ತೆಯರು ಮತ್ತು ಸಹಾಯಕಿಯರುಗಳಿಗೆ ಕೊಟ್ಟಿರುವ ಇಡುಗಂಟು ಏನೇನು ಸಾಲಯದು, ಪರಿಣಾಮವಾಗಿ ಬೀದಿಪಾಲಾಯಾಗಿದ್ದಾರೆ. ಅದಂತಹವಗೆ ಹಾಗೂ ಮುಂದೆ ನಿವೃತ್ತಿಯಾಗಲಿರುವರಿಗೆ ರೂಪಾಯಿ ೨ ಲಕ್ಷ ಇಡುಗಂಟಾಗಿ ಕೊಡಬೇಕು ಹಾಗೂ ಅವರುಗಳಿಗೆ ವಿಶೇಷ ಪಿಂಚಣಿ ಯೋಜನೆಯಡಿ ಬೆಲೆ ಏರಿಕೆಗೆ ಪಿಂಚಿಣಿಯನ್ನು ನೀಡಬೇಕು.
* ವೈದ್ಯಕೀಯ ವೆಚ್ಚ ಭರಿಸಬೇಕು : ರಾಜ್ಯದಲ್ಲಿ ಕೆಲಸ ನಿರ್ವಹಿಸುವ ಅಂಗನವಾಡಿ ಕಾರ್ಯಕರ್ತೆಯರು ತೀರ ಬಡವರಿದ್ದು, ಸರ್ಕಾರವು ನೀಡುವ ಗೌರವ ಧನದಿಂದ ಜೀವನ ನಿರ್ವಹಣೆ ಮಾಡುವುದು ಕಷ್ಟವಾಗುತ್ತದೆ. ಹೀಗಾಗಿ ಸರ್ಕಾರವು ಅಂಗನವಾಡಿ ಉದ್ಯೋಗಗಳಿಗೆ ಬರುವ ಕಾಯಿಲೆಗಳಿಗೆ ಸಂಬಂರ್ದಪಟ್ಟ ಆ ಚಿಕಿತ್ಸೆಯ ಒಟ್ಟು ಹಣವನ್ನು ಸರ್ಕಾರವೇ ಭರಿಸಬೇಕು. ಹಾಗೂ ಸೇವಾ ಅವಧಿಯಲ್ಲಿ ಅಂಗನವಾಡಿ ಉದ್ಯೋಗಗಳು ಆಕಸ್ಮಿಕ ಅಪಘಾತಗಳಿಗೆ ತೊಂದರೆಗೆ ಒಳಗಾದರೆ ಅದಕ್ಕೆ ಸರ್ಕಾರವು ಸೂಕ್ತ ಪರಿಹಾರವನ್ನು ನೀಡಬೇಕು.
* ಸೇವಾ ಬದ್ರತೆ : ಅಂಗನವಾಡಿ ಉದ್ಯೋಗಿಗಳಿಗೆ ಕೆಲಸ ನಿರ್ವಹಿಸುವಲ್ಲಿ ಅನೇಕು ಅಡೆತಡೆಗಳಿದ್ದು, ಕೆಲವರು ಅನಗತ್ಯವಾಗಿ ಅಂಗನವಾಡಿ ಉದ್ಯೋಗಿಗಳ ಮೇಲೆ ದೌಜನ್ಯ ಮಾಡುತ್ತಿದ್ದು, ದೂರು ಸಲ್ಲಿಸುದಿದ್ದು, ಇದನ್ನೇ ಅಧಿಕಾರಿಗಳು ನೆಪವಾಗಿಯಿಟ್ಟುಕೊಂಡು ಕೆಲವಡೆ ಅಂಗನವಾಡಿ ಉದ್ಯೋಗಿಗಳನ್ನು ಕೆಲಸದಿಂದ ತಗೆದಿರುತ್ತಾರೆ. ಇದರಿಂದ ಅವರನ್ನು ರಕ್ಷಿಸಲು ಸರ್ಕಾರವು ಸೇವಾಭದ್ರತೆಯನ್ನು ಒದಗಿಸಬೇಕು.
* ಮೂಲಭೂತ ಸೌಲಭ್ಯ ಒದಗಿಸಿ : ಅಂಗನವಾಡಿ ಉದ್ಯೋಗಿಗಳಿಗೆ ಸರ್ಕಾರವು ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಡಬೇಕು. ವಿಮಾಯೋಜನೆ, ಆಶ್ರಯಜಾಗೆ, ಆಶ್ರಯಮನೆ, ಪಡಿತರ ಚೀಟಿ, ಭಾಗ್ಯಲಕ್ಷ್ಮೀಯೋಜನೆಯಂತ ಮೂಲಭೂತ ಸೌಲಭ್ಯಗಳನ್ನು ಅಂಗನವಾಡಿ ಉದ್ಯೋಗಿಗಳಿಗಾಗಿ ಜಾರಿಗೊಳಿಸಬೇಕು.
* ಬೆಲೆ ಏರಿಕೆಗೆ ಅನುಗುಣವಾಗಿ ಸರ್ಕಾರವು ಕಾರ್ಯಕರ್ತೆಯರಿಗೆ ೧೫ ಸಾವಿರ ರೂಪಾಯಿಯಂತೆ, ಸಹಾಯಕಿಯರಿಗೆ ೧೦ ಸಾವಿರ ರೂಪಾಯಿಯಂತೆ ಗೌರವ ಧನವನ್ನು ಹೆಚ್ಚಸಬೇಕು ಹಾಗೂ ಇಡೀ ಗೌರವಧನವನ್ನು ಏಕಕಾಲಕ್ಕೆ ಪಾವತಿಸಬೇಕು. ಆಯಾ ತಿಂಗಳ ೫ನೇ ತಾರೀಕಿನಯೊಳಗಾಗಿ ಗೌರವಧನವನ್ನು ಪಾವತಿಸಬೇಕು. ಖಾಸಗಿಕರಣವನ್ನು ಸರ್ಕಾರವು ಕೈಬಿಡಬೇಕು.
ರಾಜ್ಯಮಟ್ಟದಲ್ಲಿ ನಡೆಯುತ್ತಿರುವ ಅಂಗನವಾಡಿ ಉದ್ಯೋಗಿಗಳ ಈ ಹೋರಾಟವನ್ನು ಸರ್ಕಾರವು ಗಭೀರವಾಗಿ ಪರಿಗಣಿಸಿ ಬೇಡಿಕೆಗಳನ್ನು ತಕ್ಷಣ ಈಡೇರಿಸಬೇಕೆಂದು ಸಂಘಟನೆಯು ಒತ್ತಾಯಿಸುತ್ತದೆ.
ಈ ಪ್ರತಿಭಟನೆಯ ನೇತೃತ್ವದಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಒಕ್ಕೂಟದ ಜಿಲ್ಲಾ ಸಂಚಾಲಕ ಬಸವರಾಜ ಶೀಲವಂತರ್, ಎಸ್ ಎ ಗಫಾರ .ಮರಿಬಸಪ್ಪ, ಸುಲೋಚನಾ, ಅಕ್ಕಮ್ಮ ಪಟ್ಟಣಶೆಟ್ಟಿ, ಅಕ್ಕನಾಗಮ್ಮ, ಶೈಲಜಾ ಸಸಿಮಠ, ಮಂಜುಳಾ, ಹನುಮಕ್ಕ, ಚೆನ್ನಮ್ಮ ನಾಗಣ್ಣನವರ, ಭಾರತಿ, ನನ್ನುಸಾಬ ನೀಲಿ, ಗಾಳೇಪ್ಪ ಮುಂಗೋಲಿ, ಮಖಬೂಲ ರಾಯಚೂರ, ಶಿವಪ್ಪ ಹಡಪದ, ವಹಾಬಸಾಬ ರಾಟಿ ಮತ್ತಿತರರು ವಹಿಸಿದ್ದರು,
0 comments:
Post a Comment