PLEASE LOGIN TO KANNADANET.COM FOR REGULAR NEWS-UPDATES

 ಬೆಂಗಳೂರು,   : ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ 2014 ರ ಜೀವಮಾನ ಸಾಧನೆ ಪ್ರಶಸ್ತಿಯನ್ನು ಖ್ಯಾತ ವಿಜ್ಞಾನಿ ಪದ್ಮಭೂಷಣ ಡಾ. ವಾಸುದೇವ್ ಕೆ. ಅತ್ರೆ, ರಕ್ಷಣಾ ಸಚಿವರ ನಿವೃತ್ತ ವೈಜ್ಞಾನಿಕ ಸಲಹೆಗಾರರು ಹಾಗೂ ಭಾರತ ಸರ್ಕಾರದ ರಕ್ಷಣಾ ಸಂಶೋದನೆ ಮತ್ತು ಅಭಿವೃದ್ಧಿ ಸಂಸ್ಥೆಯ ನಿವೃತ್ತ ಮಹಾನಿರ್ದೇಶಕರು ಇವರಿಗೆ ಫೆಬ್ರವರಿ 5 ರಂದು ಆಕ್ಸಫರ್ಡ್ ವಿಜ್ಞಾನ ಕಾಲೇಜು, ಹೆಚ್.ಎಸ್.ಆರ್. ಲೇಔಟ್‍ನಲ್ಲಿ ಆಯೋಜಿಸಿರುವ ಅಕಾಡೆಮಿಯ ಏಳನೇ ಸಮ್ಮೇಳನದ ಉದ್ಫಾಟನಾ ಸಮಾರಂಭದಲ್ಲಿ ಪ್ರದಾನ ಮಾಡಲಾಗುವುದು. ಪ್ರಶಸ್ತಿಯು ಸ್ವರ್ಣ ಪದಕ, ಸನ್ಮಾನ ಪತ್ರ ಹಾಗೂ ಐವತ್ತು ಸಾವಿರ ರೂ. ನಗದನ್ನು ಒಳಗೊಂಡಿದೆ ಎಂದು ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ   ತಿಳಿಸಿದೆ.

Advertisement

0 comments:

Post a Comment

 
Top